More

    ಸುರಪುರ ಬಿಜೆಪಿ ಅಭ್ಯರ್ಥಿ ಪರಾಜಿತ; ಕೋಮಾಗೆ ಜಾರಿದ ಮುಖಂಡ

    ಸುರಪುರ: ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಹೇಳಲಾಗಿದ್ದ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್​ ಪಕ್ಷವು ಪ್ರಚಂಡ ದಿಗ್ವಿಜಯ ಸಾಧಿಸಿ ನೂತನ ಸರ್ಕಾರ ರಚನೆ ಮಾಡುವ ಹುಮ್ಮಸ್ಸಿನಲ್ಲಿದೆ.

    ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷರೊಬ್ಬರು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ಧಾರೆ.

    ಕುಸಿದು ಬಿದ್ದ ಮುಖಂಡ

    ಶೋರಾಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನರಸಿಂಹ ನಾಯಕ್​(ರಾಜು ಗೌಡ) ಕಾಂಗ್ರೆಸ್​ನ ರಾಜ ವೆಂಕಟಪ್ಪ ನಾಯಕ್​ ವಿರುದ್ಧ 25,223 ಸಾವಿರ ಮತಗಳ ಅಂತರದಲ್ಲಿ ಸೋಲುಂಡಿದ್ದಾರೆ.

    BJP Leader

    ರಾಜುಗೌಡ ಸೋಲಿನ ಬೆನ್ನಲ್ಲೇ ಆಘಾತಕೊಳ್ಳಗಾದ ಅವರ ಬೆಂಬಲಿಗ ಗದ್ದೆಪ್ಪ ಪೂಜಾರಿ ಸ್ಥಳದಲ್ಲೇ ಕುಸಿದು ಬಿದ್ದು ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ.

    ಇದನ್ನೂ ಓದಿ: ಬಿಜೆಪಿಯ ಪರಾಜಿತ ಅಭ್ಯರ್ಥಿಗೆ ಲಘು ಹೃದಯಾಘಾತ

    ಕೋಮಾಗೆ ಜಾರಿದ ಮುಖಂಡ

    ಕೂಡಲ್ಲೇ ಅವರನ್ನು ಹತ್ತಿರದಲ್ಲಿದ್ದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತ್ತಾದರೂ ಗದ್ದೆಪ್ಪ ಪೂಜಾರಿ ಅವರು ಕೋಮಾಗೆ ಜಾರಿದ್ದಾರೆಂದು ವೈದ್ಯರು ತಿಳಿಸಿದ್ದಾರೆ. ಕುಟುಂಬಸ್ಥರು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ಧಾರೆ.

    ತಮ್ಮ ಪಕ್ಷದ ಮುಖಂಡ ಗದ್ದೆಪ್ಪ ಪೂಜಾರಿ ಕೋಮಾಗೆ ಜಾರಿದ ವಿಷಯ ತಿಳಿದು ಆಸ್ಪತ್ರೆಗೆ ಭೇಟಿ ನೀಡಿದ ಮಾಜಿ ಶಾಸಕ ರಾಜು ಗೌಡ ಕುಟುಂಬಸ್ಥರ ಬಳಿ ಅವರ ಆರೋಗ್ಯ ವಿಚಾರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts