More

    ಅತಿಯಾದ ಆತ್ಮವಿಶ್ವಾಸ; ಉಲ್ಟಾ ಹೊಡೆದ ಬಿಜೆಪಿ ಲೆಕ್ಕಾಚಾರ

    ಬೆಂಗಳೂರು: ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಹೇಳಲಾಗಿದ್ದ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್​ ಪಕ್ಷವು ಪ್ರಚಂಡ ದಿಗ್ವಿಜಯ ಸಾಧಿಸುವ ಮೂಲಕ ಹೊಸ ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿದೆ.

    ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಪ್ರಯೋಗಕ್ಕೆ ಮುಂದಾದ ಬಿಜೆಪಿ ಸರಿಯಾಗಿ ಕೈ ಸುಟ್ಟಿಕೊಂಡಿದ್ದು ಈ ಪೈಕಿ 12 ಸಚಿವರು, 56 ಹೊಸಮುಖ, 62 ಹಾಲಿ ಶಾಸಕರಿಗೆ ಮತದಾರ ಸೋಲಿನ ರುಚಿ ತೋರಿಸಿದ್ದಾನೆ.

    ಉಲ್ಟಾ ಹೊಡೆದ ಲೆಕ್ಕಾಚಾರ

    ಟಿಕೆಟ್​ ಹಂಚಿಕೆ ವಿಷಯದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಟ್ಟಿದ್ದ ಬಿಜೆಪಿ ಲೆಕ್ಕಾಚಾರವೆಲ್ಲ ತಲೆ ಕೆಳಗಾಗಿದ್ದು ಈ ಕುರಿತು ರಾಜ್ಯ ನಾಯಕರು ಪರಮಾರ್ಶೆಯಲ್ಲಿ ತೊಡಗಿದ್ದಾರೆ.

    ಬಿಜೆಪಿ ಸರ್ಕಾರದಲ್ಲಿ ಪ್ರಭಾವಿ ಶಾಸಕ ಹಾಗೂ ಸಚಿವರೆಂದು ಗುರುತಿಸಿಕೊಂಡಿದ್ದವರಿಗೂ ಸಹ ಜನ ಸೋಲಿನ ರುಚಿ ತೋರಿಸಿದ್ದು ಈ ಪೈಕಿ ಗೆದ್ದ ಹಾಗೂ ಸೋತವರ ಮಾಹಿತಿ ಹೀಗಿದೆ.

    ಅತಿಯಾದ ಆತ್ಮವಿಶ್ವಾಸ; ಉಲ್ಟಾ ಹೊಡೆದ ಬಿಜೆಪಿ ಲೆಕ್ಕಾಚಾರ

    ಇದನ್ನೂ ಓದಿ: ಮುಖ್ಯಮಂತ್ರಿ ಸ್ಥಾನಕ್ಕೆ ಬಸವರಾಜ್​ ಬೊಮ್ಮಾಯಿ ರಾಜೀನಾಮೆ

    12 ಸಚಿವರಿಗೆ ಶಾಕ್​

    ಮಾಜಿ ಸಿಎಂ ಬಿಎಸ್​ವೈ ಹಾಗೂ ನಿರ್ಗಮಿತ ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಪ್ರಭಾವಿ ಸಚಿವರೆಂದು ಗುರುತಿಸಿಕೊಂಡಿದವರಿಗೆ ಜನತೆ ಸೋಲಿಸುವ ಮೂಲಕ ಶಾಕ್​ ನೀಡಿದ್ದಾರೆ.

    ಗೋವಿಂದ ಕಾರಜೋಳ, ಜೆ.ಸಿ. ಮಾಧುಸ್ವಾಮಿ, ಬಿ.ಸಿ. ಪಾಟೀಲ್​, ಶಂಕರ್​ ಪಾಟೀಲ್​ ಮುನೇನಕೊಪ್ಪ, ಹಾಲಪ್ಪ ಆಚಾರ್​​, ಶ್ರೀರಾಮುಲು, ಡಾ.ಕೆ. ಸುಧಾಕರ್​, ವಿ.ಸೋಮಣ್ಣ(ಸ್ಪರ್ಧಿಸಿದ ಎರಡು ಕಡೆ ಸೋಲು), ಕೆ.ಸಿ. ನಾರಾಯಣಗೌಡ, ಬಿ.ಸಿ. ನಾಗೇಶ್​, ಎಂ.ಟಿ.ಬಿ ನಾಗರಾಜ್​ ಸೋತ ಪ್ರಮುಖ ಸಚಿವರು.

    75ರ ಪೈಕಿ ಗೆದ್ದ 18 ಮಂದಿ

    ಬಿಜೆಪಿ ಕೇಂದ್ರ ಸಂಸದೀಯ ಮಂಡಳಿಯೂ ಈ ಭಾರಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 75 ಹೊಸ ಮುಖಗಳಿಗೆ ಮಣೆ ಹಾಕಿದ್ದು ಈ ಪೈಕಿ 19 ಮಂದಿ ಗೆದ್ದು ಬೀಗಿದ್ದು 57 ಮಂದಿಗೆ ಜನಮನ್ನಣೆ ದೊರೆತ್ತಿಲ್ಲ.

    ಈ ಪೈಕಿ ಬಿ.ವೈ. ವಿಜಯೇಂದ್ರ, ಮಂಜುಳಾ ಲಿಂಬಾವಳಿ, ಮಹೇಶ್​ ಟೆಂಗಿನಕಾಯಿ, ನಿಖಿಲ್​ ಕತ್ತಿ, ವಿಠಲ್​ ಹಲಗೇಕರ್​, ಗುರುರಾಜ್​ ಗಂಟಿಹೊಳೆ, ಗುರ್ಮೆ ಸುರೇಶ್​ ಶೆಟ್ಟಿ, ಕಿರಣ್​ ಕುಮಾರ್​ ಕೊಡ್ಗಿ, ಯಶ್​ಪಾಲ್​ ಸುವರ್ಣ, ಭಾಗೀರಥಿ ಮುರುಳ್ಯ, ಹುಲ್ಲಳ್ಳಿ ಸುರೇಶ್​, ಸಿಮೆಂಟ್​ ಮಂಜು, ಟಿ.ಎ. ಶ್ರೀವತ್ಸ, ಧೀರಜ್​ ಮುನಿರಾಜು, ಜಗದೀಶ್​ ಗುಡಗಂಟಿ, ಡಾ. ಶೈಲೇಂದ್ರ ಬೆಲ್ದಾಳೆ, ಡಾ. ಚಂದ್ರು ಲಮಾಣಿ ಹಾಗೂ ಚೆನ್ನಬಸಪ್ಪ ಗೆದ್ದು ಬೀಗಿದ ಹೊಸ ಮುಖಗಳು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts