ಗಂಡ ಶೂಟಿಂಗ್​ನಲ್ಲಿರುವಾಗ ಆರತಿ ಅಲ್ಲಿಗೆ ಹೋಗ್ತಿದ್ರು: ಜಯಂ ರವಿ ವಿಚ್ಛೇದನ ಪಡೆಯಲು ಇದೇ ಕಾರಣವಂತೆ!

Ravi Mohan
Published on

Ravi Mohan: ತಮಿಳು ಚಿತ್ರರಂಗದ ಸ್ಟಾರ್​ ನಟರಲ್ಲಿ ಒಬ್ಬರಾದ ರವಿ ಮೋಹನ್ ಅಲಿಯಾಸ್​ ಜಯಂ ರವಿ ತಮ್ಮ ಪತ್ನಿ ಆರತಿಯಿಂದ ಬೇರೆಯಾಗಿರುವ ಸುದ್ದಿ ಎಲ್ಲರಿಗೂ ಗೊತ್ತೇ ಇದೆ.

ಕೌಟುಂಬಿಕ ಭಿನ್ನಾಭಿಪ್ರಾಯಗಳಿಂದ ಇಬ್ಬರು ಬೇರೆಯಾಗಿದ್ದಾರೆ. ಇದರ ನಡುವೆ ರವಿ ಮೋಹನ್​ ಆರೋಪಕ್ಕೆ ಆರತಿಯ ತಾಯಿ ನೀಡಿರುವ ಪ್ರತಿಕ್ರಿಯೆಗಳು ಸಾಮಾಜಿಕ ಜಾಲತಾಣದಕಲ್ಲಿ ಚರ್ಚೆಯ ವಿಷಯವಾಗಿದೆ. ಇನ್ನೊಂದೆಡೆ ರವಿ ಅವರು ಮತ್ತು ಗಾಯಕಿ ಕೆನಿಶಾ ಫ್ರಾನ್ಸಿಸ್ ಜತೆ ಸಂಬಂಧದಲ್ಲಿದ್ದಾರೆ ಎಂಬ ವದಂತಿಗಳು ಸಹ ಹರಡಿವೆ. ಇದೆಲ್ಲದರ ನಡುವೆ ಇದೀಗ ಗಾಯಕಿ ಸುಚಿತ್ರಾ, ರವಿ ಮೋಹನ್ ವಿಚ್ಛೇದನದ ಬಗ್ಗೆ ಕೆಲವು ವಿವಾದಾತ್ಮಕ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.

ತಮಿಳು ಯೂಟ್ಯೂಬ್ ಚಾನೆಲ್ ಹಾಲಿವುಡ್ ಎಂಟರ್ಟೈನ್ಮೆಂಟ್​ ನೀಡಿದ ಸಂದರ್ಶನದಲ್ಲಿ ಸುಚಿತ್ರಾ ಅವರು ರವಿ ಮೋಹನ್​ ವೈವಾಹಿಕ ಜೀವನದ ಬಗ್ಗೆ ಮಾತನಾಡಿದ್ದಾರೆ.

