ಕೇರಳ: ದೇವರನಾಡು ಕೇರಳದ ವಯನಾಡ್, ಹಚ್ಚ ಹಸಿರಿನ ಕಾಡುಗಳಲ್ಲಿ ನೆಲೆಸಿದೆ, ಜುಲೈ 30 ರಂದು ಭಾರೀ ಮಳೆಯಿಂದ ಉಂಟಾದ ಭೂಕುಸಿದದಿಂದಾಗಿ 300 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸಾವಿರಾರು ಜನರು ನಿರಾಶ್ರಿತರು ಕುಟುಂಬಸ್ಥರು, ಮನೆ ಎಲ್ಲವನ್ನೂ ಕಳೆದುಕೊಂಡು ಅನಾಥರಾಗಿ ನಿಂತಿದ್ದಾರೆ. ಈ ಕಣ್ಣೀರಿನ ಕಥೆಯಲ್ಲಿ ಅಜ್ಜಿ, ಮೊಮ್ಮಗಳ ಜೀವನ ರಕ್ಷಣೆಗೆ ಕಾವಲಾಗಿ ನಿಂತ ಆನೆಯ ಕಥೆಯೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಕುಟುಂಬ, ಊರು, ಮನೆ ತನ್ನವರನೆಲ್ಲ ಕಳೆದುಕೊಂಡ ಒಬ್ಬ ವೃದ್ಧೆ ಹಾಗೂ ಮೊಮ್ಮಗಳು ಭೂಕುಸಿತ ಸಂಭವಿಸಿದ ಆ ರಾತ್ರಿ ಪ್ರಾಣಪಾಯಿಂದ ಪಾರಾಗಿ ಬಂದಿದ್ದಾರೆ. ಆದರೆ ಹೀಗೆ ಪಾರಾದ ಮಹಿಳೆಯೆ ಸುಜಾತ. ಇವರ ನೆರವಿಗೆ ನಿಂತಿದ್ದು ಕಾಡಾನೆ. ಈ ಮೂಖಪ್ರಾಣಿಗೆ ಇರುವ ಮಾನವೀಯತೆ ಕಥೆ ಕೇಳಿದ್ರೆ ಖಂಡಿತ ನಿಮ್ಮ ಕಣ್ಣಲ್ಲಿ ನೀರು ಬರುವುದು ಖಂಡಿತಾ ಹೌದು…
ಸುಜಾತ ಅವರು ಟೀ ಎಸ್ಟೇಟ್ನ ಕೆಲಸಗಾರ್ತಿಯಾಗಿದ್ದರು. ಭೂಕೂಸಿತ ಆಗಿ ಎಲ್ಲವನ್ನೂ ಕಳೆದುಕೊಂಡು ಒಂಟಿತಯಾಗಿ ನಿಂತಾಗ ಇವರಿಗೆ ಕಾವಲಾಗಿ ನಿಂತಿದ್ದ ಮೂಲಕ ಪ್ರಾಣಿಯ ಕುರಿತಾಗಿ ಹೇಳಿಕೊಂಡಿದ್ದಾರೆ.
ಸೋಮವಾರ ರಾತ್ರಿ 4 ಗಂಟೆಗೆ ಮಳೆ ಜೋರಾಗಿತ್ತು. ಮಧ್ಯರಾತ್ರಿ ಸರಿಸುಮಾರು 1 ಗಂಟಗೆಗೆ ಎಚ್ಚರ ಆಗಿತ್ತು. ದೊಡ್ಡ ಶಬ್ದವೊಂದು ಕೇಳುತ್ತಿದ್ದಂತೆ ನಮ್ಮ ಮನೆಗೆ ನೀರು ನುಗ್ಗಿತ್ತು. ನಾವೆಲ್ಲ ಏನಾಗುತ್ತಿದೆ ಎಂದು ಯೋಚನೆ ಮಾಡುವಷ್ಟರಲ್ಲಿ ನೆರೆಹೊರೆಯವರ ಮನೆಯ ವಸ್ತುಗಳು ಹಾಗೂ ಮರ, ಮಣ್ಣು ಮನೆಯ ಮೇಲೆ ಬಂದು ಬಿದ್ದವು. ನಮ್ಮ ಮೇಲೆ ಮನೆಯೂ ಕುಸಿದು ಬಿತ್ತು. ನಾನು ಇಟ್ಟಿಗೆ ರಾಶಿಯನ್ನು ಜಾಗ ಮಾಡಿಕೊಂಡು ಮಗಳು, ಮೊಮ್ಮಗಳು ಅಳಿಯ ಎಲ್ಲರೂ ಹೊರಗೆ ಬಂದು ಬೆಟ್ಟದ ಕಡೆ ಓಡ ತೊಡಗಿದ್ದೇವು ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ.
