More

    ಶ್ರೀಲಂಕಾದಲ್ಲಿ ಪ್ರಬಲ ಭೂಕಂಪ- 6.2 ತೀವ್ರತೆ ದಾಖಲು : ಲಡಾಕ್​ನಲ್ಲೂ ಕಂಪಿಸಿದ ಭೂಮಿ…

    ಕೊಲಂಬೊ: ನೆರೆಯ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಮಂಗಳವಾರ ಮಧ್ಯಾಹ್ನ 12.30ರ ಸುಮಾರಿಗೆ ಇದ್ದಕ್ಕಿದ್ದಂತೆ ಭೂಮಿ ಕಂಪಿಸಿತು. ಇದರಿಂದ ಭಯಭೀತರಾದ ಜನ ಮನೆಗಳಿಂದ ಹೊರಗೆ ಓಡಿ ಬಂದರು.

    ಇದನ್ನೂ ಓದಿ: ಹಮಾಸ್ ಸಂಸತ್​ ಭವನವನ್ನು ವಶಪಡಿಸಿಕೊಂಡ ಇಸ್ರೇಲ್​ ಸೇನೆ
    ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.2 ರಷ್ಟಿತ್ತು ಎಂದು ಭೂಕಂಪನದ ರಾಷ್ಟ್ರೀಯ ಕೇಂದ್ರವು ಬಹಿರಂಗಪಡಿಸಿದೆ. ಭೂಕಂಪದ ಕೇಂದ್ರಬಿಂದು ಕೊಲಂಬೊದಿಂದ ಆಗ್ನೇಯಕ್ಕೆ 1,326 ಕಿಮೀ ದೂರದಲ್ಲಿ 10 ಕಿಮೀ ಆಳದಲ್ಲಿತ್ತು.

    ಇನ್ನು ಭೂಕಂಪದಲ್ಲಿ ಪ್ರಾಣಹಾನಿ ಹಾಗೂ ಆಸ್ತಿಪಾಸ್ತಿ ನಷ್ಟವಾಗಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಶ್ರೀಲಂಕಾದ ಆಗ್ನೇಯಕ್ಕೆ 800 ಕಿಲೋಮೀಟರ್ ದೂರದಲ್ಲಿರುವ ಹಿಂದು ಮಹಾಸಾಗರದಲ್ಲಿ 10 ಕಿಲೋಮೀಟರ್ ಆಳದಲ್ಲಿ ಭೂಕಂಪ ಕೇಂದ್ರಸ್ಥಾನವಿದ್ದು, ಶ್ರೀಲಂಕಾಕ್ಕೆ ಯಾವುದೇ ಅಪಾಯವಿಲ್ಲ ಎಂದು ಭೂವೈಜ್ಞಾನಿಕ ಸಮೀಕ್ಷೆ ಮತ್ತು ಗಣಿ ಬ್ಯೂರೋ ಬಹಿರಂಗಪಡಿಸಿದೆ.

    ಲಡಾಖ್ ನಲ್ಲೂ ಭೂಕಂಪ: ಶ್ರೀಲಂಕಾದಲ್ಲಿ ಭೂಕಂಪ ಸಂಭವಿಸಿದ 30 ನಿಮಿಷದಲ್ಲಿ ಭಾರತದ ಲಡಾಖ್‌ನಲ್ಲಿ ಸಹ 4.4 ತೀವ್ರತೆಯ ಭೂಕಂಪ ಸಂಭವಿಸಿದೆ. ಲಡಾಕ್​ನಿಂದ 314ಕಿಮೀ ದೂರದಲ್ಲಿ 20 ಕಿಮೀ ಆಳದಲ್ಲಿ ಭೂ ಕಂಪನ ಕೇಂದ್ರವಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇತ್ತೀಚೆಗೆ ನೇಪಾಳ ಮತ್ತು ದೆಹಲಿ ಮತ್ತು ಉತ್ತರಭಾರತದ ರಾಜ್ಯಗಳಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ನೇಪಾಳದಲ್ಲಿ ಸಾವು, ನೋವು ಮತ್ತು ಮನೆ, ಆಸ್ತಿ ನಷ್ಟಕ್ಕೆ ಕಾರಣವಾಗಿತ್ತು. ಈಗ ಭಾರತದ ದಕ್ಷಿಣದಲ್ಲಿ ಪ್ರಭಲ ಭೂಕಂಪ ಸಂಭವಿಸಿರುವುದು ಭಾರತೀಯರ ಆತಂಕಕ್ಕೂ ಕಾರಣವಾಗಿದೆ.

    ಗೋವಾಗೆ ಆಗಮಿಸುವ ಪ್ರವಾಸಿಗರ ಮೇಲೆ ನಿರ್ಬಂಧ ಹೇರಲಾಗುವುದೇ?; ಕಾಂಗ್ರೆಸ್​ನಿಂದ ಸರ್ಕಾರಕ್ಕೆ ಒತ್ತಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts