More

    ವೈರಲ್ ಆಗ್ತಿದೆ ವರ್ತೂರು ಸಂತೋಷ್​ ಮದುವೆ ವಿಡಿಯೋ!; ಅಷ್ಟಕ್ಕೂ ಅಸಲಿ ಸಂಗತಿಯೇನು?

    ಬೆಂಗಳೂರು: ಕನ್ನಡ ಬಿಗ್​ಬಾಸ್​ ಸೀಸನ್​ 10ರ ಸ್ಪರ್ಧಿ ‘ಹಳ್ಳಿ ಕಾರ್’​ ಎಂದೇ ಖ್ಯಾತರಾದ ವರ್ತೂರು ಸಂತೋಷ್​ ಇದೀಗ ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲ ಒಂದು ವಿಚಾರಗಳಿಂದ ಸುದ್ದಿಯಾಗುತ್ತಿದ್ದಾರೆ.

    ಇದನ್ನೂ ಓದಿ: ಶ್ರೀಲಂಕಾದಲ್ಲಿ ಪ್ರಬಲ ಭೂಕಂಪ- 6.2 ತೀವ್ರತೆ ದಾಖಲು : ಲಡಾಕ್​ನಲ್ಲೂ ಕಂಪಿಸಿದ ಭೂಮಿ…

    ಈ ಹಿಂದೆ ತಮ್ಮ ಕತ್ತಿನಲ್ಲಿ ಧರಿಸಿದ್ದ ಲಾಕೆಟ್​ ಹುಲಿ ಉಗುರು ಎಂಬ ವಿವಾದಕ್ಕೆ ಸಿಲುಕಿ ಬಿಗ್​ ಮನೆಯಿಂದ ರಾತ್ರೋ ರಾತ್ರಿ ಹೊರಬಂದಿದ್ದರು. ಆದಾದ ಬಳಿಕ ಇತ್ತೀಚೆಗೆ ಸುದೀಪ್​ ಮುಂದೆ ನಾನು ಮನೆಯಲ್ಲಿ ಉಳಿಯಲು ಇಷ್ಟಪಡಿಸುವುದಿಲ್ಲ, ಕಳಿಸಿಬಿಡಿ ಎಂದು ಹಠ ಮಾಡುವ ಮೂಲಕ ಸುದ್ದಿಯಾಗಿದ್ದರು. ಈಗ ಅವರ ಮದುವೆ ಕುರಿತಾದ ಒಂದು ವಿಡಿಯೋ ಮೂಲಕ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿಯಾಗಿದ್ದಾರೆ. ಅಷ್ಟಕ್ಕೂ ಏನಿದು ಮದುವೆ ಕಥೆ?

    ವೈರಲ್ ಆಗ್ತಿದೆ ವರ್ತೂರು ಸಂತೋಷ್​ ಮದುವೆ ವಿಡಿಯೋ!; ಅಷ್ಟಕ್ಕೂ ಅಸಲಿ ಸಂಗತಿಯೇನು?

    ಬಿಗ್​ ಬಾಸ್​ ಮನೆಗೆ ವಿವಿಧ ಕ್ಷೇತ್ರಗಳಿಂದ ಬಂದಿರುವ ಸ್ಪರ್ಧಿಗಳ ಪೈಕಿ ರೈತಾಪಿ ವರ್ಗವನ್ನು ಪ್ರತಿನಿಧಿಸುವ ಒಬ್ಬ ಕೃಷಿಕನಾಗಿ ಎಂಟ್ರಿ ಕೊಟ್ಟ ವರ್ತೂರು ಸಂತೋಷ್​, ಮನೆಯಲ್ಲಿನ ಚಟುವಟಿಕೆಗಳಲ್ಲಿ ತಮ್ಮ ಪಾಲ್ಗೊಳ್ಳುವಿಕೆಯಿಂದ ಎಲ್ಲರ ಗಮನ ಸೆಳೆದಿದ್ದರು. ಜನಸಾಮಾನ್ಯರಿಂದ ಬಹುಮತಗಳನ್ನು ಪಡೆದು ವಾರಾಂತ್ಯದಲ್ಲಿ ಸೇಫ್​ ಆಗುತ್ತಿರುವ ವರ್ತೂರು ಸಂತೋಷ್​ ಮದುವೆಯಾಗಿದ್ದಾರೆ ಎನ್ನಲಾದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

    ಇದನ್ನೂ ಓದಿ: ದೀಪಾವಳಿ ಹಬ್ಬ: ಹೊಸ ಲುಕ್​ನಲ್ಲಿ ಮಾಲಾಶ್ರೀ-ಆರಾಧನಾ; ಇಲ್ಲಿವೆ ನೋಡಿ ಫೋಟೋಸ್​

    ಜಯಶ್ರೀ ಎಂಬುವವರ ಜತೆಗೆ ವರ್ತೂರು ಸಂತೋಷ್​ ಮದುವೆಯಾಗಿದ್ದಾರೆ ಎಂದು ಹೇಳಲಾಗಿದ್ದು, ಈ ಕುರಿತಂತೆ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.

    ಆದ್ರೆ, ಈ ಬಗ್ಗೆ ಯಾವುದೇ ಸ್ಪಷ್ಟನೆ ಸದ್ಯಕ್ಕೆ ದೊರೆತಿಲ್ಲ. ಸಂತೋಷ್​ ಮದುವೆಯಾದ ಹುಡುಗಿಯ ತಂದೆ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಮುಖೇನ ತಮ್ಮ ಆರೋಪವನ್ನು ಎಸಗಿದ್ದಾರೆ. ಸದ್ಯ ಈ ಕುರಿತಂತೆ ಸಂತೋಷ್​ ಅವರ ಕುಟುಂಬದವರು ಏನು ಹೇಳಲಿದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

    ಏನಿದು ‘ಎಡಗೈಯೇ ಅಪಘಾತಕ್ಕೆ ಕಾರಣ’?; ಇಲ್ಲಿದೆ ಕುತೂಹಲಕಾರಿ ಸಂಗತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts