Ration Rice : ಪ್ರತಿ ಕೆಜಿಗೆ ಕೇವಲ ಒಂದು ರೂಪಾಯಿಗೆ ಮಾರಾಟವಾಗುವ ಅಥವಾ ಸರ್ಕಾರ ಉಚಿತವಾಗಿ ನೀಡುವ ಪಡಿತರ ಅಕ್ಕಿಯನ್ನು ಎಲ್ಲರೂ ಕೀಳಾಗಿ ಕಾಣುತ್ತಾರೆ. ಕೆಲವರು ಈ ಅಕ್ಕಿಯನ್ನು ಖರೀದಿ ಮಾಡಿ ಬಳಸದೇ ಬೀಸಾಡಿರುವ ಉದಾಹರಣೆಗಳೂ ಇವೆ. ಇನ್ನು ಕೆಲವರು ಪ್ರತಿ ತಿಂಗಳು ಸಿಗುವ ಪಡಿತರ ಅಕ್ಕಿಯನ್ನು ಮಾರಾಟ ಮಾಡಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಅಕ್ಕಿಯನ್ನು ಖರೀದಿಸುತ್ತಾರೆ. ಪಡಿತರ ಅಕ್ಕಿಗಿಂತ ಪಾಲಿಶ್ ಮಾಡಿದ ಸಣ್ಣಕ್ಕಿಯೇ ಉತ್ತಮ ಎಂದು ಅನೇಕರು ತಿಳಿದುಕೊಂಡಿದ್ದಾರೆ. ಆದರೆ, ಖಂಡಿತ ತಪ್ಪು. ಪಾಲಿಶ್ ಮಾಡಿದ ಅಕ್ಕಿ ನೋಡಲು ಚೆನ್ನಾಗಿರಬಹುದು. ಆದರೆ, ಪೌಷ್ಠಿಕಾಂಶದ ವಿಚಾರಕ್ಕೆ ಬಂದರೆ ಪಡಿತರ ಅಕ್ಕಿ ಉತ್ತಮವಾದ ಆಯ್ಕೆಯಾಗಿದೆ.
ಪಡಿತರ ಅಕ್ಕಿ ತಿನ್ನುವುದು ದೇಹಕ್ಕೆ ಒಳ್ಳೆಯದಲ್ಲ ಎಂಬ ವದಂತಿಗಳನ್ನು ನೀವು ನಂಬಲೇಬೇಡಿ. ಯಾವುದೇ ಕಾರಣಕ್ಕೂ ಪಡಿತರ ಅಕ್ಕಿಯನ್ನು ಮಾರಾಟ ಮಾಡಬೇಡಿ. ಏಕೆ ಗೊತ್ತಾ? ಪಡಿತರ ಅಕ್ಕಿಯಿಂದ ಹಲವು ಆರೋಗ್ಯ ಪ್ರಯೋಜನಗಳಿವೆ. ಇವುಗಳನ್ನು ತಿನ್ನುವುದರಿಂದ ನಿಮಗೆ ಪೋಷಕಾಂಶಗಳು ಸಮೃದ್ಧವಾಗಿ ಪೂರೈಕೆಯಾಗುತ್ತದೆ.