ರವಿ ಮೋಹನ್ ಮತ್ತು ಆರತಿ ಬೇರ್ಪಡುವಿಕೆಗೆ ತಮಿಳು ನಟ ಧನುಷ್ ಕಾರಣ ಎಂದು ಸುಚಿತ್ರಾ ವಿಚಿತ್ರ ಆರೋಪ ಮಾಡಿದ್ದಾರೆ. ರವಿ ಮೋಹನ್ ಜೊತೆಗಿನ ವಿವಾಹಕ್ಕೂ ಮೊದಲು ಆರತಿ ಬೇರೆಯವರಾಗಿದ್ದರು. ಮದುವೆಯ ನಂತರ ಅವರಲ್ಲಿ ಸಾಕಷ್ಟು ಬದಲಾವಣೆಗಳಾದವು. ರವಿ ಮೋಹನ್ ಶೂಟಿಂಗ್‌ಗೆ ಹೋದಾಗ ಆರತಿ ಅವರು ಪಾರ್ಟಿಗಳಿಗೆ ಹೋಗುತ್ತಿದ್ದರು. ಅಲ್ಲಿ ಧನುಷ್ ಅವರನ್ನು ಭೇಟಿಯಾಗುತ್ತಿದ್ದರು. ಹೀಗಾಗಿ, ಇಬ್ಬರೂ ಹತ್ತಿರವಾದರು. ಇದೆಲ್ಲವೂ ತಿಳಿದ ನಂತರ, ರವಿ ಮೋಹನ್ ಅವರು ಆರತಿಯೊಂದಿಗಿನ ತನ್ನ ಸಂಬಂಧವನ್ನು ಕೊನೆಗೊಳಿಸಲು ನಿರ್ಧರಿಸಿದರು ಎಂದು ಸುಚಿತ್ರಾ ಆರೋಪ ಮಾಡಿದ್ದಾರೆ.

ಈಗ ಆರತಿ ಮಕ್ಕಳನ್ನು ಬಳಸಿಕೊಂಡು ರವಿ ಮೋಹನ್​ಗೆ ಬೆದರಿಕೆ ಹಾಕುತ್ತಿದ್ದಾಳೆ. ಆರತಿಯನ್ನು ಮಾತ್ರ ಕೈಬಿಡುತ್ತಿದ್ದೇನೆ ಹೊರತು ಮಕ್ಕಳನ್ನಲ್ಲ ಎಂದು ರವಿ ಹೇಳಿದ್ದಾರೆ. ತನ್ನ ಮಕ್ಕಳನ್ನು ನೋಡಲು ಸಹ ಆರತಿ ಬಿಡುತ್ತಿಲ್ಲ. ಆದ್ದರಿಂದ, ಶಾಲೆಗೆ ಬಂದು ಮಕ್ಕಳನ್ನು ನೋಡಲು ಪ್ರಯತ್ನಿಸುತ್ತಿದ್ದಾರೆ. ಇದನ್ನು ತಿಳಿದ ಆರತಿ ಮಕ್ಕಳನ್ನು ಭದ್ರತಾ ಸಿಬ್ಬಂದಿಯೊಂದಿಗೆ ಶಾಲೆಗೆ ಕಳುಹಿಸುತ್ತಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣಗಳ ಮೂಲಕ ಸಹಾನುಭೂತಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ರವಿ ಮೋಹನ್ ಮತ್ತು ಕೆನಿಷಾ ಬಗ್ಗೆ ಕೆಟ್ಟದಾಗಿ ಸುದ್ದಿ ಹರಡಲು ಯೂಟ್ಯೂಬ್ ಚಾನೆಲ್​ಗಳಿಗೆ ಹಣ ಪಾವತಿಸುತ್ತಿದ್ದಾರೆ. ಕೆನಿಶಾ ಮುಗ್ಧೆ. ರವಿ ಮೋಹನ್ ಮತ್ತು ಕೆನಿಷಾ ಈಗ ಪ್ರೀತಿಸುತ್ತಿದ್ದಾರೆ ಎಂದು ಸುಚಿತ್ರ ಗಂಭೀರ ವಿಚಾರಗಳನ್ನು ಹೇಳಿದ್ದಾರೆ.

ಆದರೆ, ಸುಚಿತ್ರಾ ಹೇಳಿದ ಮಾತುಗಳು ಎಷ್ಟರ ಮಟ್ಟಿಗೆ ಸತ್ಯ ಎಂಬುದು ಅನುಮಾನವಾಗಿದೆ. ಏಕೆಂದರೆ, ಈಕೆಯ ವಿವಾದ ಒಂದೆರೆಡಲ್ಲ. ಗಾಯಕಿಗಿಂತ ವಿವಾದದಿಂದಲೇ ಸದ್ದು ಮಾಡಿದ್ದು ಹೆಚ್ಚು. ಒಂದು ಕಾಲದಲ್ಲಿ ಸೆಲೆಬ್ರಿಟಿಗಳ ಅಶ್ಲೀಲ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಇದೇ ಸುಚಿತ್ರಾ, ಕಾಲಿವುಡ್​ ಅಂಗಳದಲ್ಲಿ ತಲ್ಲಣ ಸೃಷ್ಟಿಸಿದ್ದರು.

