ಡೇಟಿಂಗ್​​​ ಆ್ಯಪ್​ನಲ್ಲಿ ಸಂಗಾತಿ ಹುಡುಕುತ್ತಿದ್ದೀರಾ? ಹಣ ಮಾತ್ರವಲ್ಲ​ ನೀವಿದನ್ನು ಕಳ್ಕೋಬೇಕಾಗುತ್ತೆ ಎಚ್ಚರ!

dating app

ನವದೆಹಲಿ: ಇಂದು ತಮಗೆ ಸೂಕ್ತವಾದ ಜೀವನ ಸಂಗಾತಿಯನ್ನು ಹುಡುಕಲು ಡೇಟಿಂಗ್ ಅಪ್ಲಿಕೇಶನ್‌ಗಳ ಮೊರೆ ಹೋಗುವುದು ಸಾಮಾನ್ಯವಾಗಿದೆ. ಈ ಆಧುನಿಕ ಜಗತ್ತಿನಲ್ಲಿ ಇದು ಹೊಸದೇನಲ್ಲವಾದರೂ ಈ ಕ್ಷೇತ್ರದಲ್ಲೂ ಸಾಕಷ್ಟು ಸಮಸ್ಯೆಗಳಿರುವುದು ಸುಳ್ಳಲ್ಲ. ಈ ಆ್ಯಪ್‌ಗಳಲ್ಲಿ ಸ್ನೇಹದ ಮುಖವಾಡದ ಹಿಂದಿರುವ ಅಪಾಯಗಳು ನಿಮ್ಮ ಜೀವನವನ್ನೇ ಸರ್ವನಾಶಮಾಡುತ್ತವೆ. ಇಂತಹ ಅನೇಕ ಕತೆಗಳು ಮತ್ತು ಘಟನೆಗಳನ್ನು ನಾವು ಕೇಳಿದ್ದೇವೆ ಮತ್ತು ನೋಡಿದ್ದೇವೆ. ಹೀಗಾಗಿ ಇವುಗಳ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರಬೇಕಾಗಿದೆ.

ಮೊದಲ ಅಪಾಯವೆಂದರೆ ಡೇಟಿಂಗ್ ಅಪ್ಲಿಕೇಶನ್‌ಗಳಲ್ಲಿ ಯಾರಾದರೂ ಸುಲಭವಾಗಿ ನಕಲಿ ಪ್ರೊಫೈಲ್ ಅನ್ನು ರಚಿಸಬಹುದು. ಈ ಮೂಲಕ ಒಬ್ಬರ ಸ್ವಂತ ವ್ಯಕ್ತಿತ್ವ ಮತ್ತು ಸುತ್ತಮುತ್ತಲಿನ ಪರಿಸರವನ್ನು ದಾರಿತಪ್ಪಿಸುವ ರೀತಿಯಲ್ಲಿ ಬಳಸಿಕೊಳ್ಳಬಹುದು. ಆದ್ದರಿಂದ, ನೀವು ವಿವಿಧ ಹಗರಣಗಳಿಗೆ ಬಲಿಯಾಗಬಹುದು. ಡೇಟಿಂಗ್ ಅಪ್ಲಿಕೇಶನ್‌ಗಳಲ್ಲಿ ಹೆಸರು, ಫೋಟೋ ಮತ್ತು ಸ್ಥಳದಂತಹ ಮಾಹಿತಿಯನ್ನು ನೀವು ಹಂಚಿಕೊಳ್ಳಬೇಕಾಗುತ್ತದೆ. ಇದು ಕೂಡ ದುರ್ಬಳಕೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಡೇಟಿಂಗ್​ ಅಪ್ಲಿಕೇಶನ್​ಗಳಲ್ಲಿ ನಾವು ಹಂಚಿಕೊಳ್ಳುವ ಮಾಹಿತಿಯು ಸುರಕ್ಷಿತವಲ್ಲ ಎಂಬುದೇ ಇಲ್ಲಿನ ಮುಖ್ಯ ಸವಾಲು. ಆಘಾತಕಾರಿ ಸಂಗತಿ ಏನೆಂದರೆ, ಇಲ್ಲಿ ಮಾಹಿತಿಯು ಹ್ಯಾಕರ್‌ಗಳ ಕೈಗೆ ಸುಲಭವಾಗಿ ಸಿಗುವ ಸಾಧ್ಯತೆಯಿದೆ. ಡೇಟಿಂಗ್ ಆ್ಯಪ್‌ಗಳ ಮೂಲಕ ಪಡೆದ ನಮ್ಮ ವೈಯಕ್ತಿಕ ಮಾಹಿತಿಯನ್ನು ಕಂಪನಿಗಳು ಬಳಸಬಹುದು ಮತ್ತು ಮೂರನೇ ವ್ಯಕ್ತಿಗಳಿಗೆ ಮಾರಾಟ ಮಾಡಬಹುದು ಎಂಬುದನ್ನು ಮರೆಯಬೇಡಿ. ಅದೇ ರೀತಿ ಈ ಡೇಟಿಂಗ್​ ಆ್ಯಪ್‌ಗಳಲ್ಲಿ ಒಬ್ಬರನ್ನೊಬ್ಬರು ಅರಿತುಕೊಂಡ ನಂತರ ಸುಲಭವಾಗಿ ನಂಬುವುದು ಕೂಡ ಒಳ್ಳೆಯದಲ್ಲ. ಏಕೆಂದರೆ, ಒಬ್ಬ ವ್ಯಕ್ತಿ ನಿಜ ಜೀವನದಲ್ಲಿ ಹೇಗಿರುತ್ತಾನೆ ಎಂಬುದನ್ನು ಮರೆಮಾಚುವ ಸಾಧ್ಯತೆ ದಟ್ಟವಾಗಿರುತ್ತದೆ.

