ಸಿಡಿ ಕೇಸ್​ಗೆ ಮತ್ತೊಂದು ಟ್ವಿಸ್ಟ್: ಹನಿ'ಟ್ರ್ಯಾಪ್' ಸೀಕ್ರೇಟ್​ ರಿವೀಲ್​!

CD Gril
Published on

ಬೆಂಗಳೂರು: ಮಾಜಿ ಸಚಿವ ರಮೇಶ್​ ಜಾರಕಿಹೊಳಿಯದ್ದು ಎನ್ನಲಾದ ಸೆಕ್ಸ್​ ಸಿಡಿ ಕೇಸ್​ನ ಹಿಂದಿನ‌‌ ಮಾಸ್ಟರ್ ಪ್ಲಾನ್ ಒಂದೊಂದಾಗಿ ರಿವೀಲ್ ಆಗುತ್ತಲೇ ಇದೆ. ತನಿಖೆ ಚುರುಕುಗೊಳಿಸಿರುವ ಎಸ್​ಐಟಿ ತಂಡ ಸಿಡಿ ಗ್ಯಾಂಗ್​ನ ಬೆನ್ನಹಿಂದೆ ಬಿದ್ದಿದ್ದು, ಈ ಕೇಸ್​ ಕ್ಷಣಕ್ಕೊಂದು ಟ್ವಿಸ್ಟ್​ ಪಡೆಯುತ್ತಿದೆ.

ಸಿಡಿ‌ ಮಾಡೋಕು ಮುನ್ನವೇ ಯುವತಿ ಜತೆ ಸೇರಿಕೊಂಡ ಸಿಡಿ ಗ್ಯಾಂಗ್​, ಭರ್ಜರಿ ಪ್ಲಾನ್ ಮಾಡಿತ್ತು ಎನ್ನಲಾಗಿದೆ. ಡ್ರೋನ್​ ಮೂಲಕ ಡ್ಯಾಂ ಚಿತ್ರೀಕರಣ ಮಾಡಿ ಸಾಕ್ಷ್ಯಚಿತ್ರ ಮಾಡುವುದಾಗಿ ಅಂದಿನ ಜಲಸಂಪನ್ಮೂಲ ಸಚಿವ ರಮೇಶ್​ ಜಾರಕಿಹೊಳಿಗೆ ಯುವತಿ ಮೂಲಕವೇ ಸಿಡಿ ಗ್ಯಾಂಗ್​ ಕಾಲ್ ಮಾಡಿಸಿತ್ತು. ಡ್ರೋನ್ ಹೆಸರಲ್ಲಿ ಕಲರ್ ಕಲರ್ ಕಾಗೆ ಹಾರಿಸಿ ಜಾರಕಿಹೊಳಿಗೆ ಗಾಳ ಹಾಕಲಾಗಿತ್ತು ಎನ್ನಲಾಗಿದೆ. ಇದನ್ನೂ ಓದಿರಿ ಊರೂರು ಸುತ್ತುತ್ತಿರೋ ‘ಸಿಡಿ ಲೇಡಿ’ ಈಗ ಎಲ್ಲಿದ್ದಾಳೆ? ಎಕ್ಸ್​ಕ್ಲೂಸಿವ್​ ಮಾಹಿತಿ ಇಲ್ಲಿದೆ

ಈ ಕುರಿತು ತನಿಖೆ ಕೈಗೊಂಡಿರುವ ಎಸ್​ಐಟಿ, ನಿಜಕ್ಕೂ ಸಾಕ್ಷ್ಯಚಿತ್ರ ಮಾಡಲು ಯುವತಿ ಮತ್ತು ತಂಡ ರೆಡಿಯಾಗಿತ್ತಾ? ಇಲ್ಲ ಹನಿಟ್ರ್ಯಾಪ್​ಗೆಂದೇ ಸಾಕ್ಷ್ಯಚಿತ್ರದ ಸುಳ್ಳಿನ ಸರಮಾಲೆ ಕಟ್ಟಿದ್ರಾ? ಒಂದು ವೇಳೆ ಸಾಕ್ಷ್ಯಚಿತ್ರ ತಯಾರಾಗಿದ್ರೆ ಯಾವುದು ಆ ಸಾಕ್ಷ್ಯಚಿತ್ರ? ಈ ಸಾಕ್ಷ್ಯಚಿತ್ರದ ಉದ್ದೇಶವೇನು? ಯಾರೆಲ್ಲಾ ಈ ಸಾಕ್ಷ್ಯಚಿತ್ರಕ್ಕೆ ಕೆಲಸ ಮಾಡಿದ್ರು? ಈ ಎಲ್ಲ ಆಯಾಮದಲ್ಲೂ ಎಸ್​ಐಟಿ ತಂಡ ತನಿಖೆ ನಡೆಸುತ್ತಿದೆ.

ಸದ್ಯ ರಮೇಶ್ ಜಾರಕಿಹೊಳಿ ಸಿಡಿ ಕೇಸ್​ ಸಂಬಂಧ ಎಸ್ಐಟಿ ಇದುವರೆಗೂ 50ಕ್ಕೂ ಹೆಚ್ಚು ಜನರನ್ನು ವಿಚಾರಣೆ ನಡೆಸಿದೆ.

ಆರೋಪಿತರೊಂದಿಗೆ ನಿಕಟ ಸಂಪರ್ಕ ಇರುವ ಎಲ್ಲರನ್ನೂ ವಿಚಾರಣೆ ಮಾಡುತ್ತಿದೆ. ಸಿಡಿ ಬಿಡುಗಡೆ ಹಿಂದಿನ ದಿನ ಒಟ್ಟು ಐವರು ಆರ್​ಟಿ ನಗರದಲ್ಲಿ ಸಭೆ ಮಾಡಿದ್ದರು. ಐವರು ಪ್ರಮುಖ ಶಂಕಿತರು ಒಂದೇ ಟವರ್ ಲೊಕೇಶನ್​ನಲ್ಲಿದ್ದ ಸಾಕ್ಷ್ಯ ಲಭ್ಯವಾಗಿದೆ. ಇದೇ ಕಾರಣಕ್ಕೆ ಐವರ ನಿಕಟ ಸಂಪರ್ಕದಲ್ಲಿರುವರನ್ನ ಎಸ್ಐಟಿ ವಿಚಾರಣೆ ಮಾಡುತ್ತಿದೆ. ಇಂದು ಕೂಡ ಹಲವರನ್ನ ವಿಚಾರಣೆಗೆ ಎಸ್ಐಟಿ ಅಧಿಕಾರಿಗಳು ಕರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net