ಕಸದಲ್ಲಿ ಸಿಗುವ ವಸ್ತುಗಳನ್ನು ಮಾರಿ ತಿಂಗಳಿಗೆ 9 ಲಕ್ಷ ರೂ. ಸಂಪಾದಿಸುತ್ತಿದ್ದಾಳೆ 23 ವರ್ಷದ ಯುವತಿ! Garbage

Garbage
Published on: 

Garbage : ಬಳಸದ ವಸ್ತುಗಳನ್ನು ಮಾರಾಟ ಮಾಡಿ ಯಾರಾದರೂ ಶ್ರೀಮಂತರಾಗಲು ಸಾಧ್ಯವೇ? ಚಿಂದಿ ಆಯುವವರನ್ನು ನೋಡಿದಾಗ ಅದು ಸಾಧ್ಯವಿಲ್ಲ ಅನಿಸಬಹುದು. ಆದರೆ, 23 ವರ್ಷದ ಎಲ್ಲ ರೋಸ್ ಹೆಸರಿನ ಯುವತಿ ಕೋಟ್ಯಾಧಿಪತಿಯಾಗಲು ಸಾಧ್ಯವಿದೆ ಎಂದು ಸಾಬೀತುಪಡಿಸಿದ್ದಾರೆ.

ದಿ ಸನ್ ಮಾಧ್ಯಮದ ಪ್ರಕಾರ, ಯುವತಿ ಎಲ್ಲ ರೋಸ್​ ತಮ್ಮ ಮನೆಯಿಂದಲೇ ಆನ್‌ಲೈನ್ ವ್ಯವಹಾರ ನಡೆಸುವ ಮೂಲಕ ಲಕ್ಷಾಂತರ ರೂಪಾಯಿ ಸಂಪಾದಿಸುತ್ತಿದ್ದಾಳೆ. ಟೆಕ್ಸಾಸ್ ಮೂಲದ ಎಲ್ಲ ರೋಸ್ 13ನೇ ವಯಸ್ಸಿನಲ್ಲಿ ಸುಮನ್ನೇ ಸಮಯ ಕಳೆಯುವುದಕ್ಕಾಗಿ ಇದನ್ನು ಪ್ರಾರಂಭಿಸಿದಳು. ಆದರೆ, ಇಂದು ಅದೇ ಅತ್ಯುತ್ತಮ ಬಿಜಿನೆಸ್​ ಆಗಿದೆ.

ನಗರದ ಐಷಾರಾಮಿ ಅಂಗಡಿಗಳ ಮುಂದೆ ಇರುವ ಕಸದ ರಾಶಿಯಿಂದ ಮಾರಾಟವಾಗದ ವಸ್ತುಗಳನ್ನು ಎಲ್ಲ ರೋಸ್​ ಸಂಗ್ರಹಿಸುತ್ತಾಳೆ. ತನಗೆ ಸಿಗುವ ಕೆಲವು ವಸ್ತುಗಳನ್ನು ಆಕೆ ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಾಳೆ. ಅಂತಹ ವಸ್ತುಗಳ ಬೆಲೆ ಸಾವಿರ ರೂಪಾಯಿಗಳಿಂದ ಲಕ್ಷಗಳವರೆಗೂ ಇರುತ್ತದೆ.

ಇತರರು ಎಸೆದ ಉನ್ನತ ದರ್ಜೆಯ ಬ್ರಾಂಡೆಡ್ ವಸ್ತುಗಳನ್ನು ಸಂಗ್ರಹಿಸಿ ಆನ್‌ಲೈನ್‌ನಲ್ಲಿ ಮಾರಾಟ ಮಾಡಿ ಹಣ ಗಳಿಸುತ್ತಿರುವುದಾಗಿ ಸ್ವತಃ ಎಲ್ಲ ರೋಸ್​ ಹೇಳಿಕೊಂಡಿದ್ದಾರೆ. ಅಂತಹ ವಸ್ತುಗಳಲ್ಲಿ ಕೆಲವು ದುಬಾರಿ ವಸ್ತುಗಳು ಸಹ ಎಲ್ಲ ರೋಸ್​ಗೆ ಸಿಕ್ಕಿವೆ. ಇಲ್ಲಿಯವರೆಗೆ ಸಂಗ್ರಹಿಸಿದ ಅತ್ಯಂತ ದುಬಾರಿ ವಸ್ತುಗಳೆಂದರೆ 50,000 ರೂ. ಮೌಲ್ಯದ ಡೈಸನ್ ಏರ್‌ವ್ರ್ಯಾಪ್ ಮತ್ತು 44,000 ರೂ. ಮೌಲ್ಯದ ವ್ಯಾಲೆಂಟಿನೋ ಟ್ರೇನರ್‌ಗಳು.

ಒಂದು ಕಾಲದಲ್ಲಿ ಸಮಯ ಉಳಿಸುವ ಸಾಧನವಾಗಿದ್ದ ಈ ವ್ಯವಹಾರವು ಈಗ ಒಂದು ವ್ಯವಹಾರವಾಗಿ ಮಾರ್ಪಟ್ಟಿದೆ. ಎಲ್ಲ ರೋಸ್​ ಆಫ್-ಸೀಸನ್ ಅಥವಾ ಹಬ್ಬದ ಸಮಯದಲ್ಲಿ ತನ್ನ ಆನ್‌ಲೈನ್ ವ್ಯವಹಾರದಿಂದ ತಿಂಗಳಿಗೆ 45,000 ರೂ. ಗಳಿಸುತ್ತಾಳೆ. ಆದರೆ ಹಬ್ಬದ ಸಮಯದಲ್ಲಿ ಆಕೆ ತಿಂಗಳಿಗೆ 9 ಲಕ್ಷ ರೂ.ಗಳವರೆಗೆ ಗಳಿಸುತ್ತಾಳೆ. ಯುವತಿ ತಾನು ಮಾರಾಟ ಮಾಡುವ ವಸ್ತುಗಳ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾಳೆ. (ಏಜೆನ್ಸೀಸ್​)