2017ರಲ್ಲಿ ಸುಚಿತ್ರಾ ಅವರ ಟ್ವಿಟರ್ ಪೇಜ್​ನಿಂದ ಕಾಲಿವುಡ್​ ಸೆಲೆಬ್ರಿಟಿಗಳ ಕೆಲವೊಂದು ಅಶ್ಲೀಲ ವಿಡಿಯೋ ಮತ್ತು ಫೋಟೋಗಳು ಹೊರಬಿದ್ದ ಬಳಿಕ ಭಾರೀ ವಿವಾದವೇ ಸೃಷ್ಟಿಯಾಗಿತ್ತು. ಇದನ್ನು ಸುಚಿ ಲೀಕ್ಸ್ ಪ್ರಕರಣ ಎಂದೇ ಕರೆಯಲಾಗಿದೆ. ಈ ಪ್ರಕರಣ ಭಾರಿ ಸದ್ದು ಮಾಡುತ್ತಿದ್ದಂತೆ ನನ್ನ ಟ್ವಿಟರ್​ ಖಾತೆ ಹ್ಯಾಕ್​ ಆಗಿತ್ತು ಎಂದು ಸುಚಿತ್ರಾ ಸ್ಪಷ್ಟನೆ ನೀಡಿದ್ದರು. ಆದರೆ, ಅದು ಉದ್ದೇಶಪೂರ್ವಕವಾಗಿಯೇ ಲೀಕ್​ ಮಾಡಿದ್ದಾರೆ ಎಂಬ ಮಾತುಗಳು ಸಹ ಕೇಳಿಬಂದಿದ್ದವು. ಕಾಲಿವುಡ್​ ಸೂಪರ್​ ಸ್ಟಾರ್​ ಧನುಷ್​ ಅವರ ಸಹಾಯಕರು ನನ್ನನ್ನು ಕೆಟ್ಟದಾಗಿ ನಡೆಸಿಕೊಂಡರು ಎಂದು ಸುಚಿತ್ರಾ ಆರೋಪಿದ್ದರು. ಅಲ್ಲದೆ, ಧನುಷ್​ ಅವರು ನನಗೆ ಡ್ರಗ್ಸ್​ ನೀಡಿ, ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡುವ ಮೂಲಕ ಕಾಲಿವುಡ್​ ಇಂಡಸ್ಟ್ರಿಯಲ್ಲಿನ ಕಾಸ್ಟಿಂಗ್​ ಕೌಚ್​ ಚರ್ಚೆಯನ್ನು ಮುನ್ನೆಲೆಗೆ ತಂದಿದ್ದರು.

ಟ್ವಿಟರ್​ ಖಾತೆಯಲ್ಲಿ ಧನುಷ್, ಮ್ಯೂಸಿಕ್​ ಡೈರೆಕ್ಟರ್​ ಅನಿರುದ್ಧ್ ಮತ್ತು ನಟಿಯರಾದ ಆಂಡ್ರಿಯಾ ಜೆರೆಮಿಯಾ, ತ್ರಿಷಾ, ಅಮಲಾ ಪೌಲ್​ ಹಾಗೂ ಸಂಚಿತಾ ಶೆಟ್ಟಿ ಅವರ ಕೆಲ ಫೋಟೋಗಳು ಮತ್ತು ವಿಡಿಯೋಗಳು ಜಾಗತಿಕ ಗಮನವನ್ನು ಸೆಳೆದವು. ಈ ಪ್ರಕರಣ ಕಾಲಿವುಡ್​ನಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿ ಮಾಡಿ, ಕೊನೆಗೆ ತಣ್ಣಗಾಯಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net