ಅಲ್ಲಿಂದ ತಪ್ಪಿಸಿಕೊಂಡು ಕಾಡಿನ ಕಡೆಗೆ ಬಂದ್ರೆ ಅಲ್ಲಿ ನಮಗೆ ಎದುರಾಗಿ ನಿಂತವನೇ ಗಜರಾಜ. ನಮ್ಮ ಜೀವವೆ ಮತ್ತೆ ಹೋದಂತೆ ಆಗಿತ್ತು. ದೊಡ್ಡ ದುರಂತದಿಂದ ತಪ್ಪಿಸಿಕೊಂಡು ಬಂದಿದ್ದೀವಿ. ನೀನು ನಮಗೇನೂ ಮಾಡಬೇಡಪ್ಪಾ. ಕತ್ತಲೂ ಇದೆ, ಎಲ್ಲವನ್ನೂ ಕಳೆದುಕೊಂಡು ಬಂದಿದ್ದೇವೆ ಎಂದು ನಾನು ಆನೆಯ ಮುಂದೆ ನಿಂತು ಕಣ್ಣೀರು ಹಾಕಿದೆ. ಆನೆಯ ಕಣ್ಣಿನಿಂದಲೂ ನೀರು ಬಂತು. ರಾತ್ರಿ ಬೆಳಗಾಗುವವರೆಗೆ ನಾವು ಆನೆಯ ಕಾಲ ಹತ್ತಿರವೇ ಸಮಯ ಕಳೆದೆವು. ಬೆಳಗ್ಗೆ 6 ಗಂಟೆಯಾದಾಗ ಎಲ್ಲಿಂದಲೋ ಜನರು ಬಂದರು. ನಮ್ಮನ್ನು ಕಾಪಾಡಲು ನಮ್ಮ ಊರಿನವರು ಯಾರೂ ಬದುಕುಳಿದಿರಲಿಲ್ಲ. ಅಮೇಲೆ ದೂರದೂರಿನಿಂದ ಬಂದ ಜನರು ನಮ್ಮನ್ನು ಕಾಪಾಡಿ ಸುರಕ್ಷಿತ ಜಾಗಕ್ಕೆ ತಲುಪಿಸಿದ್ದಾರೆ ಎಂದು ಹೇಳುತ್ತಾ ಮೂಕ ಪ್ರಾಣಿಯ ಮಾನವೀಯತೆ ನೆನೆದು ಬಿಕ್ಕಿಬಿಕ್ಕಿ ಅತ್ತಿದ್ದಾರೆ.
ಮೂರು ಆನೆ ಆ ಬೆಟ್ಟದಲ್ಲಿತ್ತು. ನಮ್ಮ ಬಳಿ ನಿಂತಿದ್ದು ಗಂಡಾನೆ. ಅಲ್ಲಿದ್ದದ್ದು ನಾನು ಮತ್ತು ಮೊಮ್ಮಗಳು ಮಾತ್ರ. ಮಗಳು ಗಾಯವಾಗಿ ಕಾಫಿ ತೋಟದಲ್ಲಿ ಮಲಗಿದ್ದ. ಅಳಿಯ ಬಾಕಿ ಉಳಿದವರನ್ನು ಕಾಪಾಡಲು ಓಡುತ್ತಿದ್ದ. ಪ್ರಾಣಾಪಾಯವೇನೂ ಸಂಭವಿಸಿಲ್ಲ. ನನ್ನ ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಂತ್ರಸ್ತ ಮಹಿಳೆ ತನಾಗದ ಅನುಭವ ಹಂಚಿಕೊಂಡಿದ್ದಾರೆ.
ಈ ಸ್ಟೋರಿ ಇದೀಗ ವೈರಲ್ ಆಗಿದ್ದು, ಜಗರಾಜನ ಮಾನವೀಯ ಕಾರ್ಯಕ್ಕೆ ಎಲ್ಲಡೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.