ನವದೆಹಲಿ: ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯದ ಫಲಿತಾಂಶ ಟೈ ಆಗಿದ್ದು ಎಲ್ಲರಿಗೂ ಗೊತ್ತೇ ಇದೆ. ಶುಕ್ರವಾರ (ಆ.02) ಕೊಲಂಬೊದಲ್ಲಿನ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಉಭಯ ತಂಡಗಳು ಸಮಬಲ ಸಾಧಿಸಿದ್ದರಿಂದ ಪಂದ್ಯ ಟೈನಲ್ಲಿ ಅಂತ್ಯಗೊಂಡಿತು. ನಿಜವಾಗಿ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲಬೇಕಿತ್ತು. ಏಕೆಂದರೆ, ಕೊನೆಯ 15 ಎಸೆತಗಳಲ್ಲಿ ಕೇವಲ ಒಂದೇ ಒಂದು ರನ್ ಬೇಕಿತ್ತು ಮತ್ತು ಕೈಯಲ್ಲಿ ಎರಡು ವಿಕೆಟ್ ಇತ್ತು. ಹೀಗಿದ್ದರೂ ಭಾರತ ತಂಡ ಗೆಲುವಿನ ಗೆರೆ ದಾಟಲು ಸಾಧ್ಯವಾಗಲಿಲ್ಲ.
ಇನ್ನು ಈ ಪಂದ್ಯ ಗೌತಮ್ ಗಂಭೀರ್ ಮುಖ್ಯ ಕೋಚ್ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ನಡೆದ ಮೊದಲ ಏಕದಿನ ಪಂದ್ಯ ಎಂಬುದು ಗೊತ್ತಾಗಿದೆ. ರಾಹುಲ್ ದ್ರಾವಿಡ್ ಬದಲಿಗೆ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಬಂದ ಗೌತಮ್ ಗಂಭೀರ್ ಮೂರು ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಮೂಲಕ ಒಳ್ಳೆಯ ಆರಂಭ ಪಡೆದರು. ಆದರೆ, ಏಕದಿನ ಪಂದ್ಯ ಟೈ ಆಗಿದ್ದಕ್ಕೆ ಗಂಭೀರ್ ಬೇಸರಗೊಂಡಿದ್ದಾರೆ.
ಏಕದಿನ ಮಾದರಿಯಲ್ಲಿ ಗಂಭೀರ್ಗೆ ಕಹಿ ಅನುಭವವಾಗಿದೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಅವರಂತಹ ಸ್ಟಾರ್‌ಗಳನ್ನು ಹೊಂದಿರುವ ಟೀಮ್ ಇಂಡಿಯಾ, ಬಲಿಷ್ಠವಲ್ಲದ ಶ್ರೀಲಂಕಾ ತಂಡದ ವಿರುದ್ಧ ಗೆಲ್ಲಲು ಸಾಧ್ಯವಾಗಲಿಲ್ಲ. ಮೇಲಾಗಿ ಸುಲಭವಾಗಿ ಗೆಲ್ಲಬೇಕಿದ್ದ ಪಂದ್ಯವನ್ನು ಟೈ ಮಾಡಿಕೊಂಡರು. ಈ ಪಂದ್ಯದ ವೇಳೆ ಗಂಭೀರ್ ಡಗೌಟ್ನಲ್ಲಿ ಕುಳಿತುಕೊಳ್ಳದೇ ಪಂದ್ಯವನ್ನು ಎಂಜಾಯ್ ಮಾಡಿದರು. ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಯೊಂದಿಗೆ ಮಾತನಾಡುತ್ತಾ, ನಗುತ್ತಾ ಪಂದ್ಯವನ್ನು ವೀಕ್ಷಿಸಿದರು. ಆದರೆ, ಪಂದ್ಯ ಟೈ ಆದಾಗ ಗಂಭೀರ್ ತುಂಬಾ ನಿಸ್ತೇಜರಾಗಿ ಮತ್ತು ಸ್ವಲ್ಪ ಕೋಪದಿಂದ ಕಾಣುತ್ತಿದ್ದರು. ಪಂದ್ಯದ ನಂತರದ ಅವರ ಮುಖಭಾವ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Gautam Gambhir Looking unhappy and very disappointing after ind vs sl match ends with tie. this his first odi as head coach #GautamGambhir #INDvsSL pic.twitter.com/WBnRDncfSd
— Sayyad Nag Pasha (@nag_pasha) August 3, 2024
ಈ ಪಂದ್ಯ ಟೈ ಆಗಿದ್ದಕ್ಕೆ ಗೌತಮ್ ಗಂಭೀರ್ ಸ್ವಲ್ಪವೂ ತೃಪ್ತರಾಗಿಲ್ಲ ಎಂದು ವರದಿಯಾಗಿದೆ. ಪಂದ್ಯ ಮುಗಿದ ನಂತರ ಡ್ರೆಸ್ಸಿಂಗ್ ರೂಮ್ನಲ್ಲೂ ಪಂದ್ಯದ ಬಗ್ಗೆ ಸುದೀರ್ಘ ಚರ್ಚಯಾಗಿದೆ. ಆದರೆ, ಆಟಗಾರರಿಗೆ ಗಂಭೀರ್ ಕ್ಲಾಸ್ ತೆಗೆದುಕೊಂಡಿಲ್ಲ. ಮೊದಲ ಪಂದ್ಯವಾದ್ದರಿಂದ ಅದರಲ್ಲೂ ಟೈ ಆಗಿದ್ದರಿಂದ ಸುಮ್ಮನಾಗಿದ್ದಾರೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್)
ವಯನಾಡು ಭೂಕುಸಿತ: ಸೇನಾ ಸಮವಸ್ತ್ರದಲ್ಲಿ ರಕ್ಷಣಾ ಕಾರ್ಯಕ್ಕೆ ಕೈಜೋಡಿಸಿದ ಮೋಹನ್ಲಾಲ್
ಇದು ಧೋನಿಗೆ ಮಾಡಿದ ಅವಮಾನ! ಸಿಎಸ್ಕೆ ವಿರುದ್ಧ ಸಿಡಿದೆದ್ದ ಎಸ್ಆರ್ಎಚ್ ಒಡತಿ ಕಾವ್ಯಾ ಮಾರನ್