ನವದೆಹಲಿ: ಭಾರಿ ಮಳೆ ದೇವರ ನಾಡು ಕೇರಳದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಿಂದಾಗಿ ಹಳ್ಳಿಗಳು ಕೊಚ್ಚಿಹೋಗಿವೆ ಮತ್ತು ನೂರಾರು ಜನರು ತಮ್ಮ ಅಮೂಲ್ಯ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಈ ಪ್ರಾಕೃತಿಕ ವಿಕೋಪಕ್ಕೆ ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ಇದೀಗ ವಯನಾಡಿನಲ್ಲಿ ಎಲ್ಲಿ ನೋಡಿದರೂ ಪ್ರವಾಹದಿಂದ ಉಂಟಾದ ವಿನಾಶವೇ ಕಣ್ಣಿಗೆ ರಾಚುತ್ತದೆ. ತಮ್ಮ ಕುಟುಂಬದ ಆಧಾರಸ್ತಂಭ ಮತ್ತು ಸದಸ್ಯರನ್ನು ಕಳೆದುಕೊಂಡು ದುಃಖಿಸುತ್ತಿದ್ದಾರೆ. ಅಕ್ಷರಶಃ ವಯನಾಡು ಶೋಕ ಸಾಗರದಲ್ಲಿ ಮುಳುಗಿದೆ.
ಜೀವನದ ಮೇಲೆ ಭರವಸೆ ಕಳೆದುಕೊಂಡಿರುವ ವಯನಾಡು ಸಂತ್ರಸ್ತರನ್ನು ಬೆಂಬಲಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಿಹಾರ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿವೆ. ಅಲ್ಲದೆ, ವಯನಾಡು ಸಂತ್ರಸ್ತರಿಗೆ ಇಡೀ ದೇಶವೇ ಕಂಬನಿ ಮಿಡಿದಿದೆ. ಮುಖ್ಯವಾಗಿ ಸಿನಿ ಸೆಲೆಬ್ರಿಟಿಗಳು ಕಷ್ಟಕಾಲದಲ್ಲಿ ವಯನಾಡು ಸಂತ್ರಸ್ತರ ಬೆನ್ನಿಗೆ ನಿಂತಿದ್ದು, ಭಾರಿ ದೇಣಿಗೆಯನ್ನು ಘೋಷಿಸುತ್ತಿದ್ದಾರೆ.
ಈಗಾಗಲೇ ಸೂರ್ಯ, ಜ್ಯೋತಿಕಾ ಮತ್ತು ಕಾರ್ತಿ 50 ಲಕ್ಷ ನೀಡಿದರೆ, ದುಲ್ಕರ್ ಸಲ್ಮಾನ್ 10, ಮುಮ್ಮಟ್ಟಿ 15, ಕಮಲ್ ಹಾಸನ್ 25 ಲಕ್ಷ ರೂ. ದೇಣಿಗೆ ಘೋಷಿಸಿದರು. ಅಲ್ಲದೆ, ನಾಗವಂಶಿ ಟಾಲಿವುಡ್‌ನಿಂದ 5 ಲಕ್ಷ ರೂಪಾಯಿ ದೇಣಿಗೆ ಘೋಷಿಸಿದರೆ, ರಶ್ಮಿಕಾ 10 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.
ಸಹಾಯ ಮಾಡುವ ಯಾರಾದರೂ ಪ್ರಶಂಸಿಸಲ್ಪಡುತ್ತಾರೆ. ಆದರೆ, ರಶ್ಮಿಕಾ ಮಂದಣ್ಣ ವಿಚಾರದಲ್ಲಿ ಈ ಸೀನ್ ರಿವರ್ಸ್ ಆಗಿದೆ. ವಯನಾಡು ಸಂತ್ರಸ್ತರಿಗಾಗಿ 10 ಲಕ್ಷ ರೂಪಾಯಿ ದೇಣಿಗೆ ನೀಡಿದರೂ ನೆಟ್ಟುಗರು ಆಕೆಯನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ. ವಾಸ್ತವವಾಗಿ ಈ ರೀತಿ ಸಹಾಯ ಮಾಡಿದರೆ ಮೆಚ್ಚಿಕೊಳ್ಳಬೇಕು. ಅದನ್ನು ಬಿಟ್ಟು ಈ ಟೀಕಿಸುವುದರಲ್ಲಿ ಅರ್ಥವೇ ಇರುವುದಿಲ್ಲ.
ರಶ್ಮಿಕಾ ನಮ್ಮ ಕನ್ನಡ ಹುಡುಗಿ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಆಕೆ ಕೊಡಗಿನ ಕುವರಿ. ಸದ್ಯ ಭಾರತದ ಸಿನಿ ಇಂಡಸ್ಟ್ರಿಯಲ್ಲಿ ಮಿಂಚುತ್ತಿದ್ದಾರೆ. ಇಂದು ವಯನಾಡಿಗೆ ಬಂದಿರುವ ಪರಿಸ್ಥಿತಿ ಹಿಂದೊಮ್ಮೆ ಕೊಡುಗಿಗೂ ಬಂದಿತ್ತು ಎಂಬುದು ನಿಮಗೆ ಗೊತ್ತೇ ಇದೆ. ಕೊಡುಗಿನಲ್ಲೂ ಭೂಕುಸಿತ ಸಂಭವಿಸಿ, ಅನೇಕರು ಪ್ರಾಣ ಕಳೆದುಕೊಂಡಿದ್ದರು. ಅಲ್ಲದೆ, ನೂರಾರು ಮಂದಿ ತಮ್ಮ ಮನೆಗಳನ್ನು ಕಳೆದುಕೊಂಡಿದ್ದರು. ಅನಾದಿ ಕಾಲದಿಂದಲೂ ಇದಕ್ಕೆ ಸ್ಪಂದಿಸುವಂತೆ ಕ್ಷೇತ್ರದ ಜನತೆ ಮನವಿ ಮಾಡುತ್ತಲೇ ಬಂದಿದ್ದಾರೆ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸದೆ ಈಗ ಕೇರಳದ ವಯನಾಡು ಸಂತ್ರಸ್ತರನ್ನು ಬೆಂಬಲಿಸಲು ದೇಣಿಗೆ ನೀಡಿರುವುದು ಕೆಲವರಿಗೆ ಇಷ್ಟವಾಗಿಲ್ಲ, ಸ್ವಂತ ಏರಿಯಾದ ಜನರಿಗೆ ಬೆಂಬಲ ನೀಡದೆ, ಹುಟ್ಟಿದ ಊರಿಗೆ ಗೌರವ ಕೊಡದೆ, ಎಲ್ಲೋ ನಡೆದ ಅವಘಡಕ್ಕೆ ಸಹಾಯ ಮಾಡುತ್ತೀರಾ ಎಂದು ರಶ್ಮಿಕಾ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಆದರೂ ಕೆಲವರು ರಶ್ಮಿಕಾ ಬೆಂಬಲಕ್ಕೆ ನಿಂತಿದ್ದಾರೆ. ಏನೇ ಆಗಲಿ ಸದ್ಯದ ಬಗ್ಗೆ ಮಾತನಾಡಿ, ರಶ್ಮಿಕಾ ನಡೆ ಸರಿಯಿದೆ ಎಂದಿದ್ದಾರೆ.
ಅಂದಹಾಗೆ ವಯನಾಡಿನಲ್ಲಿ ಭೂಕುಸಿತ ಪೀಡಿತ ಪ್ರದೇಶಗಳ ಪುನರ್ ನಿರ್ಮಾಣ ಮತ್ತು ಪುನರ್ವಸತಿಗಾಗಿ ಸಾಮಾನ್ಯ ಜನರು ಮತ್ತು ಸೆಲೆಬ್ರಿಟಿಗಳು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಭಾರಿ ಪ್ರಮಾಣದಲ್ಲಿ ದೇಣಿಗೆ ನೀಡುತ್ತಿದ್ದಾರೆ. ರಶ್ಮಿಕಾ ಅವರ ಸಿನಿಮಾ ವಿಚಾರಕ್ಕೆ ಬರುವುದಾದರೆ ಸದ್ಯ ಪುಷ್ಪ 2 ಸಿನಿಮಾದ ಶೂಟಿಂಗ್ನಲ್ಲಿ ಬಿಜಿಯಾಗಿದ್ದಾರೆ. ಇದಲ್ಲದೆ ಗರ್ಲ್ಫ್ರೆಂಡ್ ಸಿನಿಮಾದಲ್ಲೂ ನಟಿಸುತ್ತಿರುವುದು ಗೊತ್ತೇ ಇದೆ. (ಏಜೆನ್ಸೀಸ್)
ವಯನಾಡು ದುರಂತ: ಕಣ್ಣೀರು ತರಿಸುತ್ತೆ ಬದುಕುಳಿದವರ ನೋವಿನ ಕತೆ, ಮರುಜನ್ಮ ಸಿಕ್ಕ ಖುಷಿಯೂ ಉಳಿದಿಲ್ಲ
ಆ ಒಂದು ಕೆಲಸ ಮಾತ್ರ ನನ್ನ ಜೀವನದಲ್ಲೇ ಮಾಡುವುದಿಲ್ಲ: ಜಾಹ್ನವಿ ಕಪೂರ್ ಓಪನ್ ಟಾಕ್!
ಲವರ್ ಜತೆ ಬೆಡ್ರೂಮ್ನಲ್ಲಿ ಸಿಕ್ಕಿಬಿದ್ದ ಪತ್ನಿ: ಗಂಡ ತೆಗೆದುಕೊಂಡ ನಿರ್ಧಾರಕ್ಕೆ ತಲೆಬಾಗಿದ ಇಡೀ ಗ್ರಾಮ