ಶ್ರೇಯಾನಗರ ನಿವಾಸಿಗಳ ಸಂಘದಿಂದ ಸಾಧಕ ವಿದ್ಯಾರ್ಥಿಗಳಿಗೆ ಪುರಸ್ಕಾರ

sslc and puc recognition
Published on

ಹುಬ್ಬಳ್ಳಿ: ಹುಬ್ಬಳ್ಳಿಯ ಗೋಕುಲ ರಸ್ತೆಯ ಶ್ರೇಯಾನಗರ ನಿವಾಸಿಗಳ ಸಂಘದಿಂದ 2023ರ ದ್ವಿತೀಯ ಪಿಯುಸಿ ಮತ್ತು 10ನೇ ತರಗತಿಯಲ್ಲಿ ಶೇಕಡ 90%ಕ್ಕಿಂತ ಅಧಿಕ ಅಂಕ ಪಡೆದ ಶ್ರೇಯಾನಗರದ ನಿವಾಸಿಗಳ ಮಕ್ಕಳಿಗೆ ಪುರಸ್ಕಾರ ಕಾರ್ಯಕ್ರಮ ಅಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ದ್ವಿತೀಯ ಪಿಯುಸಿಯ 7 ಮಕ್ಕಳು ಮತ್ತು 10ನೇ ತರಗತಿಯ 3 ಮಕ್ಕಳನ್ನು ಸಂಘದ ವತಿಯಿಂದ ಪುರಸ್ಕರಿಸಲಾಯಿತು. ಹುಬ್ಬಳ್ಳಿ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಮಹೇಶ ಟೆಂಗಿನಕಾಯಿ ಮಕ್ಕಳನ್ನು ಪುರಸ್ಕರಿಸಿದರು.

ನಿವಾಸಿಗಳ ಸಂಘದ ಪರವಾಗಿ ನೂತನ ಶಾಸಕರನ್ನು ಅಭಿನಂದಿಸಲಾಯಿತು. ಈ ಕಾರ್ಯಕ್ರಮದಲ್ಲಿ ಡಾ|ವಿದ್ಯಾಧರ್ ಎಸ್ ದೋಣಿಮಠ, ಮತ್ತು ವಾಲ್ಮಿ ಸಂಸ್ಥೆ ಧಾರವಾಡ ನಿವೃತ್ತ ಸಹಪ್ರಾಧ್ಯಾಪಕರಾದ ಮಂಜುನಾಥ ವಿ ವಡವಡಗಿ, ಸಂಘದ ಅಧ್ಯಕ್ಷರಾದ ಪ್ರಕಾಶ ತೋಟದ್ ವೇದಿಕೆ ಹಂಚಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಸಂಘದ ಎಲ್ಲಾ ಸದಸ್ಯರು ಮತ್ತು ಶ್ರೇಯಾನಗರದ ಎಲ್ಲಾ ನಿವಾಸಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net