ಪರೀಕ್ಷೆಯಲ್ಲಿ ಫೇಲ್​; ಬೈಗುಳ ತಪ್ಪಿಸಿಕೊಳ್ಳಲು ಅಪಹರಣದ ನಾಟಕವಾಡಿದ ಬಾಲಕಿ

police

ಇಂದೋರ್​: ಪರೀಕ್ಷೆಯಲ್ಲಿ ಅನುತ್ತೀರ್ಣಳಾದ ಕಾರಣ ಮನೆಯಲ್ಲಿ ಬೈಯುತ್ತಾರೆ ಎಂಬ ಕಾರಣಕ್ಕೆ 17ವರ್ಷದ ಬಾಲಕಿ ಒಬ್ಬಳು ಪಾಲಕರ ಬಳಿ ಕಟ್ಟುಕತ್ತೆ ಹೇಳುವ ಮೂಲಕ ಸಿಕ್ಕಿಹಾಕಿಕೊಂಡಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ನಡೆದಿದೆ.

ಬಿಎ ವ್ಯಾಸಂಗ ಮಾದುತ್ತಿರುವ ಬಾಲಕಿಯೂ ಪರೀಕ್ಷೆಯಲ್ಲಿ ಫೇಲ್​ ಆದ ಕಾರಣ ತನ್ನನ್ನು ಅಪಹರಣ ಮಾಡಿದ್ದಾರೆ ಎಂದು ಅಪರಿಚಿತ ನಂಬರ್​ನಿಂದ ಕರೆ ಮಾಡಿ ತನ್ನ ಪಾಲಕರಿಗೆ ಹೇಳಿದ್ದಳು.

ಅಪಹರಣದ ನಾಟಕ

17 ವರ್ಷದ ಬಾಲಕಿಯೂ ಇಂದೋರ್​ನ ಖಾಸಗಿ ಕಾಲೇಜ್​ ಒಂದರಲ್ಲಿ ಬಿಎ ವ್ಯಾಸಂಗ ಮಾಡುತ್ತಿದ್ದಾಳೆ. ಮೇ 12 ಶುಕ್ರವಾರದಂದು ಪರೀಕ್ಷೆಯ ರಿಸಲ್ಟ್​ ಹೊರಬಿದಿದ್ದು ಇದರಲ್ಲಿ ಅನುತ್ತೀರ್ಣಳಾಗಿದ್ದಾಳೆ.

ತಾನು ಪರೀಕ್ಷೆಯಲ್ಲಿ ಫೇಲ್​ ಆಗಿರುವ ವಿಚಾರ ಮನೆಯವರಿಗೆ ತಿಳಿದರೆ ಎಲ್ಲಿ ಬೈಯುತ್ತಾರೋ ಎಂದು ಬೆದರಿದ ಬಾಲಕಿ ಶುಕ್ರವಾರ ಕಾಲೇಜಿನಿಂದ ಮನೆಗೆ ವಾಪಸ್​ ಆಗುತ್ತಿದ್ದ ವೇಳೆ ತನ್ನನ್ನು ಯಾರೋ ಅಪಹರಿಸಿದ್ದಾರೆ ಎಂದು ಅಪರಿಚಿತರ ನಂಬರ್​ನಿಂದ ಕರೆ ಮಾಡಿ ತನ್ನ ಪಾಲಕರಿಗೆ ಹೇಳಿದ್ದಾಳೆ.

ಇದನ್ನು ನಂಬಿದ ಪಾಲಕರು ತಕ್ಷಣವೇ ಹತ್ತಿರದ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ಧಾರೆ ಮತ್ತು ತಮ್ಮ ಮಗಳನ್ನು ಹುಡುಕಿಕೊಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.

MP Police

ಇದನ್ನೂ ಓದಿ: ಖಡ್ಗ ಪ್ರದರ್ಶಿಸಿ ಯತ್ನಾಳ್​ ಗೆಲುವು ಸಂಭ್ರಮಿಸಿದ ಬೆಂಬಲಿಗ!

