ರಾತ್ರಿ ಕರುವಿಗೆ ಜನ್ಮ ಕೊಟ್ಟ ಎಮ್ಮೆ: ಬೆಳಗ್ಗೆ ಎದ್ದು ನೋಡಿದಾಗ ಮಾಲೀಕನಿಗೆ ಕಾದಿತ್ತು ಶಾಕ್​! Buffalo

Buffalo
Published on

Buffalo : ಈ ಪ್ರಕೃತಿಯೇ ವಿಸ್ಮಯಗಳ ಆಗರ. ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ಹೀಗೆ ಯಾರಿಗೂ, ಯಾವ ಕ್ಷೇತ್ರಕ್ಕೂ ನಿಲುಕದ ನಿಗೂಢಗಳು ಅದೆಷ್ಟೋ ಈ ಭೂಮಿಯ ಮೇಲೆ ನಡೆದಿವೆ, ನಡೆಯುತ್ತಲೇ ಇವೆ. ಅವುಗಳ ಪೈಕಿ ಕೆಲವು ಘಟನೆಗಳಿಗೆ ವೈಜ್ಞಾನಿಕ ಮೂಲ ನೀಡಿದರೂ, ಇನ್ನೆಷ್ಟೋ ಘಟನೆಗಳು ಊಹೆಗೂ ಮೀರಿದ್ದೇ ಆಗಿವೆ.

ಇದೀಗ ಮತ್ತೊಂದು ವಿಸ್ಮಯಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಅದೇನೆಂದರೆ, ಎಮ್ಮೆಯೊಂದು ಕಂದು ಬಣ್ಣದ ಕರುವಿಗೆ ಜನ್ಮ ನೀಡಿದ್ದು, ಅದು ನೋಡಲು ಎಮ್ಮೆಗಿಂತ ಥೇಟ್​ ಹಸುವಿನಂತೆ ಕಾಣುತ್ತದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ಈ ವಿಚಿತ್ರ ವಿದ್ಯಮಾನ್ಯವನ್ನು ಕಂಡು ಎಮ್ಮೆಯ ಮಾಲೀಕರು ಸೇರಿದಂತೆ ಇಡೀ ಹಳ್ಳಿಯವರು ದಿಗ್ಭ್ರಮೆಗೊಂಡಿದ್ದಾರೆ. ಎಮ್ಮೆಯ ಬಣ್ಣ ಕಡು ಕಪ್ಪು ಎಂಬುದು ಎಲ್ಲರಿಗೂ ಗೊತ್ತಿದೆ. ಕರು ಹಾಕಿದಾಗ ಅದರ ಬಣ್ಣವು ಕೂಡು ಕಡು ಕಪ್ಪು ಬಣ್ಣದ್ದೇ ಆಗಿರುತ್ತದೆ. ಆದರೆ, ಈ ಕರುವಿನ ಬಣ್ಣ ಮಾತ್ರ ತುಂಬಾ ವಿಭಿನ್ನವಾಗಿದೆ. ಕಂದು ಬಣ್ಣದಲ್ಲಿದ್ದು, ನೋಡಲು ಹಸುವಿನ ಕಾಣುತ್ತಿದೆ.

ರಾತ್ರಿ ಕರು ಹಾಕಿದಾಗ ಯಾರಿಗೂ ಅಷ್ಟೊಂದು ಅಚ್ಚರಿಯಾಗಲಿಲ್ಲ. ಆದರೆ, ಬೆಳಗ್ಗೆ ಕರುವನ್ನು ನೋಡಿದಾಗ ಎಲ್ಲರು ಅಚ್ಚರಿಗೊಂಡಿದ್ದಾರೆ. ಏಕೆಂದರೆ, ಥೇಟ್​ ಹಸುವಿನಂತೆ ಕಾಣುತ್ತಿದೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ಸಮೀಪದ ಗ್ರಾಮಸ್ಥರು ಕರುವನ್ನು ಕಣ್ತುಂಬಿಕೊಳ್ಳಲು ಮುಗಿಬೀಳುತ್ತಿದ್ದಾರೆ. ಅಲ್ಲದೆ, ಸ್ಥಳೀಯ ಜನರ ಬಾಯಿಯಲ್ಲಿ ಎಮ್ಮೆಯ ಕರುವಿನದ್ದೇ ಮಾತಾಗಿದೆ.

ಇನ್ನು ಈ ವಿಚಿತ್ರ ಘಟನೆಯ ಬಗ್ಗೆ ಮಾತನಾಡಿರುವ ಸ್ಥಳೀಯ ಪಶುವೈದ್ಯರು, ಕರುವಿನ ಹಸುವಿನಂತೆ ಕಾಣುತ್ತಿದ್ದರೂ, ಅದು ಎಮ್ಮೆಯ ಲಕ್ಷಣಗಳನ್ನು ಹೊಂದಿದೆ ಎಂದು ಹೇಳಿದ್ದಾರೆ. ದೇಹದ ರಚನೆಗಳು ಎಮ್ಮೆಯಂತೆಯೇ ಇದ್ದು, ಎಮ್ಮೆಯಾಗಿ ಬೆಳೆಯುತ್ತದೆ ಎಂದು ಹೇಳಿದ್ದಾರೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ಕೂಡ ತಮ್ಮ ಹುಬ್ಬೇರಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net