ಇತ್ತೀಚೆಗೆ ಇಂತಹ ಆ್ಯಪ್​ಗಳ ಮೂಲಕ ಮದುವೆ ವಂಚನೆ ಹಾಗೂ ಹಣ ಸುಲಿಗೆಯಂತಹ ಅಪರಾಧಗಳು ಸಾಮಾನ್ಯ ಸಂಗತಿಯಾಗಿವೆ. ಅದೇ ರೀತಿ ದೈಹಿಕ ದೌರ್ಜನ್ಯಕ್ಕೆ ಒಳಗಾಗುವ ಸಾಧ್ಯತೆಯೂ ಹೆಚ್ಚಿದೆ. ಮತ್ತೊಂದು ಅಪಾಯವೆಂದರೆ ಡೇಟಿಂಗ್ ಅಪ್ಲಿಕೇಶನ್‌ಗಳನ್ನು ಬಳಸುವಾಗ ಕೆಲ ಪ್ರಕರಣಗಳಲ್ಲಿ ಸೆಕ್ಸ್ ರಾಕೆಟ್‌ಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಉದಾಹರಣೆಗಳು ಇವೆ. ಹೀಗಾಗಿ ಈ ಡೇಟಿಂಗ್​ ಆ್ಯಪ್​ ಬಳಸುವಾಗ ತುಂಬಾ ಎಚ್ಚರಿಕೆ ವಹಿಸುವುದು ಅಗತ್ಯ. ಇಲ್ಲಿ ಹಣ ಮಾತ್ರವಲ್ಲ ಜೀವನವನ್ನು ಕಳೆದುಕೊಳ್ಳಬೇಕಾಗುತ್ತದೆ ಎಚ್ಚರ. (ಏಜೆನ್ಸೀಸ್​)

ಭಾರತ-ಲಂಕಾ ನಡುವಿನ ಏಕದಿನ ಪಂದ್ಯ ಟೈ ಆದರೂ ಸೂಪರ್​ ಓವರ್​ ಏಕೆ ಆಡಿಸಲಿಲ್ಲ? ಇಲ್ಲಿದೆ ಕಾರಣ…

Share This Article

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…

ಈ ದಿನಾಂಕದಂದು ಜನಿಸಿದವರು ದಾನದಲ್ಲಿ ಕರ್ಣನನ್ನು ಮೀರಿಸುತ್ತಾರೆ! ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಗೋಲ್ಡನ್ ಅವರ್ ರಹಸ್ಯ: ಮುಂಜಾನೆ ಬೇಗ ಏಳುವುದರಿಂದ ಇದೆ 6 ಪ್ರಯೋಜನಗಳು

 ಬೆಂಗಳೂರು: ಮನೆಯಲ್ಲಿ ಕೆಲವರು ಸೂರ್ಯೋದಯಕ್ಕೂ ಮೊದಲೇ ಏಳುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಮುಂಜಾನೆ ಬೇಗ ಏಳುವುದನ್ನು ರೂಢಿ…