ಆಗಸ್ಟ್​ 15ರಂದು ಅಲ್ಲು ಅರ್ಜುನ್​ ನಟನೆಯ 'ಪುಷ್ಪ 2' ರಿಲೀಸ್​ ಡೌಟ್​! ಹೀಗಿದೆ ಕಾರಣ

Untitled design - 2024-06-17T121312.435
Published on

ಆಂಧ್ರಪ್ರದೇಶ: ರಾಷ್ಟ್ರಪ್ರಶಸ್ತಿ ವಿಜೇತ, ಟಾಲಿವುಡ್​ನ ಐಕಾನ್​ ಸ್ಟಾರ್​, ನಟ ಅಲ್ಲು ಅರ್ಜುನ್ ಮತ್ತು ನಟಿ ರಶ್ಮಿಕಾ ಮಂದಣ್ಣ ಅಭಿನಯದ ಬಹುನಿರೀಕ್ಷಿತ ಪ್ಯಾನ್​ ಇಂಡಿಯಾ ‘ಪುಷ್ಪ 2’ ರಿಲೀಸ್​ ಬಗ್ಗೆ ಇದೀಗ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಹೆಚ್ಚಿದ್ದು, ಈ ಹಿಂದೆಯೇ ಚಿತ್ರತಂಡ ತಿಳಿಸಿದಂತೆ ಸಿನಿಮಾ ಇದೇ ಆಗಸ್ಟ್​ 15ರಂದು ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ. ಆದ್ರೆ, ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿರುವ ವದಂತಿಗಳ ಪ್ರಕಾರ, ನಿಗದಿಪಡಿಸಿದ ದಿನದಂದು ಅಲ್ಲು ಅರ್ಜುನ್ ಚಿತ್ರ ತೆರೆಕಾಣುವುದು ಅನುಮಾನ ಎಂದೇ ಹೇಳಲಾಗಿದೆ.

ಈ ವರ್ಷದ ಬ್ಲಾಕ್​ಬಸ್ಟರ್​ ಚಿತ್ರವಾಗಿ ಹೊರಹೊಮ್ಮಲಿರುವ 'ಪುಷ್ಪ 2: ದಿ ರೂಲ್'​ ಸಿನಿಮಾದ ರಿಲೀಸ್​ ದಿನಾಂಕದಲ್ಲಿ ಬದಲಾವಣೆಯಾಗಲಿದ್ದು, ನಿಗದಿಪಡಿಸಿದ ದಿನದಂದು ತೆರೆಕಾಣುವುದು ಬಹುತೇಕ ಡೌಟ್. ಸಿನಿಮಾದ ಹಲವು ಕೆಲಸಗಳು ಇನ್ನೂ ಬಾಕಿ ಉಳಿದಿದ್ದು, ಅದನ್ನು ಅಂತ್ಯಗೊಳಿಸಲು ಮತ್ತಷ್ಟು ಸಮಯದ ಅಗತ್ಯವಿದೆ. ಹೀಗಾಗಿ ಪುಷ್ಪ 2 ರಿಲೀಸ್ ದಿನಾಂಕ ಮುಂದೂಡಲಾಗುವುದು ಎಂಬ ಸುದ್ದಿಗಳು ಸದ್ಯ ವ್ಯಾಪಕವಾಗಿ ಕೇಳಿಬಂದಿವೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಚಿತ್ರ ತಯಾರಕರೇ ಆಗಲಿ ಅಥವಾ ಚಿತ್ರತಂಡವೇ ಇರಲಿ ಯಾರು ಕೂಡ ಪ್ರತಿಕ್ರಿಯೆ ನೀಡಿಲ್ಲ. ಇದು ಅಲ್ಲು ಅರ್ಜುನ್ ಅಭಿಮಾನಿಗಳನ್ನು ಭಾರೀ ಗೊಂದಲಕ್ಕೆ ದೂಡಿದ್ದು, ಚಿತ್ರತಂಡದ ಅಧಿಕೃತ ಘೋಷಣೆಗಾಗಿ ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದಾರೆ. ಮೈತ್ರಿ ಮೂವಿ ಮೇಕರ್ಸ್​ ನಿರ್ಮಾಣದಲ್ಲಿ ಮೂಡಿಬರಲಿರುವ ಚಿತ್ರವು ಬರೋಬ್ಬರಿ 6 ಪ್ರಮುಖ ಭಾಷೆಗಳಲ್ಲಿ ತೆರೆಕಾಣಲಿದೆ ಎಂದು ವರದಿಯಾಗಿದೆ.

ಸುಕುಮಾರ್​ ನಿರ್ದೇಶನದ ಚಿತ್ರದಲ್ಲಿ ಅಲ್ಲು ಅರ್ಜುನ್​, ಫಹದ್ ಫಾಸಿಲ್, ಸುನಿಲ್, ಅನಸೂಯಾ ಭಾರದ್ವಾಜ್, ರಶ್ಮಿಕಾ ಮಂದಣ್ಣ, ರಾವ್ ರಮೇಶ್​, ಸುನಿಲ್​ ಮುಂತಾದವರ ತಾರಾಗಣವಿದೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net