ರಶ್ಮಿಕಾರಿಂದ ‘ಸಿಕಂದರ್​’ ಚಿತ್ರೀಕರಣ ನಿಲ್ಲಿಸಿದ ಚಿತ್ರತಂಡ; ಕಾರಣ ಹೀಗಿದೆ.. | Rashmika Mandanna

blank

ಮುಂಬೈ: ಕನ್ನಡದ ಕಿರಿಕ್​ ಪಾರ್ಟಿ ಸಿನಿಮಾದ ಮೂಲಕ ನಟನೆಗೆ ಪದಾರ್ಪಣೆ ಮಾಡಿದ ನಟಿ ರಶ್ಮಿಕಾ ಮಂದಣ್ಣ(Rashmika Mandanna) ಅವರನ್ನು ಪ್ಯಾನ್​ ಇಂಡಿಯಾ ಸ್ಟಾರ್​ ಎಂದರೆ ತಪ್ಪಲ್ಲ. ಕನ್ನಡದ ಬಳಿಕ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡ ರಶ್ಮಿಕಾ ಬಾಲಿವುಡ್​ನಲ್ಲೂ ತನ್ನ ಅದೃಷ್ಟ ಪರೀಕ್ಷೆ ಮಾಡಿ ಗೆದ್ದಿದ್ದಾರೆ. ಇತ್ತೀಚೆಗೆ ಬಿಡುಗಡೆಗೊಂಡ ಪುಷ್ಟ 2; ದಿ ರೂಲ್​ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ಸಖತ್​ ಸೌಂಡ್ ಮಾಡ್ತಿದೆ.

blank

ಇದನ್ನು ಓದಿ:ಆಸ್ಕರ್​​ ಪ್ರಶಸ್ತಿ ಭಾರತದ ವಿರೋಧಿ; ಬಾಲಿವುಡ್​​ ಕ್ವೀನ್​ ಕಂಗನಾ ಹೀಗೇಳಿದ್ದೇಕೆ? | Kangana Ranaut

ಅಂದ್ಹಾಗೆ ಬಾಲಿವುಡ್​ ಭಾಯಿಜಾನ್​ ಸಲ್ಮಾನ್​ ಖಾನ್​ ಜತೆ ಸಿಕಂದರ್​ ಸಿನಿಮಾದಲ್ಲಿ ರಶ್ಮಿಕಾ ಕಾಣಿಸಿಕೊಳ್ಳುತ್ತಿರುವುದು ಗೊತ್ತೆ ಇದೆ. ಜನವರಿ 10ರಂದು ಸಿನಿಮಾ ಕೊನೆಯ ಶೆಡ್ಯೂಲ್​​ ಅನ್ನು ಪ್ರಾರಂಭಿಸಲು ಯೋಜಿಸಲಾಗಿತ್ತು. ಆದರೆ ರಶ್ಮಿಕಾ ಅವರ ಕಾರಣದಿಂದಾಗಿ ಸಿನಿಮಾ ಚಿತ್ರೀಕರಣವನ್ನು ನಿಲ್ಲಿಸಲಾಗಿದೆ.

ಹೌದು ರಶ್ಮಿಕಾ ಮಂದಣ್ಣ ಜಿಮ್​ನಲ್ಲಿ ವರ್ಕೌಟ್​ ಮಾಡುವಾಗ ಗಾಯಗೊಂಡಿದ್ದಾರೆ ಎಂದು ನಟಿಯ ಮೂಲಗಳು ತಿಳಿಸಿವೆ. ಬಿಡುವಿಲ್ಲದೆ ತನ್ನ ಕೆಲಸದಲ್ಲಿ ನಿರತರಾಗಿರುವ ರಶ್ಮಿಕಾ ಮಂದಣ್ಣ ಅವರಿಗೆ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದಾಗಿ ಸಿಕಂದರ್​​ ಚಿತ್ರದ ಚಿತ್ರೀಕರಣವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

ಅದೃಷ್ಟವಶಾತ್ ದೊಡ್ಡ ಅಘಾತವಾಗಿಲ್ಲ. ವಿಶ್ರಾಂತಿ ಪಡೆಯುತ್ತಿರುವ ರಶ್ಮಿಕಾ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಸಿನಿಮಾ್​ ಸೆಟ್​​ಗೆ ಶೀಘ್ರದಲ್ಲೇ ಮರಳಲಿದ್ದಾರೆ ಎಂದು ಹೇಳಿದ್ದಾರೆ. ಮಾರ್ಚ್​ಗೆ ಸಿನಿಮಾ ರಿಲೀಸ್ ಂಆಡಲು ಟೈಮ್ ಲೈನ್ ಇದ್ದರೂ ನಿಗದಿತ ಸಮಯಕ್ಕೆ ಶೂಟಿಂಗ್ ಮುಗಿಸಲು ಚಿತ್ರತಂಡ ಬಯಸಿದೆ.

blank

ರಶ್ಮಿಕಾ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು ಪ್ರತಿದಿನ ಹೊಸ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗೆ ಹೊಸ ವರ್ಷದ ಸಮಯದಲ್ಲಿ ತಮ್ಮ ಫೋಟೋವೊಂದನ್ನು ಶೇರ್​ ಮಾಡಿ ಹೊಸ ವರ್ಷದ ಶುಭಾಶಯಗಳನ್ನು ಹಂಚಿಕೊಂಡಿದ್ದರು. ನಾವೆಲ್ಲರೂ ಒಟ್ಟಾಗಿ 2025 ಅದ್ಭುತ ವರ್ಷವನ್ನು ಆಚರಿಸೋಣ ಎಂದು ಹೇಳಿದ್ದರು. ಎಆರ್ ಮುರುಗದಾಸ್ ನಿರ್ದೇಶನದ ‘ಸಿಕಂದರ್’ ಚಿತ್ರದಲ್ಲಿ ಸಲ್ಮಾನ್​ ಖಾನ್​ ಮತ್ತು ರಶ್ಮಿಕಾ ಜತೆಗೆ ಸತ್ಯರಾಜ್, ಕಾಜಲ್ ಅಗರ್ವಾಲ್, ಪ್ರತೀಕ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ವರ್ಷದ ಮಾರ್ಚ್‌ನಲ್ಲಿ ಈದ್ 2025 ರಂದು ಸಿನಿಮಾ ಬಿಡುಗಡೆಯಾಗಲಿದೆ.(ಏಜೆನ್ಸೀಸ್​​)

ಕರಣ್ ಜೋಹರ್ ನನಗೆ ಸ್ಫೂರ್ತಿ; ವಿವಾದದ ಬಳಿಕ ನಾಗವಂಶಿ ಹೀಗೇಳಿದ್ದೇಕೆ? | Naga Vamsi

Share This Article

ರಾತ್ರಿ ಮಲಗುವ ಮುನ್ನ ಪಾತ್ರೆಗಳನ್ನು ತೊಳೆದಿಡಬೇಕು ಯಾಕೆ ಗೊತ್ತಾ?; ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ | Reason Behind

ಹಿಂದೂ ಧರ್ಮಗ್ರಂಥಗಳಲ್ಲಿ ನಮ್ಮ ಸೌಕರ್ಯ, ಅದೃಷ್ಟ ಮತ್ತು ಆರೋಗ್ಯದ ಬಗ್ಗೆ ಅನೇಕ ನಿಯಮಗಳನ್ನು ಉಲ್ಲೇಖಿಸಲಾಗಿದೆ. ಅದನ್ನು…

ಶೀತ-ಕೆಮ್ಮಿನಿಂದ ಬಳಲುತ್ತಿದ್ದೀರಾ?; ಈ ಮನೆಮದ್ದು ಬಳಸಿ ಸಮಸ್ಯೆಗೆ ಗುಡ್​ಬೈ ಹೇಳಿ | Health Tips

ಚಳಿಗಾಲದಲ್ಲಿ ದುರ್ಬಲ ರೋಗನಿರೋಧಕ ಶಕ್ತಿಯಿಂದಾಗಿ ಶೀತ, ಕೆಮ್ಮು, ಗಂಟಲು ನೋವು, ಎದೆನೋವು, ನೆಗಡಿ, ತಲೆನೋವು ಮುಂತಾದ…

ಪಿರಿಯಡ್ಸ್​​ ಸಮಯದಲ್ಲಿ ನಿದ್ರಾಹೀನತೆ ಅನುಭವಿಸುವುದು ಏಕೆ?; ಇಲ್ಲಿದೆ ತಿಳಿದುಕೊಳ್ಳಲೇಬೇಕಾದ ಮಾಹಿತಿ | Health Tips

ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್ (PMS) ಇದು ಸಾಮಾನ್ಯವಾಗಿ ಮಹಿಳೆಯ ಋತುಚಕ್ರದ ಮೊದಲು ಕಾಣಿಸಿಕೊಳ್ಳುತ್ತದೆ. ಮೂಡ್ ಸ್ವಿಂಗ್ಸ್,…