More

    ಮೃಣಾಲ್ ಠಾಕೂರ್ ಜತೆ ಖ್ಯಾತ ಗಾಯಕ ಡೇಟಿಂಗ್?; ವದಂತಿಗೆ ಸಿಂಗರ್​ ಕೊಟ್ಟ ಪ್ರತಿಕ್ರಿಯೆ ಹೀಗಿದೆ

    ಮುಂಬೈ: ಟಾಲಿವುಡ್​ನ ಬ್ಯೂಟಿ, ‘ಸೀತಾರಾಮಂ’ ಖ್ಯಾತಿಯ ನಟಿ ಮೃಣಾಲ್ ಠಾಕೂರ್ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದು, ಈ ಬಾರಿ ಸಿನಿಮಾ ಕುರಿತಾಗಿ ಅಲ್ಲ, ಬದಲಿಗೆ ಜನಪ್ರಿಯ ಗಾಯಕನನ್ನು ಡೇಟಿಂಗ್​ ಮಾಡುತ್ತಿರುವ ವಿಚಾರವಾಗಿ. ಇತ್ತೀಚೆಗಷ್ಟೇ ನಟ ನಾನಿ ಜತೆಗೆ ನಟಿಸಿದ ‘ಹಾಯ್​ ನನ್ನಾ’ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗುವ ಮುಖೇನ ಕಾಣಿಸಿಕೊಳ್ಳುತ್ತಿದ್ದ ನಟಿ, ಇದೀಗ ಸಿಂಗರ್​ವೊಟ್ಟಿಗೆ ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ವದಂತಿಗೆ ಸಿಲುಕಿದ್ದಾರೆ.

    ಇದನ್ನೂ ಓದಿ: ವಿದ್ಯುತ್​ ಕಳ್ಳತನ ಆರೋಪ; ಹಿಟ್ ಅಂಡ್ ರನ್ ನಿಮ್ಮ ಕಾಯಕ ಆಗಿದ್ದು ನಿಮ್ಮ ಪಲಾಯನವಾದದ ಭಾಗವಲ್ಲವೇ: ರಾಜ್ಯ ಕಾಂಗ್ರೆಸ್ ಕಿಡಿ

    ಸದ್ಯ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಕಾರಣ ಹೀಗಿದೆ. ಇತ್ತೀಚೆಗೆ ದೀಪಾವಳಿ ಹಬ್ಬವನ್ನು ಸಂಭ್ರಮಿಸಲು ನಟಿ ಶಿಲ್ಪಾ ಶೆಟ್ಟಿ ಅವರ ಮುಂಬೈ ನಿವಾಸಕ್ಕೆ ತೆರಳಿದ್ದ ಮೃಣಾಲ್, ಅಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

    ಹಬ್ಬದ ಕೆಲವು ಫೋಟೋ, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹಂಚಿಯಾಗಿದ್ದವು. ದೃಶ್ಯದಲ್ಲಿ ಮೃಣಾಲ್ ಮತ್ತು ಖ್ಯಾತ ರಾಪರ್ ಬಾದ್‌ಶಾ ಪರಸ್ಪರ ಕೈ ಕೈ ಹಿಡಿದುಕೊಂಡಿರುವುದು ಕಂಡುಬಂದಿದೆ. ಇದನ್ನು ನೋಡಿದ ನೆಟ್ಟಿಗರು ಮೃಣಾಲ್-ಬಾದ್‌ಶಾ ಮಧ್ಯೆ ಲವ್ವಿಡವ್ವಿ ನಡೆಯುತ್ತಿದೆ ಎಂದು ಅನಿಸಿಕೆ ಹೊರಹಾಕಿದ್ದಾರೆ.

    ಇದನ್ನೂ ಓದಿ: ಬೆಟ್ಟಿಂಗ್ ಆ್ಯಪ್ ಸುಳಿಗೆ ಈ ಪ್ರಖ್ಯಾತ ಕಂಪನಿಯೂ ಸಿಲುಕಿತಾ?: ದಾಖಲಾಯಿತು ಎಫ್​ಐಆರ್​!

    ಈ ವದಂತಿಗೆ ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪ್ರತಿಕ್ರಿಯಿಸಿದ ಗಾಯಕ, “ಇದು ನೀವು ಅಂದುಕೊಂಡಂತೆ ಇಲ್ಲ” ಎಂದು ಬರೆದು, ನಗುವ ಎಮೋಜಿಯನ್ನು ಹಾಕುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ,(ಏಜೆನ್ಸೀಸ್).

    ವೈರಲ್ ಆಗ್ತಿದೆ ವರ್ತೂರು ಸಂತೋಷ್​ ಮದುವೆ ವಿಡಿಯೋ!; ಅಷ್ಟಕ್ಕೂ ಅಸಲಿ ಸಂಗತಿಯೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts