Non Vegetarian Food : ಮಾಂಸಾಹಾರ ಬಹುತೇಕರ ಪ್ರಿಯವಾದ ಆಹಾರ. ಬೇರೆ ಯಾವುದನ್ನು ಬೇಕಾದರೂ ಬಿಡುತ್ತೇನೆ ಆದರೆ, ಒಂದು ತುಂಡು ಮಾಂಸವಿಲ್ಲದೆ ಇರಲಾಗದು ಎಂದು ಅನೇಕರು ಹೇಳಿರುವುದನ್ನು ಕೇಳಿದ್ದೇವೆ. ಅದರಲ್ಲೂ ಭಾನುವಾರ ಬಂತೆಂದರೆ ಮಾಂಸಾಹಾರ ತಿನ್ನಲೇಬೇಕು. ಒಂದು ಕಾಲದಲ್ಲಿ ಜನರು ಭಾನುವಾರ ಮಾತ್ರ ತಿನ್ನುತ್ತಿದ್ದರು. ಆದರೀಗ ದಿನ ಯಾವುದೇ ಇರಲಿ, ಕೋಳಿ, ಮಟನ್, ಮೀನು ಮತ್ತು ಸೀಗಡಿಯಂತಹ ಮಾಂಸಾಹಾರಿ ಆಹಾರವನ್ನು ಸೇವಿಸುತ್ತಿದ್ದಾರೆ. ಕೆಲವರಿಗಂತೂ ಒಂದು ಪೀಸ್ ಮಾಂಸ ತಿನ್ನದೇ ಇದ್ದರೆ ಆ ದಿನ ಪೂರ್ಣ ಅನಿಸುವುದೇ ಇಲ್ಲ.
ಮಾಂಸಾಹಾರ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎಂಬುದು ನೂರಕ್ಕೆ ನೂರರಷ್ಟು ಸತ್ಯ. ಆದರೆ, ಪ್ರತಿದಿನ ಮಾಂಸವನ್ನು ತಿನ್ನುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಹೆಚ್ಚಾಗಬಹುದು. ಯಾರು ಹೆಚ್ಚೆಚ್ಚು ಮಾಂಸವನ್ನು ತಿನ್ನುತ್ತಾರೋ ಅವರು ತಮ್ಮ ಆರೋಗ್ಯದ ಮೇಲೆ ಕಾಳಜಿ ವಹಿಸಬೇಕು. ಏನಾದರೂ ಆಗಲಿ ತಿನ್ನುತ್ತೇನೆ ಎಂದರೆ ಆರೋಗ್ಯ ಸಮಸ್ಯಗಳಿಂದ ತುಂಬಾ ತೊಂದರೆ ಅನುಭವಿಸಬೇಕಾಗುತ್ತದೆ.
ನಿರಂತರವಾಗಿ ಮಾಂಸಾಹಾರವನ್ನು ಸೇವಿಸುವುದರಿಂದ ದೇಹದ ಮೇಲೆ ಯಾವೆಲ್ಲ ಆರೋಗ್ಯ ಸಮಸ್ಯೆಗಳು ಪರಿಣಾಮ ಬೀರಬಹುದು ಎಂಬುದರ ಕುರಿತು ನಾವೀಗ ವಿವರವಾಗಿ ತಿಳಿದುಕೊಳ್ಳೋಣ.
ಪ್ರತಿದಿನ ಮಾಂಸಾಹಾರ ಸೇವಿಸುವುದರಿಂದ ಹೃದಯ ಕಾಯಿಲೆಯ ಅಪಾಯ ಹೆಚ್ಚಾಗುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಆದ್ದರಿಂದ, ಪ್ರತಿದಿನ ಮಾಂಸಾಹಾರ ಸೇವಿಸುವುದನ್ನು ತಪ್ಪಿಸಿ. ಮಾಂಸಾಹಾರದಲ್ಲಿ ಸ್ಯಾಚುರೇಟೆಡ್ ಕೊಬ್ಬು ಅಧಿಕವಾಗಿರುತ್ತದೆ. ಇದನ್ನು ಪ್ರತಿದಿನ ತಿನ್ನುವುದರಿಂದ ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡ ಸಮಸ್ಯೆಗಳು ಹೆಚ್ಚಾಗಬಹುದು.
