ಉಚಿತ ಮೆಡಿಕಲ್​ ಸೀಟ್​ ಗಿಟ್ಟಿಸಿದ್ದ ಯುವತಿ ಸಾವಿಗೆ ಶರಣು; ಹಿರಿಯ ವೈದ್ಯರ ಮೇಲೆ ಕಿರುಕುಳದ ಆರೋಪ

medical student
Published on

ಕೋಲಾರ: ಕೋಲಾರದಲ್ಲಿ ರ‍್ಯಾಂಕ್ ಪಡೆದು ಮೆಡಿಕಲ್​ ಕಾಲೇಜೊಂದರಲ್ಲಿ ಉಚಿತ ಸೀಟ್​ ಗಿಟ್ಟಿಸಿಕೊಂಡಿದ್ದ ಯುವತಿ ಸಾವಿಗೆ ಶರಣಾಗಿದ್ದು ಎಲ್ಲರೂ ಆಶ್ಚರ್ಯಕ್ಕೆ ಈಡಾಗಿದ್ದಾರೆ. ಮೃತ ಯುವತಿಯನ್ನು ದರ್ಶಿನಿ ಎಂದು ಗುರುತಿಸಲಾಗಿದೆ.

ಕೋಲಾರದಲ್ಲಿ ನಡೆದಿರುವ ಈ ಪ್ರಕರಣದಲ್ಲಿ ಸಂಬಂಧಿಕರು ಕಾಲೇಜು ಆಡಳಿತ ಮಂಡಳಿಯ ಮೇಲೆ ಕಿರುಕುಳದ ಆರೋಪವನ್ನು ಹೊರಿಸಿದ್ದಾರೆ. ಈ ಮೆಡಿಕಲ್ ಕಾಲೇಜಿನ ಹಿರಿಯ ವೈದ್ಯರು ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಮೃತ ದರ್ಶನಿಯ ಸಂಬಂದಿಕರಾದ ಶ್ರೀನಿವಾಸ್ ಹಾಗೂ ಹನುಮಂತಪ್ಪ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ; ಯುವಕನಿಗೆ ಜೀವಾವಧಿ ಶಿಕ್ಷೆ ಪ್ರಕಟ

ದರ್ಶಿನಿ, ಕಳೆದ ಎರಡು ವರ್ಷದ ಹಿಂದೆಯಷ್ಟೆ ತಂದೆಯನ್ನು ಕಳೆದುಕೊಂಡಿದ್ದರು. ಈಕೆ ರ‍್ಯಾಂಕ್ ಪಡೆದು ಉಚಿತ ಕೋಟಾದಡಿ ಮೆಡಿಕಲ್ ಸೀಟ್ ಸಂಪದಾನೆ ಮಾಡಿದ್ದ ದರ್ಶಿನಿ ಆತ್ಮಹತ್ಯೆಗೆ ಮೆಡಿಕಲ್ ಕಾಲೇಜಿನವರೇ ಕಾರಣ ಎನ್ನಲಾಗುತ್ತಿದೆ. ಇದುವರೆಗೂ ಕಾಲೇಜು ಆಡಳಿತ ಮಂಡಳಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ: IRS ಅಧಿಕಾರಿ ಮೇಲೆ ಲೈಂಗಿಕ ಕಿರುಕುಳ ಆರೋಪ ಹೊರಿಸಿದ ಮಹಿಳಾ IAS ಅಧಿಕಾರಿ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net