ಪಟನಾ: ರಾತ್ರಿ ಬಾಯ್ಫ್ರೆಂಡ್ ಜತೆ ಸರಸ ಸಲ್ಲಾಪದಲ್ಲಿ ತೊಡಗಿರುವಾಗ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತ್ನಿಯ ಮೇಲೆ ಯಾವುದೇ ಆಕ್ರೋಶ ಹೊರಹಾಕದ ಗಂಡ, ಆಕೆಯನ್ನು ಬಾಯ್ಫ್ರೆಂಡ್ ಜತೆ ಮದುವೆ ಮಾಡಿಸಿರುವ ಅಪರೂಪದ ಘಟನೆ ಬಿಹಾರದ ರಾಮನಗರ ಗ್ರಾಮದಲ್ಲಿ ನಡೆದಿದೆ.
ಎರಡು ವರ್ಷದ ಗಂಡು ಮಗುವಿನ ತಾಯಿಯಾಗಿರುವ 22 ವರ್ಷದ ಖುಷ್ಬೂ ಮತ್ತು 24 ವರ್ಷದ ಚಂದನ್ ನಡುವೆ ಲವ್ವಿಡವ್ವಿ ಇತ್ತು. ಇಬ್ಬರು ಬಾಲ್ಯದಿಂದಲೂ ಪರಿಚಿತರಾಗಿದ್ದು, ಇಬ್ಬರು ನಡುವೆ ಪ್ರೀತಿ ಮೂಡಿ, ದೈಹಿಕ ಸಂಬಂಧವೂ ಬೆಳೆದಿತ್ತು. ಇತ್ತೀಚೆಗೆ ಒಂದು ರಾತ್ರಿ ಪತಿ ರಾಜೇಶ್ ಕುಮಾರ್ ಇಲ್ಲದ ಸಮಯದಲ್ಲಿ ಬಾಯ್ಫ್ರೆಂಡ್ನನ್ನು ಮನೆಗೆ ಕರೆದು ಇಬ್ಬರು ಏಕಾಂತದಲ್ಲಿ ಇರುವಾಗ ರಾಜೇಶ್ ಪಾಲಕರು ಇಬ್ಬರನ್ನು ರೆಡ್ಹ್ಯಾಂಡ್ ಆಗಿ ಹಿಡಿದಿದ್ದರು.
ಇಬ್ಬರ ಸಂಬಂಧ ಬಟಾಬಯಲಾದ ಬಳಿಕವೂ ರಾಜೇಶ್ ಜಗಳ ಆಗಲಿ ಅಥವಾ ಹೈಡ್ರಾಮ ಆಗಲಿ ಮಾಡಲಿಲ್ಲ. ಬದಲಾಗಿ, ತಡಮಾಡದೇ ಇಬ್ಬರಿಗೂ ಮದುವೆ ಮಾಡಲು ನಿರ್ಧಾರ ಮಾಡಿ, ಗ್ರಾಮಸ್ಥರ ಸಮ್ಮುಖದಲ್ಲಿ ಮದುವೆ ಮಾಡಿಸಿ, ಪತ್ನಿಯನ್ನು ಆಕೆಯ ಬಾಯ್ಫ್ರೆಂಡ್ ಮನೆಗೆ ಕಳುಹಿಸಿಕೊಟ್ಟಿದ್ದಾನೆ. ಇಬ್ಬರ ಮದುವೆ ಸ್ಥಳೀಯ ದೇವಸ್ಥಾನದಲ್ಲಿ ನೆರವೇರಿತು. ರಾಜೇಶ್ ಆತ್ಮೀಯವಾಗಿ ಇಬ್ಬರಿಗೂ ಬೀಳ್ಕೊಡುಗೆ ಕೊಟ್ಟನು.
ಗಂಡನ ನಡೆಯ ಬಗ್ಗೆ ಮಾತನಾಡಿದ ಖುಷ್ಬೂ, ನಾನೀಗ ಖುಷಿಯಾಗಿದ್ದೇನೆ ಮತ್ತು ರಾಜೇಶ್ಗೆ ಕೃತಜ್ಞಳಾಗಿರುತ್ತೇನೆ ಎಂದಿದ್ದಾಳೆ. ಬಾಯ್ಫ್ರೆಂಡ್ ಮನೆಗೆ ಹೋಗಲು ಖುಷ್ಬೂ ಉತ್ಸುಕಳಾಗಿದ್ದಾಳೆ. ಅಲ್ಲದೆ, ತನ್ನ ಮಗನನ್ನು ರಾಜೇಶ್ ಮನೆಯಲ್ಲೇ ಬಿಡಲು ನಿರ್ಧರಿಸಿದ್ದಾಳೆ. ಇನ್ನೊಂದೆಡೆ ಪತ್ನಿಯ ವಿಚಾರದಲ್ಲಿ ರಾಜೇಶ್ ತೆಗೆದುಕೊಂಡ ನಿರ್ಧಾರವನ್ನು ಆತನ ಮನೆಯವರು ಸಹ ಬೆಂಬಲಿಸಿದ್ದು, ತಮ್ಮ ಮೊಮ್ಮಗನನ್ನು ಜತೆಯಲ್ಲೇ ಇಟ್ಟುಕೊಳ್ಳಲು ಬಯಸಿದ್ದಾರೆ. ಏಕೆಂದರೆ, ತಮ್ಮ ಖುಷಿಯ ಮೂಲವೇ ಮೊಮ್ಮಗನೆಂಬುದು ಅವರ ಮಾತಾಗಿದೆ.
ಈ ಒಂದು ಮದುವೆ ತುಂಬಾ ವಿಶೇಷವಾದದ್ದು ಎಂದು ಗ್ರಾಮಸ್ಥರು ಕೂಡ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಪತ್ನಿಯ ಸಂಬಂಧದ ಬಗ್ಗೆ ರಾಜೇಶ್ ಯಾವುದೇ ಹೈಡ್ರಾಮವನ್ನು ಸೃಷ್ಟಿಸದೇ, ತುಂಬಾ ಯೋಚನೆ ಮಾಡಿ, ಒಳ್ಳೆಯ ನಿರ್ಧಾರ ತೆಗೆದುಕೊಂಡು ಬಾಯ್ಫ್ರೆಂಡ್ ಜತೆ ಪತ್ನಿಯ ಮದುವೆ ಮಾಡಿಕೊಟ್ಟಿದ್ದಾನೆ. ನಿಜಕ್ಕೂ ಇದೊಂದು ಅದ್ಭುತ ಮದುವೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದರು. (ಏಜೆನ್ಸೀಸ್)
ವಯನಾಡು ದುರಂತ: ಕಣ್ಣೀರು ತರಿಸುತ್ತೆ ಬದುಕುಳಿದವರ ನೋವಿನ ಕತೆ, ಮರುಜನ್ಮ ಸಿಕ್ಕ ಖುಷಿಯೂ ಉಳಿದಿಲ್ಲ
ಆ ಒಂದು ಕೆಲಸ ಮಾತ್ರ ನನ್ನ ಜೀವನದಲ್ಲೇ ಮಾಡುವುದಿಲ್ಲ: ಜಾಹ್ನವಿ ಕಪೂರ್ ಓಪನ್ ಟಾಕ್!
ಓದುಗರಿಗೆ ಮೆಗಾ ಕೊಡುಗೆ: ಬಹುಮಾನ ಗೆಲ್ಲಲು ವಿಜಯವಾಣಿ ಓದಿ, ಆಗಸ್ಟ್ 2ರಿಂದ ನವೆಂಬರ್ 14ರವರೆಗೆ ಸ್ಪರ್ಧೆ