ನವದೆಹಲಿ: ದೇಶದಲ್ಲಿ ಕೆಲವು ದಿನಗಳಿಂದ ಮಹದೇವ ಬೆಟ್ಟಿಂಗ್ ಆ್ಯಪ್ ಪ್ರಕರಣ ಸದ್ದು ಮಾಡುತ್ತಿದ್ದು, ಸಿನಿಮಾ ಸ್ಟಾರ್ಗಳು ಸೇರಿದಂತೆ ಹಲವು ಗಣ್ಯರು ಈ ಬೆಟ್ಟಿಂಗ್ ಆ್ಯಪ್ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ಇದೀಗ ಪ್ರತಿಷ್ಠಿತ ಕಂಪನಿಯೊಂದು ಕೂಡ ಈ ಬೆಟ್ಟಿಂಗ್ ಆ್ಯಪ್ ಸುಳಿಗೆ ಸಿಲುಕಿದ್ದು, ಅದರ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ.
ಡಾಬರ್ ಕಂಪನಿಯ ಚೇರ್ಮನ್ ಮೋಹಿತ್ ವಿ. ಬರ್ಮನ್ ಮತ್ತು ನಿರ್ದೇಶಕ ಗೌರವ್ ವಿ. ಬರ್ಮನ್ ವಿರುದ್ಧ ಮಹದೇವ ಬೆಟ್ಟಿಂಗ್ ಆ್ಯಪ್ ಪ್ರಕರಣದಲ್ಲಿ ಆರೋಪ ಕೇಳಿಬಂದಿದ್ದು, ಇವರ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ. ಆದರೆ ಬರ್ಮನ್ ಕುಟುಂಬಸ್ಥರು ಈ ಆರೋಪವನ್ನು ನಿರಾಕರಿಸಿದ್ದಾರೆ.
ಇದನ್ನೂ ಓದಿ: ಗೋವಾಗೆ ಆಗಮಿಸುವ ಪ್ರವಾಸಿಗರ ಮೇಲೆ ನಿರ್ಬಂಧ ಹೇರಲಾಗುವುದೇ?; ಕಾಂಗ್ರೆಸ್ನಿಂದ ಸರ್ಕಾರಕ್ಕೆ ಒತ್ತಾಯ
ಮಹದೇವ ಬೆಟ್ಟಿಂಗ್ ಆ್ಯಪ್ ಪ್ರಕರಣದಲ್ಲಿ ಮುಂಬೈ ಪೊಲೀಸರು ದಾಖಲಿಸಿಕೊಂಡಿರುವ ಕೇಸ್ನಲ್ಲಿ ಇರುವ 32 ಹೆಸರುಗಳ ಪೈಕಿ ಡಾಬರ್ ಕಂಪನಿಯ ಮೋಹಿತ್ ಮತ್ತು ಗೌರವ್ ಅವರ ಹೆಸರುಗಳೂ ಇವೆ ಎನ್ನಲಾಗಿದೆ.
ಆದರೆ, ನಮಗೆ ಅಂಥ ಎಫ್ಐಆರ್ ಕುರಿತು ಯಾವುದೇ ಮಾಹಿತಿ ಬಂದಿಲ್ಲ. ಅಷ್ಟಕ್ಕೂ ಈ ಕೇಸ್ ದಾಖಲಾಗಿರುವುದು ಸತ್ಯವಾಗಿದ್ದರೆ, ಅದು ಷಡ್ಯಂತ್ರ ಎಂದು ಡಾಬರ್ ಕಂಪನಿಯ ವಕ್ತಾರರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ.
ಅಲ್ಲದೆ ಎಫ್ಐಆರ್ ದಾಖಲಾಗಿದ್ದರೆ ನಮಗೆ ಕಾನೂನುವ್ಯವಸ್ಥೆಯಲ್ಲಿ ನಂಬಿಕೆ ಇದೆ, ಸತ್ಯ ಏನು ಎಂಬುವುದು ಕಾನೂನುಪ್ರಕ್ರಿಯೆಯಲ್ಲಿ ಬಹಿರಂಗಗೊಳ್ಳಲಿದೆ ಎಂದು ಹೇಳಿದ್ದಾರೆ.
ಎಂ. ಚಿನ್ನಸ್ವಾಮಿ ಸ್ಟೇಡಿಯಂ ಎಲ್ಲರಿಗೂ ಗೊತ್ತು: ಆದರೆ ಈ ಕ್ರೀಡಾಂಗಣಕ್ಕೆ ಯಾಕೆ ಆ ಹೆಸರು ಬಂತು?
ಆ 10 ಸಾವಿರ ಅದೃಷ್ಟವಂತರಲ್ಲಿ ನೀವೂ ಒಬ್ರಾ? ಚೆಕ್ ಮಾಡಿಕೊಳ್ಳುವುದು ಹೇಗೆ?