ಬೆಂಗಳೂರು: ಕನ್ನಡದ ನಂ.1 ದಿನಪತ್ರಿಕೆ ‘ವಿಜಯವಾಣಿ’ ತನ್ನ ಓದುಗರಿಗೆ ಮೆಗಾ ಕೊಡುಗೆ ಪ್ರಕಟಿಸಿದ್ದು, ಕಾರು ಗೆಲ್ಲುವ ಅವಕಾಶವನ್ನು ಕಲ್ಪಿಸಿದೆ. ಜತೆಗೆ ಲಕ್ಷಾಂತರ ರೂಪಾಯಿ ಮೌಲ್ಯದ ವಿವಿಧ ಬಹುಮಾನಗಳನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ. ‘ವಿಜಯವಾಣಿ ಓದಿ ಕಾರು ಗೆಲ್ಲಿ’ ಶೀರ್ಷಿಕೆಯಡಿ ಆ.2ರಿಂದ ಆರಂಭಿಸಿರುವ ಈ ವಿಶೇಷ ಸ್ವರ್ಧೆ ನ.14ರವರೆಗೆ ಚಾಲ್ತಿಯಲ್ಲಿರಲಿದೆ.
ಓದುಗರು ಕಾರಿನ ಜತೆಗೆ ಬೈಕ್, ಲ್ಯಾಪ್ಟಾಪ್, ಎಸಿ, ರೆಫ್ರಿಜಿರೇಟರ್ ಸೇರಿ ಹಲವು ಬಹುಮಾನವನ್ನು ಗೆಲ್ಲಬಹುದಾಗಿದೆ. ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕಿದ್ದರೆ ಪ್ರತಿದಿನ ವಿಜಯವಾಣಿ ಪತ್ರಿಕೆಯನ್ನು ಓದಿ ಅದರಲ್ಲಿರುವ ಕೂಪನ್ಗಳನ್ನು ಸಂಗ್ರಹಿಸಿ ನಿಗದಿತ ನಮೂನೆಯ ಬಾಕ್ಸ್ನಲ್ಲಿ ಅಂಟಿಸಿ ಕೊನೆಗೆ ಒಟ್ಟುಗೂಡಿಸಿ ಸಂಸ್ಥೆಯ ಕಚೇರಿಗೆ ತಲುಪಿಸಬೇಕಾಗುತ್ತದೆ.
ಸ್ಪರ್ಧೆಯಲ್ಲಿ ಭಾಗವಹಿಸುವುದು ಹೇಗೆ?: ವಿಜಯವಾಣಿ ಪತ್ರಿಕೆಯಲ್ಲಿ ಆ.2ರಿಂದ ನ.14ರ ವರೆಗೂ ‘ವಿಜಯವಾಣಿ ಓದಿ ಕಾರು ಗೆಲ್ಲಿ’ ಮೆಗಾ ಕೊಡುಗೆಗೆ ಸಂಬಂಧಿಸಿದ ಕೂಪನ್ಗಳನ್ನು ಪ್ರಕಟಿಸಲಾಗುತ್ತದೆ. ಇವುಗಳನ್ನು ಆಯಾ ದಿನದಂದು ಪ್ರಕಟವಾಗುವ ಪತ್ರಿಕೆಯಲ್ಲಿನ ಪುಟಗಳಲ್ಲಿ ಗುರುತಿಸಿ ಆ ಭಾಗವನ್ನು ಕತ್ತರಿಸಿ ನಿಗದಿತ ಸ್ಪರ್ಧಾ ನಮೂನೆಯ ಕೂಪನ್ ಬಾಕ್ಸ್ನಲ್ಲಿ ಅಂಟಿಸಬೇಕು. ಒಟ್ಟು 80 ಕೂಪನ್ಗಳು ಪ್ರಕಟವಾಗಲಿದ್ದು, ಈ ಪೈಕಿ 45 ಸ್ಟಾ್ಯಂಡರ್ಡ್(ನಿಗದಿತ) ಕೂಪನ್ ಹಾಗೂ 5 ಮಾಸ್ಟರ್ ಕೂಪನ್ಗಳನ್ನು ಅದರದೇ ಬಾಕ್ಸ್ನಲ್ಲಿ ಅಂಟಿಸಬೇಕು. ಒಂದು ಬಾಕ್ಸ್ನಲ್ಲಿ ಒಂದೇ ಕೂಪನ್ ಅಂಟಿಸಿರಬೇಕು. ಕೂಪನ್ಗಳನ್ನು ಜೆರಾಕ್ಸ್ ಮಾಡಿ ಅಂಟಿಸುವಂತಿಲ್ಲ. ಒಟ್ಟು 104 ದಿನಗಳಲ್ಲಿ ಪ್ರಕಟವಾಗುವ ಕೂಪನ್ಗಳ ಪೈಕಿ 50 ಕೂಪನ್ಗಳನ್ನು (45 ಸ್ಟಾ್ಯಂಡರ್ಡ್ ಕೂಪನ್ ಹಾಗೂ 5 ಮಾಸ್ಟರ್ ಕೂಪನ್) ಪ್ರಕಟಿತ ಸ್ಪರ್ಧಾ ನಮೂನೆಯಲ್ಲಿ ಅಂಟಿಸಿ ಸಂಸ್ಥೆಯು ಮುಂದಿನ ದಿನಗಳಲ್ಲಿ ತಿಳಿಸುವ ವಿಳಾಸಕ್ಕೆ ತಲುಪಿಸಬೇಕಾಗುತ್ತದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ನಮೂನೆಯಲ್ಲಿ ತಮ್ಮ ಹೆಸರಿನೊಂದಿಗೆ ಪೂರ್ಣವಾದ ವಿಳಾಸ, ಮೊಬೈಲ್ ಸಂಖ್ಯೆಯನ್ನು ನಮೂದಿಸಿರಬೇಕು.
ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಷರತ್ತುಗಳು
* ಈ ಕೊಡುಗೆಯು ವಿಜಯವಾಣಿಯ ಎಲ್ಲ ಓದುಗರಿಗೆ ಅನ್ವಯವಾಗುತ್ತದೆ.
* ಸ್ಪರ್ಧೆಯು ಬೆಂಗಳೂರು, ಮೈಸೂರು ಹಾಗೂ ಮಂಗಳೂರು ಆವೃತ್ತಿಗೆ ಸೀಮಿತ.
* ಒಬ್ಬ ಸ್ಪರ್ಧಿಯಿಂದ ಒಂದು ನಮೂನೆಯನ್ನು ಮಾತ್ರ ಸ್ವೀಕರಿಸಲಾಗುತ್ತದೆ.
* ವಿಜೇತರನ್ನು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಲಾಗುತ್ತದೆ.
* ಕೂಪನ್ಗಳ ಛಾಯಾಪ್ರತಿ (ಫೋಟೋ ಕಾಪಿ, ಜೆರಾಕ್ಸ್ ಪ್ರತಿ) ಪರಿಗಣಿಸುವುದಿಲ್ಲ.
ಸ್ಪರ್ಧೆಯ ಸಂಕ್ಷಿಪ್ತ ವಿವರ
* ಕೂಪನ್ ಪ್ರಕಟವಾಗುವ ಅವಧಿ: 2024ರ ಆ.2ರಿಂದ ನ.14ರ ವರೆಗೆ
* ಸಂಗ್ರಹಿಸಿದ ಕೂಪನ್ ಸಲ್ಲಿಸುವ ಅವಧಿ: 2024ರ ನ.15ರಿಂದ ನ.30ರ ವರೆಗೆ
* ಸ್ಪರ್ಧಾ ವಿಜೇತರ ಆಯ್ಕೆ: 2024ರ ಡಿ.10
* ವಿಜೇತರ ಘೋಷಣೆ: 2024ರ ಡಿ.20
ಕಾರು ಗೆಲ್ಲುವ ಸ್ಪರ್ಧೆಗೆ ಅನ್ವಯವಾಗುವ ಪ್ರದೇಶ
* ಬೆಂಗಳೂರು ಆವೃತ್ತಿ: ಬೆಂಗಳೂರು ನಗರ, ಬೆಂ. ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಜಿಲ್ಲೆಗಳು.
* ಮೈಸೂರು ಆವೃತ್ತಿ: ಮೈಸೂರು ನಗರ, ಮೈಸೂರು ಗ್ರಾಮಾಂತರ, ಚಾಮರಾಜನಗರ, ಮಂಡ್ಯ, ಹಾಸನ ಹಾಗೂ ಕೊಡಗು ಜಿಲ್ಲೆಗಳು.
* ಮಂಗಳೂರು ಆವೃತ್ತಿ: ಮಂಗಳೂರು ನಗರ, ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಗಳು.
ಮುಖ್ಯ ಕೋಚ್ ಆದ ನಂತ್ರ ನಡೆದ ಮೊದಲ ಏಕದಿನ ಪಂದ್ಯವೇ ಟೈ: ಗಂಭೀರ್ ಪ್ರತಿಕ್ರಿಯೆ ವೈರಲ್
ಎಲ್ಲವನ್ನೂ ಕಳೆದುಕೊಂಡಿದ್ದೇನೆಂದು ಕಣ್ಣೀರಿಟ್ಟ ಅಜ್ಜಿ ಮಾತಿಗೆ ಕರಗಿದ ಕಾಡಾನೆ! ದಟ್ಟಕಾಡಿನಲ್ಲಿ ರಕ್ಷಕನಾದ ಗಜ