ರಾಷ್ಟ್ರೀಯ ಕುಟುಂಬ ಸಮೀಕ್ಷಾ ವರದಿಯ ಪ್ರಕಾರ, ಭಾರತದಲ್ಲಿ ಶೇ. 67 ರಷ್ಟು ಮಕ್ಕಳು, ಶೇ. 57 ರಷ್ಟು ಯುವಕರು ಮತ್ತು ಶೇ. 52 ರಷ್ಟು ಗರ್ಭಿಣಿಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಹಾಗಾಗಿ ಪಡಿತರ ಅಕ್ಕಿಯಿಂದ ಮಾಡಿದ ಅನ್ನವನ್ನು ತಿಂದರೆ ವಿಟಮಿನ್ ಸಿಗುವುದಲ್ಲದೆ ರಕ್ತಹೀನತೆ ದೂರವಾಗುತ್ತದೆ. ಅದೇ ರೀತಿ ತೆಳ್ಳಗಿರುವವರು ದಿನನಿತ್ಯ ಇದನ್ನು ತಿಂದರೆ ತೂಕ ಹೆಚ್ಚುತ್ತದೆ. ಕಬ್ಬಿಣ, ಫೋಲಿಕ್ ಆಸಿಡ್ ಮತ್ತು ವಿಟಮಿನ್ ಬಿ12 ಇರುವ ಈ ಅಕ್ಕಿಯನ್ನ ಸರ್ಕಾರ ಪಡಿತರ ಅಂಗಡಿಗಳ ಮೂಲಕ ಜನರಿಗೆ ನೀಡುತ್ತಿದೆ.
ಈ ಅಕ್ಕಿಯಲ್ಲಿ ಕಡಿಮೆ ಕೊಬ್ಬು ಮತ್ತು ಸೋಡಿಯಂ ಅಂಶವೂ ಇದೆ. ಇದು ಬೊಜ್ಜು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪಡಿತರ ಅಕ್ಕಿಯಲ್ಲಿ ಕಾರ್ಬೋಹೈಡ್ರೇಟ್‌ಗಳು ಸಮೃದ್ಧವಾಗಿರುವುದರಿಂದ, ಇದು ದೇಹಕ್ಕೆ ಇಂಧನವಾಗಿ ಕಾರ್ಯನಿರ್ವಹಿಸುತ್ತದೆ. ಅಂದರೆ, ಇದು ದೇಹಕ್ಕೆ ಅಗತ್ಯವಿರುವ ಶಕ್ತಿಯನ್ನು ಒದಗಿಸುತ್ತದೆ. ಮೆದುಳು ಸಾಮಾನ್ಯವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಇನ್ನು ಪಡಿತರ ಅಕ್ಕಿ ಮಧುಮೇಹಿಗಳಿಗೆ ತುಂಬಾನೇ ಒಳ್ಳೆಯದು. ಮಧುಮೇಹ ತಜ್ಞರೇ ಪಡಿತರ ಅಕ್ಕಿಯನ್ನು ಶಿಫಾರಸು ಮಾಡುತ್ತಾರೆ.
ಅಂದಹಾಗೆ ಪೌಷ್ಠಿಕಾಂಶ ಇಲಾಖೆಯ ಅಧಿಕಾರಿಗಳು ಈ ಅಕ್ಕಿಗೆ ಸತು, ವಿಟಮಿನ್ ಎ, ಥಯಾಮಿನ್, ರೆಬೋಫ್ಲೋರಿನ್, ನಿಯಾಸಿನ್ ಮತ್ತು ವಿಟಮಿನ್ ಬಿ 6 ನಂತಹ ವಿಶೇಷ ಪೋಷಕಾಂಶಗಳನ್ನು ಸೇರಿಸಲಾಗುತ್ತದೆ ಎಂದು ಹೇಳಿದ್ದಾರೆ. ಹೀಗಾಗಿ ಪಡಿತರ ಅಕ್ಕಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ರಾತ್ರಿ ಕರುವಿಗೆ ಜನ್ಮ ಕೊಟ್ಟ ಎಮ್ಮೆ: ಬೆಳಗ್ಗೆ ಎದ್ದು ನೋಡಿದಾಗ ಮಾಲೀಕನಿಗೆ ಕಾದಿತ್ತು ಶಾಕ್! Buffalo
ಚಾಣಕ್ಯನ ಪ್ರಕಾರ ನಿಮ್ಮ ಹಣವನ್ನು ಈ ರೀತಿ ಬಳಸಿದರೆ ನಿಮಗೆಂದೂ ದುಡ್ಡಿನ ಕೊರತೆ ಕಾಡುವುದಿಲ್ಲ! Chanakya Niti