ಮುಂಬೈ: ಜೀವನದಲ್ಲಿ ಆ ಒಂದು ಕೆಲಸವನ್ನು ಎಂದಿಗೂ ಮಾಡಬೇಡ ಎಂದು ನನ್ನ ತಾಯಿ ನನಗೆ ಸಲಹೆ ನೀಡಿದ್ದಾರೆ ಮತ್ತು ನಾನದನ್ನು ಬಲವಾಗಿ ಅನುಸರಿಸುತ್ತೇನೆ ಎಂದು ಬಾಲಿವುಡ್ ಬ್ಯೂಟಿ ಜಾಹ್ನವಿ ಕಪೂರ್ ಇಂಟೆರೆಸ್ಟಿಂಗ್ ಹೇಳಿಕೆ ನೀಡಿದ್ದಾರೆ.
ದಿವಂಗತ ನಟಿ ಶ್ರೀದೇವಿ ಪುತ್ರಿಯಾಗಿ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ಜಾಹ್ನವಿ ಕಪೂರ್, ತನ್ನ ಸೌಂದರ್ಯ ಹಾಗೂ ನಟನೆಯಿಂದ ಬಾಲಿವುಡ್‌ನಲ್ಲಿ ತನ್ನದೇಯಾದ ವಿಶಿಷ್ಟ ಇಮೇಜ್ ಕ್ರಿಯೇಟ್ ಮಾಡಿಕೊಂಡಿದ್ದಾರೆ. ಚಿತ್ರರಂಗದ ಹಿನ್ನೆಲೆ ಇದ್ದಿದ್ದರಿಂದ ಜಾಹ್ನವಿ ಕಪೂರ್ ಚಿತ್ರರಂಗದಲ್ಲಿ ಬೆಳೆಯಲು ನೆರವಾಯಿತು. ಆದರೂ ಈ ಬ್ಯೂಟಿ ನಟನೆಯಲ್ಲಿ ಹಿಂದುಳಿದಿಲ್ಲ. ಏಕೆಂದರೆ, ಚಾಲೆಂಜಿಂಗ್ ಪಾತ್ರಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.
ಜಾಹ್ನವಿ ಅವರು ಬಾಲಿವುಡ್‌ನಲ್ಲಿ ಪ್ರಯೋಗಾತ್ಮಕ ಚಿತ್ರಗಳನ್ನು ಮಾಡಿದರೆ, ಇತ್ತ ತೆಲುಗಿನಲ್ಲಿ ಏಕಕಾಲದಲ್ಲಿ ಎರಡು ದೊಡ್ಡ ಕಮರ್ಷಿಯಲ್ ಪ್ರಾಜೆಕ್ಟ್ ಅನ್ನು ಕೈಗೆತ್ತಿಕೊಂಡಿದ್ದಾರೆ. ನಟ ರಾಮ್ ಚರಣ್ ಜತೆಯಲ್ಲಿ ಬುಚ್ಚಿಬಾಬು ಸನಾ ನಿರ್ದೇಶನದ ಆರ್ಸಿ 16 ಚಿತ್ರದಲ್ಲಿ ಮತ್ತು ಜೂ.ಎನ್ಟಿಆರ್ ಜೊತೆಗೆ ದೇವರ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜಾಹ್ನವಿ ಅವರ ಇತ್ತೀಚಿನ ಚಿತ್ರ ‘ಉಲಾಜ್’ ಹಿಂದಿಯಲ್ಲಿ ಬಿಡುಗಡೆಯಾಯಿತು. ಈ ಚಿತ್ರದ ಪ್ರಚಾರದ ವೇಳೆ ಅವರು ಕುತೂಹಲಕಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಅದೇನೆಂದರೆ, ಚಿತ್ರದ ಪಾತ್ರಕ್ಕಾಗಿ ಕೂದಲು ಕಟ್ ಮಾಡುವಂತೆ ನಿರ್ದೇಶಕರು ಹೇಳಿದ್ದರು. ಆದರೆ, ಅದಕ್ಕೆ ನಾನು ಒಪ್ಪಲಿಲ್ಲ ಎಂದಿರುವ ಜಾಹ್ನವಿ, ಅದಕ್ಕೆ ಕಾರಣ ಏನು ಎಂಬುದನ್ನು ಸಹ ವಿವರಿಸಿದ್ದಾರೆ.