ಮಿಂಚಿನ ಕಾರ್ಯಾಚರಣೆ

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಾಲಕಿಯ ಕಾಣೆಯಾದ ಸ್ಥಳದ ಸುತ್ತಮುತ್ತ ಇರುವ ಸಿಸಿಟಿವಿಗಳನ್ನು ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಆಕೆ ಹೇಳಿರುವುದು ಕಟ್ಟು ಕಥೆ ಎಂದು ಸಾಬೀತಾಗಿದೆ.

ಬಾಲಕಿಯ ಫೋಟೋವನ್ನು ರಾಜ್ಯದ ಬೇರೆ ಬೇರೆ ಪೊಲೀಸ್​ ಠಾಣೆಗಳಿಗೆ ಕಳುಹಿಸಿ ಕೊಟ್ಟಿದ್ಧಾರೆ. ಈ ವೇಳೆ ಉಜ್ಜಯಿನಿಯಿಂದ ಪೊಲೀಸರಿಗೆ ಆಕೆ ಒಂದು ರೆಸ್ಟೋರೆಂಟ್​ನಲ್ಲಿ ಕುಳಿತಿರುವ ಬಗ್ಗೆ ಮಾಹಿತಿ ದೊರೆತ್ತಿದ್ದು ವಶಕ್ಕೆ ಪಡೆದು ಪಾಲಕರಿಗೆ ಒಪ್ಪಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಬಂಗಾಂಗ ಪೊಲೀಸ್​ ಠಾಣಾಧಿಕಾರಿ ರಾಜೇಂದ್ರ ಸೋನಿ ಪರೀಕ್ಷೆಯಲ್ಲಿ ಫೇಲ್​ ಆಗಿರುವ ಕಾರಣ ಮನೆಯಲ್ಲಿ ಬೈಯುತ್ತಾರೆ ಎಂಬ ಕಾರಣಕ್ಕೆ ಬಾಲಕಿ ಅಪಹರಣದ ಕುರಿತು ಕಟ್ಟುಕಥೆಯನ್ನು ಹೇಳಿದ್ದಾಳೆ.

ಆಕೆಯ ಜೊತೆ ಮನೋ ವೈದ್ಯರು ಆಪ್ತ ಸಮಾಲೋಚನೆ ನಡೆಸಿದ್ದು ಈ ರೀತಿ ಮಾಡದಂತೆ ಬುದ್ದಿವಾದ ಹೇಳಿ ಪಾಲಕರಿಗೆ ಒಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

Share This Article

ಹುಡುಗಿಯ ಹೃದಯವನ್ನು ಗೆಲ್ಲುವುದು ಹೇಗೆ..? Chanakya Niti

Chanakya Niti: ಈಗಿನ ಯಾವ ಹುಡುಗಿಯೂ ಹುಡುಗನ ಪ್ರೀತಿಯನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಚಾಣಕ್ಯನು ಪುರುಷನು…

ಕಂಕುಳಿನ ದುರ್ವಾಸನೆಯಿಂದ ಬೇಕಾ ಮುಕ್ತಿ? ಹಾಗಾದ್ರೆ ಈ ಸಿಂಪಲ್ ಟಿಪ್​ ಅನುಸರಿಸಿ, ಆಮೇಲೆ ನೋಡಿ ಚಮತ್ಕಾರ!

Bad Odour: ವಿಪರೀತ ಬೆವರುವುದು ಇಂದು ಅನೇಕರ ಸಮಸ್ಯೆ. ಪ್ರತಿಯೊಬ್ಬರು ಬೆವರುತ್ತಾರೆ. ಆದರೆ, ಎಲ್ಲರೂ ಬೆವರುವ…

ನೋ ಜಿಮ್​, ನೋ ಡಯಟ್​… ಬರೋಬ್ಬರಿ 20 KG ತೂಕ ಇಳಿಕೆ, ಯುವತಿಯ ಆರೋಗ್ಯದ ಗುಟ್ಟು ರಟ್ಟು! Weight Loss

Weight Loss : ಇತ್ತೀಚೆಗೆ ತೂಕ ಇಳಿಕೆ ತುಂಬಾ ಸುಲಭವಾಗಿದೆ. ಏಕೆಂದರೆ, ತೂಕ ಇಳಿಕೆಗೆ ಹಲವು…