ಅಂದಹಾಗೆ ಮಾಂಸಾಹಾರವು ಜೀರ್ಣವಾಗಲು ತುಂಬಾ ಸಮಯ ತೆಗೆದು ತೆಗೆದುಕೊಳ್ಳಬಹುದು. ಪದೇಪದೆ ತಿನ್ನುವುದರಿಂದ ಜೀರ್ಣಕ್ರಿಯೆ ಕಷ್ಟವಾಗಬಹುದು. ಇದರ ಪರಿಣಾಮ ಹೊಟ್ಟೆಯಲ್ಲಿ ಗ್ಯಾಸ್, ಮಲಬದ್ಧತೆ ಮತ್ತು ಅಜೀರ್ಣತೆ ಉಂಟಾಗಬಹುದು. ಅಲ್ಲದೆ, ಹೊಟ್ಟೆಯ ತೊಂದರೆಗೂ ಇದು ಕಾರಣವಾಗಬಹುದು.
ಅತಿಯಾಗಿ ಕೆಂಪು ಮಾಂಸವನ್ನು ತಿನ್ನುವುದರಿಂದ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ. ಆದ್ದರಿಂದ ನೀವು ಸಾಧ್ಯವಾದಷ್ಟು ಕೆಂಪು ಮಾಂಸವನ್ನು ತಪ್ಪಿಸಬೇಕು. ಇನ್ನು ಪ್ರತಿದಿನ ಮಾಂಸವನ್ನು ತಿನ್ನುವುದರಿಂದ ದೇಹದಲ್ಲಿನ ಹಾರ್ಮೋನುಗಳ ಅಸಮತೋಲನ ಸಹ ಉಂಟಾಗುತ್ತದೆ. ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ಮಾಂಸಾಹಾರವು ಅಗತ್ಯಕ್ಕಿಂತ ಹೆಚ್ಚಿನ ಪ್ರೋಟೀನ್ ಅನ್ನು ಹೊಂದಿರುತ್ತದೆ. ಆದ್ದರಿಂದ, ಹೆಚ್ಚು ಪ್ರೋಟೀನ್ ತಿನ್ನುವುದು ಮೂತ್ರಪಿಂಡಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೆಚ್ಚು ಮಾಂಸಾಹಾರ ಸೇವಿಸುವುದು ಯಕೃತ್ತಿನಲ್ಲಿ ಹೆಚ್ಚುವರಿ ಒತ್ತಡ ಮತ್ತು ಕೊಬ್ಬಿಗೆ ಕಾರಣವಾಗಬಹುದು. ಇದರಿಂದ ಯಕೃತ್ತಿನ ಸಮಸ್ಯೆಗಳಿಗೆ ಕಾರಣವಾಗಬಹುದು.
ಹೀಗಾಗಿ ಯಾವುದನ್ನೇ ಆಗಲಿ ಅತಿಯಾಗಿ ತಿನ್ನದೇ ಮಿತಿಯಾಗಿ ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಮಿತ ಭೋಜನ ಸುಖೀ ಜೀವನ ಎನ್ನುವುದನ್ನು ಸದಾ ನೆನಪಿನಲ್ಲಿಡಿ.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ಕಸದಲ್ಲಿ ಸಿಗುವ ವಸ್ತುಗಳನ್ನು ಮಾರಿ ತಿಂಗಳಿಗೆ 9 ಲಕ್ಷ ರೂ. ಸಂಪಾದಿಸುತ್ತಿದ್ದಾಳೆ 23 ವರ್ಷದ ಯುವತಿ! Garbage
ನೀನು ತುಂಬಾ ಸ್ವೀಟ್ ಅಂತ ಯಾರಾದ್ರೂ ನಿಮಗೆ ಹೇಳ್ತಾರಾ? ಹಾಗಾದ್ರೆ ನಿಮಗಿದು ತಿಳಿದಿರಲೇಬೇಕು! Relationships