ಇದು ನನ್ನ ವೃತ್ತಿ ಜೀವನವನ್ನೇ ಬದಲಾಯಿಸುವ ಪಾತ್ರ ಎಂದು ಹೇಳಿದರೂ ಕೂಡ ನಾನು ಕೂದಲು ಕತ್ತರಿಸಿಕೊಳ್ಳಲು ಬಯಸುವುದಿಲ್ಲ. ನಾನು ಎಲ್ಲ ರೀತಿಯ ಪಾತ್ರ ಬೇಕಾದರೂ ಮಾಡುತ್ತೇನೆ. ಆದರೆ, ತಲೆಗೂದಲು ಇಲ್ಲದ ಪಾತ್ರವನ್ನು ಮಾತ್ರ ಒಪ್ಪಿಕೊಳ್ಳಲಾರೆ, ಈ ಚಿತ್ರದಲ್ಲಿ ವಿಎಫ್‌ಎಕ್ಸ್ ಬಳಸಲಾಗಿದೆ ಎಂದು ಹೇಳಿದರು.
ನನ್ನ ಈ ನಿರ್ಧಾರಕ್ಕೆ ತಮ್ಮ ತಾಯಿ ಶ್ರೀದೇವಿ ಸಲಹೆ ಕಾರಣ ಎಂದರು. ತನ್ನ ಮೊದಲ ಚಿತ್ರ ದಡಕ್ ಮಾಡುವಾಗ ತನ್ನ ಕೂದಲನ್ನು ಕತ್ತರಿಸಬೇಕಾಯಿತು. ಇದರಿಂದ ನನ್ನ ತಾಯಿ ತುಂಬಾ ಕೋಪಗೊಂಡರು ಮತ್ತು ನೊಂದುಕೊಂಡರು. ನೀನು ನನಗೆ ಹೇಳದೆ ಇದನ್ನೆಲ್ಲಾ ಹೇಗೆ ಮಾಡಿದೆ? ಇನ್ನು ಮುಂದೆ ಯಾವುದೇ ಪಾತ್ರಕ್ಕಾಗಿ ಕೂದಲು ಕತ್ತರಿಸಬೇಡ ಎಂದು ಸಲಹೆ ನೀಡಿದ್ದರು. ಹಾಗಾಗಿ ಹೇರ್ ಕಟ್ ಮಾಡಿಕೊಳ್ಳುವುದಿಲ್ಲ. ಇದು ತಾಯಿಯ ಕಟ್ಟುನಿಟ್ಟಿನ ಸಲಹೆಯಾಗಿರುವುದರಿಂದ ಅದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇನೆ ಎಂದು ಜಾಹ್ನವಿ ಸ್ಪಷ್ಟನೆ ನೀಡಿದ್ದಾರೆ. (ಏಜೆನ್ಸೀಸ್)
ಓದುಗರಿಗೆ ಮೆಗಾ ಕೊಡುಗೆ: ಬಹುಮಾನ ಗೆಲ್ಲಲು ವಿಜಯವಾಣಿ ಓದಿ, ಆಗಸ್ಟ್ 2ರಿಂದ ನವೆಂಬರ್ 14ರವರೆಗೆ ಸ್ಪರ್ಧೆ
ಎಲ್ಲವನ್ನೂ ಕಳೆದುಕೊಂಡಿದ್ದೇನೆಂದು ಕಣ್ಣೀರಿಟ್ಟ ಅಜ್ಜಿ ಮಾತಿಗೆ ಕರಗಿದ ಕಾಡಾನೆ! ದಟ್ಟಕಾಡಿನಲ್ಲಿ ರಕ್ಷಕನಾದ ಗಜ
ಮುಖ್ಯ ಕೋಚ್ ಆದ ನಂತ್ರ ನಡೆದ ಮೊದಲ ಏಕದಿನ ಪಂದ್ಯವೇ ಟೈ: ಗಂಭೀರ್ ಪ್ರತಿಕ್ರಿಯೆ ವೈರಲ್