ಕಲ್ಪೆಟ್ಟ: ಭಾರಿ ಮಳೆಯಿಂದ ಉಂಟಾದ ಭೂಕುಸಿತದಿಂದ ನಲುಗಿ ಹೋಗಿರುವ ವಯನಾಡಿಗೆ ನಟ ಮೋಹನ್‌ಲಾಲ್ ಅವರು ಆಗಮಿಸಿದ್ದಾರೆ. ಲೆಫ್ಟಿನೆಂಟ್ ಕರ್ನಲ್ ಆಗಿರುವ ಮೋಹನ್ ಲಾಲ್ ಅವರು ಮೆಪ್ಪಾಡಿ ಆಗಮಿಸಿದಾಗ ಭಾರತೀಯ ಸೇನೆ ಅವರನ್ನು ಬರಮಾಡಿಕೊಂಡಿತು.
ಭೇಟಿಯ ವೇಳೆ ಮೋಹನ್ ಲಾಲ್ ಅವರು ಮಿಲಿಟರಿ ಸಮವಸ್ತ್ರದಲ್ಲಿ ಆಗಮಿಸಿದರು. ಭೂಕುಸಿತದಿಂದ ಹಾನಿಗೊಳಗಾದ ಮುಂಡಕೈಗೆ ಮೋಹನ್‌ಲಾಲ್ ಇಂದು ಭೇಟಿ ನೀಡಲಿದ್ದು, ಪರಿಸ್ಥಿತಿಯನ್ನು ಅವಲೋಕಿಸಲಿದ್ದಾರೆ.
ಈಗಾಗಲೇ ನಟ ಮೋಹನ್‌ಲಾಲ್ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 25 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಮೋಹನ್‌ಲಾಲ್ ಹಂಚಿಕೊಂಡ ಭಾವನಾತ್ಮಕ ಬರಹ ಕೂಡ ಸಾಕಷ್ಟು ಗಮನ ಸೆಳೆಯಿತು. ವಯನಾಡು ದುರಂತದ ಸಂತ್ರಸ್ತರಿಗೆ ಪರಿಹಾರ ನೀಡಲು ಅವಿರತವಾಗಿ ಶ್ರಮಿಸುತ್ತಿರುವ ಪ್ರತಿಯೊಬ್ಬ ನಿಸ್ವಾರ್ಥ ಸ್ವಯಂಸೇವಕರು, ಪೊಲೀಸ್, ಅಗ್ನಿಶಾಮಕ ಮತ್ತು ರಕ್ಷಣಾ ಪಡೆಗಳು, ಎನ್ಡಿಆರ್ಎಫ್, ಭಾರತೀಯ ಸೇನೆ ಮತ್ತು ಅಧಿಕಾರಿಗಳ ಧೈರ್ಯಕ್ಕೆ ನಾನು ವಂದಿಸುತ್ತೇನೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಪರಿಹಾರ ಕಾರ್ಯಾಚರಣೆಯಲ್ಲಿ ಮುಂಚೂಣಿಯಲ್ಲಿದ್ದ ನನ್ನ 122 ಪದಾತಿದಳದ ಬೆಟಾಲಿಯನ್ ಟಿಎ ಮದ್ರಾಸ್ ಅವರ ಪ್ರಯತ್ನಗಳನ್ನು ನಾನು ಪ್ರಶಂಸಿಸುತ್ತೇನೆ. ನಾವೀಗ ಮೊದಲು ಸವಾಲುಗಳನ್ನು ಎದುರಿಸಿದ್ದೇವೆ ಮತ್ತು ಅದರಿಂದ ಬಲವಾಗಿ ಹೊರಬಂದಿದ್ದೇವೆ. ಈ ಕಷ್ಟದ ಸಮಯದಲ್ಲಿ ಒಟ್ಟಾಗಿ ನಿಂತು ನಮ್ಮ ಒಗ್ಗಟ್ಟಿನ ಶಕ್ತಿಯನ್ನು ತೋರಿಸಬೇಕೆಂದು ನಾನು ನಿಮ್ಮಲ್ಲಿ ಒತ್ತಾಯಿಸುತ್ತೇನೆ. ಜೈಹಿಂದ್ ಎಂದು ಮೋಹನ್ ಲಾಲ್ ಭಾವುಕವಾಗಿ ಬರೆದುಕೊಂಡು, ರಕ್ಷಣಾ ಕಾರ್ಯದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ವಯನಾಡು ಭೂಕುಸಿತ ಸಂತ್ರಸ್ತರ ಪುನರ್ವಸತಿಗಾಗಿ ದೇಶದ ವಿವಿಧ ಭಾಗಗಳಿಂದ ನೆರವು ಬರುತ್ತಿದೆ. ನಟ ಮಮ್ಮುಟ್ಟಿ, ದುಲ್ಕರ್ ಸಲ್ಮಾನ್, ಟೊವಿನೋ ಥಾಮಸ್, ಆಸಿಫ್ ಅಲಿ, ಮಂಜು ವಾರಿಯರ್, ನಯನತಾರಾ, ನವ್ಯಾ ನಾಯರ್, ಫಹದ್ ಫಾಸಿಲ್, ನಜ್ರಿಯಾ, ಪರ್ಲಿ ಮಣಿ ಮತ್ತು ಶ್ರೀನಿಶ್ ಕೂಡ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ಮಮ್ಮುಟ್ಟಿ ಮತ್ತು ದುಲ್ಕರ್ ಸಲ್ಮಾನ್ ಪರಿಹಾರ ನಿಧಿಗೆ 35 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಇದರಲ್ಲಿ ಮಮ್ಮುಟ್ಟಿ 20 ಲಕ್ಷ ಹಾಗೂ ದುಲ್ಕರ್ 15 ಲಕ್ಷ ರೂ. ಸೇರಿದೆ. ಈ ಮೊತ್ತವನ್ನು ಸಚಿವ ಪಿ.ರಾಜೀವ್ ಸ್ವೀಕರಿಸಿದರು. ಮಮ್ಮುಟ್ಟಿ ಕೇರ್ ಫೌಂಡೇಶನ್‌ನ ಅಂಗವಾಗಿ ಈ ಮೊತ್ತವನ್ನು ಹಸ್ತಾಂತರಿಸಲಾಯಿತು.
I salute the courage of the selfless volunteers, policemen, Fire & Rescue, NDRF, army soldiers, government officials, and every person working tirelessly to provide relief to the victims of the Wayanad disaster.
I am grateful for the efforts of my 122 Infantry Battalion, TA… pic.twitter.com/UgPI2w8KN7
— Mohanlal (@Mohanlal) August 1, 2024
ನಟ ಕಾರ್ತಿ, ಸೂರ್ಯ ಮತ್ತು ಜ್ಯೋತಿಕಾ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 50 ಲಕ್ಷ ರೂಪಾಯಿ ನೀಡಿದ್ದಾರೆ. ನಟರಾದ ಕಮಲ್ ಹಾಸನ್ ಮತ್ತು ವಿಕ್ರಮ್ 20 ಲಕ್ಷ ಮತ್ತು ನಟಿ ರಶ್ಮಿಕಾ ಮಂದನಾ 10 ಲಕ್ಷ ರೂ. ಫಹಾದ್ ಫಾಜಿಲ್ ಮತ್ತು ನಜ್ರಿಯಾ 25 ಲಕ್ಷ ನೀಡಿದ್ದಾರೆ. (ಏಜೆನ್ಸೀಸ್)
ಇದು ಧೋನಿಗೆ ಮಾಡಿದ ಅವಮಾನ! ಸಿಎಸ್ಕೆ ವಿರುದ್ಧ ಸಿಡಿದೆದ್ದ ಎಸ್ಆರ್ಎಚ್ ಒಡತಿ ಕಾವ್ಯಾ ಮಾರನ್
ಡೇಟಿಂಗ್ ಆ್ಯಪ್ನಲ್ಲಿ ಸಂಗಾತಿ ಹುಡುಕುತ್ತಿದ್ದೀರಾ? ಹಣ ಮಾತ್ರವಲ್ಲ ನೀವಿದನ್ನು ಕಳ್ಕೋಬೇಕಾಗುತ್ತೆ ಎಚ್ಚರ!
ಭಾರತ-ಲಂಕಾ ನಡುವಿನ ಏಕದಿನ ಪಂದ್ಯ ಟೈ ಆದರೂ ಸೂಪರ್ ಓವರ್ ಏಕೆ ಆಡಿಸಲಿಲ್ಲ? ಇಲ್ಲಿದೆ ಕಾರಣ…