More

  ಯಾರ ಪ್ರಭಾವಕ್ಕೂ ಮಣಿಯದೇ ‘ರೀಲ್​ ಹೀರೋ’​ಗೆ ಬಿಸಿ ಮುಟ್ಟಿಸಿದ್ದೇ ಈ ಇಬ್ಬರು ಖಡಕ್ ಅಧಿಕಾರಿಗಳು! ಇವರೇ ನೋಡಿ ‘ರಿಯಲ್’ ಹೀರೋಸ್​

  ಬೆಂಗಳೂರು: ಕನ್ನಡ ಚಿತ್ರರಂಗದ ದಾಸ, ಅಭಿಮಾನಿಗಳ ಚಾಲೆಂಜಿಂಗ್ ಸ್ಟಾರ್​ ಎಂದೆಲ್ಲಾ ಕರೆಯಲ್ಪಟ್ಟ ನಟ ದರ್ಶನ್​ ಇದೀಗ ಕೊಲೆ ಪ್ರಕರಣವೊಂದರಲ್ಲಿ ಪ್ರಮುಖ ಆರೋಪಿಯಾಗಿ, ಪೊಲೀಸರ ಕಸ್ಟಡಿಯಲ್ಲಿದ್ದು, ನಿರಂತರ ವಿಚಾರಣೆಗೆ ಒಳಪಟ್ಟಿದ್ದಾರೆ. ಒಂದೆಡೆ ದರ್ಶನ್​ ಬಂಧನ ಚಿತ್ರರಂಗದ ಗಣ್ಯರು ಸೇರಿದಂತೆ ರಾಜ್ಯದ ಜನತೆಗೂ ಭಾರೀ ಅಚ್ಚರಿ ತಂದರೆ, ಹತ್ಯೆ ಪ್ರಕರಣದಲ್ಲಿ ಪೊಲೀಸರ ಅತಿಥಿಯಾಗಿರುವ ದರ್ಶನ್​ ಪರ ಬೆಂಬಲದ ಘೋಷಣೆಗಳನ್ನು ಕೂಗುತ್ತಿರುವ ಅಭಿಮಾನಿಗಳು ಮತ್ತೊಂದೆಡೆ. ಆರಂಭಿಕ ಹಂತದಲ್ಲೇ ಮುಚ್ಚಿಹೋಗಬೇಕಿದ್ದ ಈ ಪ್ರಕರಣದಲ್ಲಿ ದರ್ಶನ್​ರನ್ನು ಬಯಲಿಗೆಳೆದು ತಂದಿದ್ದೇ ಈ ಇಬ್ಬರು ದಕ್ಷ ಅಧಿಕಾರಿಗಳು.

  ಇದನ್ನೂ ಓದಿ: ಪ್ರವಾಸೋದ್ಯಮ ನೀತಿ ಬಗ್ಗೆ ಸಚಿವರ ಜತೆ ಚರ್ಚೆ: ಶಾಸಕ ಡಾ.ಮಂತರ್ ಗೌಡ

  ಮೂಲತಃ ಚಿತ್ರದುರ್ಗದವರಾದ ಮೃತ ರೇಣುಕಾಸ್ವಾಮಿ, ದರ್ಶನ್​ ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್​ವೊಂದನ್ನು​ ಕಳುಹಿಸಿದ್ದರು. ಈ ವಿಷಯಕ್ಕೆ ತನ್ನ ಆಪ್ತರೊಂದಿಗೆ ಸೇರಿ, ರೇಣುಕಾಸ್ವಾಮಿಗೆ ಮನಬಂದಂತೆ ಥಳಿಸಿದ್ದರು. ಚಿತ್ರಹಿಂಸೆ ನೀಡಿ ಹತ್ಯೆಗೈದ ಆರೋಪದಡಿ ಇತರೆ 13 ಆರೋಪಿಗಳೊಂದಿಗೆ ಇದೀಗ ದರ್ಶನ್​ ಅರೆಸ್ಟ್​ ಆಗಿರುವ ಸುದ್ದಿ ದೇಶವ್ಯಾಪಿ ಭಾರಿ ಚರ್ಚೆಯಾಗುತ್ತಿದೆ.

  ಸದ್ಯ ಎಲ್ಲ ಆರೋಪಿಗಳು ಪೊಲೀಸ್​ ಕಸ್ಟಡಿಯಲ್ಲಿದ್ದು, ವಿಚಾರಣೆ ಭರದಿಂದ ಸಾಗುತ್ತಿದೆ. ಅಸಲಿಗೆ ರೇಣುಕಾಸ್ವಾಮಿ ಮಣ್ಣಲ್ಲಿ ಮಣ್ಣಾದಂತೆ ಈ ಪ್ರಕರಣ ಕೂಡ ಬೆಳಕಿಗೆ ಬರುವ ಮುನ್ನವೇ ಆರಂಭಿಕ ಹಂತದಲ್ಲೇ ಮಣ್ಣಾಗಿ ಹೋಗಬೇಕಿತ್ತು. ದೊಡ್ಡ ದೊಡ್ಡ ಆಮಿಷಗಳು, ಪ್ರಭಾವಿಗಳ ನೆರಳು ಸೋಕಿದರೂ ಸಹ ದರ್ಶನ್​ರನ್ನು ಈ ಪ್ರಕರಣದಿಂದ ತಪ್ಪಿಸಿಕೊಳ್ಳದಂತೆ ಬೇಟೆಯಾಡಿದ್ದು, ಈ ರಿಯಲ್ ಹೀರೋ. ಇವರಿಲ್ಲದೇ ಹೋಗಿದ್ದರೆ, ಈ ಪ್ರಕರಣ ಗಾಳಿಯಲ್ಲಿ ತೇಲಿ ಹೋಗುತ್ತಿತ್ತು ಎಂಬುದರಲ್ಲಿ ಅನುಮಾನವೇ ಇಲ್ಲ.

  ಇದನ್ನೂ ಓದಿ: ಮುಗ್ಧರಾಗಿದ್ದ ದರ್ಶನ್ ಹೀಗಾಗಲು ಅದೊಂದೆ ಕಾರಣ! ದಚ್ಚು ಮಾಡಿದ ಈ ತಪ್ಪುಗಳಿಂದಲೇ ಹೀನಾಯ ಸ್ಥಿತಿ ಬಂತು!

  See also  ಫೈನಲ್‌ಗೇರಿ ಹೊಸ ಇತಿಹಾಸ ಬರೆದ ಬ್ಯಾಡ್ಮಿಂಟನ್ ತಂಡ: ಸೆಮಿಫೈನಲ್‌ನಲ್ಲಿ ಕೊರಿಯಾ ಎದುರು ರೋಚಕ ಗೆಲುವು

  ಆರಂಭಿಕ ಹಂತದಲ್ಲಿ ತಮ್ಮ ವ್ಯಾಪ್ತಿಗೆ ಸೇರಿದಾಗಲೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಉಪ ಪೊಲೀಸ್ ಆಯುಕ್ತ (ಪಶ್ಚಿಮ ವಿಭಾಗ) ಎಸ್. ಗಿರೀಶ್, ಮುಚ್ಚಿಹೋಗಬೇಕಿದ್ದ ಕೇಸ್​ ಅನ್ನು ಬಯಲಿಗೆಳೆದು, ಸತ್ಯಾಸತ್ಯತೆ ಹೊರತರುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಜನಸಾಮಾನ್ಯರು ಮೆಚ್ಚುವಂತೆ ಶ್ರಮಿಸಿದ್ದಾರೆ. ಈ ಡೈನಾಮಿಕ್ ಅಧಿಕಾರಿಗಳು ಇಲ್ಲದೇ ಹೋಗಿದಿದ್ದರೆ, ಪ್ರಕರಣದ ಸತ್ಯವು ಹೂತುಹೋಗುತ್ತಿತ್ತು ಎಂಬುದರಲ್ಲಿ ಸಂದೇಹವೇ ಇಲ್ಲ. ಈ ಬಗ್ಗೆ ಮಾತನಾಡಿದ ಹಿರಿಯ ಅಧಿಕಾರಿಯೊಬ್ಬರು, “ಕೊಲೆಯ ಆರೋಪದಲ್ಲಿ ರೀಲ್ ನಟನನ್ನು ಸೆರೆಹಿಡಿಯಲು ಧೈರ್ಯ ಬೇಕು. ಆ ಕೆಲಸವನ್ನು ಮಾಡುವಲ್ಲಿ ಡಿಸಿಪಿ ಗಿರೀಶ್​ ಮತ್ತು ಸಹಾಯಕ ಪೊಲೀಸ್ ಕಮಿಷನರ್ (ವಿಜಯನಗರ) ಚಂದನ್ ಕುಮಾರ್ ರಿಯಲ್ ಹೀರೋ ಆಗಿ ಕಾಣಿಸುತ್ತಾರೆ” ಎಂದು ಹೇಳಿದರು.

  ಈ ಪ್ರಕರಣದಲ್ಲಿ ಡಿಸಿಪಿ ಗಿರೀಶ್ ಮತ್ತು ಎಸಿಪಿ ಚಂದನ್​ ಕುಮಾರ್​ ಅವರ ಧೈರ್ಯ, ಖಡಕ್ ನಿರ್ಧಾರಕ್ಕೆ ರಾಜ್ಯದ ಜನತೆಯಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದು, ಪ್ರಸ್ತುತ ವಿಚಾರಣೆಯಲ್ಲಿರುವ ನಟ ದರ್ಶನ್​ಗೆ ಯಾವ ಶಿಕ್ಷೆ ದೊರೆಯಲಿದೆ ಎಂಬುದನ್ನು ಸದ್ಯ ಕಾದು ನೋಡಬೇಕಿದೆ.

  ರೇಣುಕಾಸ್ವಾಮಿ ಹತ್ಯೆ ಪ್ರಕರಣ: ಬೆಚ್ಚಿಬೀಳಿಸೋ ಸಂಗತಿ ಬಿಚ್ಚಿಟ್ಟ ಆರೋಪಿ ಪವಿತ್ರಾ ಗೌಡ! ಹೇಳಿದ್ದಿಷ್ಟು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts