ಹೈದರಾಬಾದ್: ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದರಲ್ಲಿ ಹೆಸರುವಾಸಿಯಾಗಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ(Ramgopal Varma) ಅವರನ್ನು ವಿಶೇಷವಾಗಿ ಪರಿಚಯಿಸುವ ಅವಶ್ಯಕತೆ ಇಲ್ಲ. ಏನೇ ಮಾತನಾಡಿದರೂ ಅದರಲ್ಲೊಂದು ವಿವಾದ ಹುಟ್ಟುಹಾಕುವ ರಾಮ್ ಗೋಪಾಲ್ ವರ್ಮಾ ಕಾಸ್ಟ್ ಫಿಲಿಂಗ್ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ಖಾಸಗಿ ವಾಹಿನಿಯ ಸಂದರ್ಶವೊಂದರಲ್ಲಿ ರಾಮ್ ಗೋಪಾಲ್ ವರ್ಮಾ ಅವರನ್ನು ನಿಮಗೆ ಕಾಸ್ಟ್ ಫಿಲಿಂಗ್ ಇದ್ದೆಯೇ ಎಂದುಕೇಳಲಾಯಿತು. ಅದ್ಕಕೆ ಉತ್ತರಿಸಿದ ರಾಮ್ ಗೋಪಾಲ್ ವರ್ಮಾ ನನಗೆ ಕಾಸ್ಟ್ ಫೀಲಿಂಗ್ಗಿಂತ ವರ್ಸ್ಟ್ ಫಿಲಿಂಗ್ ಇದೆ ಎಂದು ಹೇಳಿದ್ದಾರೆ. ಅದಕ್ಕಾಗಿ ನನಗೆ ಕಾಸ್ಟ್ ಫಿಲಿಂಗ್ ಇಲ್ಲ ಎಂದು ಹೇಳುವುದಿಲ್ಲ. ಏಕೆಂದರೆ ಕಾಸ್ಟ್ ಫಿಲಿಂಗ್ ಎಂಬುದು ಒಳ್ಳೆಯದು ಎಂಬುದು ನನ್ನ ಉದ್ದೇಶ ಎಂದು ತಿಳಿಸಿದರು. ಅಲ್ಲದೆ ಕಾಸ್ಟ್ ಫಿಲಿಂಗ್ ಒಳ್ಳೆಯದು ಎಂದು ಹೇಳಲು ಕಾರಣ ಏನೆಂಬುದನ್ನು ವಿವರಿಸಿದ್ದಾರೆ.
ಕಾಸ್ಟ್ ಫಿಲಿಂಗ್ ಎಂಬ ಭಾವನೆ ಹಾನಿಕಾರಕವಲ್ಲ. ಅವನಿಗೆ ಕಾಸ್ಟ್ ಫಿಲಿಂಗ್ ಇದೆ.. ಇವನಿಗೆ ಕಾಸ್ಟ್ ಫೀಲಿಂಗ್ ಇದೆ ಎಂದು ಹೇಳುವುದನ್ನು ನಾವು ಕೇಳುತ್ತಿರುತ್ತೇವೆ. ಇತ್ತೀಚೆಗೆ ಕುಲದ ಬಗ್ಗೆ ಕೇಳಿದವನು ಕತ್ತೆ ಎಂಬ ವರದಿಯನ್ನು ನಾನು ಮಾಧ್ಯಮದಲ್ಲಿ ನೋಡಿದ್ದೇನೆ. ಈ ರೀತಿ ವರದಿಯಿಂದಲೇ ಅದನ್ನು ಸಾಮಾಜಿಕ ಅನಿಷ್ಟ ಎಂಬರ್ಥದಲ್ಲಿ ನೋಡುತ್ತಾರೆ. ಆದರೆ ನನ್ನ ಉದ್ದೇಶದಲ್ಲಿ ಅದು ಸಾಮಾಜಿಕ ಅನಿಷ್ಟ ಅಲ್ಲ ಎಂದು ತಿಳಿಸಿದರು.
ಕಾಸ್ಟ್ ಫಿಲಿಂಗ್ ಸಾಮಾಜಿಕ ಅನಿಷ್ಟ ಅಲ್ಲ ಎಂದು ಹೇಳಲು ಕಾರಣ, ನನ್ನ ದೇಶ, ನನ್ನ ಕುಟುಂಬ, ನನ್ನ ಮನೆ, ನನ್ನ ಊರು, ನನ್ನ ಶಾಲೆ, ನಮ್ಮ ಆಫೀಸ್, ನಮ್ಮ ಕಂಪನಿ, ನನ್ನ ವ್ಯಾಪಾರ ಇದೆಲ್ಲಾ ಸರಿ ಎಂದು ಪರಿಗಣಿಸುವಾಗ ನನ್ನ ಕುಲ ಎಂಬುದೇಕೆ ತಪ್ಪಾಗುತ್ತದೆ. ಇದು ನನಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದ ಅವರು ಉದಾಹರಣೆಯೊಂದಿಗೆ ವಿವರಿಸಿದರು.
ವಿದೇಶಗಳಲ್ಲಿ ನೋಡುವುದಾದರೆ ನಮ್ಮ ದೇಶದಿಂದ ಹೋದವರು ಒಂದೆಡೆ ವಾಸಿಸುವ ಮೂಲಕ ಅಥವಾ ಒಂದು ಸಂಘಟನೆ ಮಾಡಿಕೊಳ್ಳುವ ಮೂಲಕ ಒಂದಾಗಿರುತ್ತಾರೆ. ಇದು ಹಾಗೆಯೇ ನಮ್ಮವರು ಎಂಬ ಪರಿಕಲ್ಪನೆಯಲ್ಲಿ ಮಾಡಿಕೊಳ್ಳುವ ಒಂದು ಗ್ರೂಪ್. ಇದು ಉದ್ದೇಶಪೂರ್ವ ಅನ್ನುವುದಕ್ಕಿಂತ ನಮ್ಮ ಸಂಸ್ಕೃತಿಯ ನೈಸರ್ಗಿಕ ಪ್ರಕ್ರಿಯೆಯಾಗಿದೆ. ಈ ರೀತಿಯ ಸೇರುವ ಭಾವನೆಯನ್ನು ತಪ್ಪು ಎಂದು ಹೇಳುವುದು ಅರ್ಥಹೀನಾ ಎಂಬುದು ನನ್ನ ಪರಿಕಲ್ಪನೆ ಎಂದಿದ್ದಾರೆ.
ನನಗೆ ಕಾಸ್ಟ್ ಫಿಲಿಂಗ್ ಇಲ್ಲ ಆದರೆ ನಾನು ಎಂಬ ವರ್ಸ್ಟ್ ಫಿಲಿಂಗ್ ಇದೆ. ಕಾಸ್ಟ್ ಫಿಲಿಂಗ್ ಎಂಬುದು ಕೇವಲ ಗಾಸಿಪ್ ಮಾಡಲು ಅಥವಾ ಮಾತನಾಡಲು ಇರುವುದಷ್ಟೆ. ಈಗ ಚಿರಂಜೀವಿ ಮತ್ತು ಪವನ್ ಕಲ್ಯಾಣ್ಗೆ ಕಾಪುಲು ಕಾಸ್ಟ್ ಎಂಬ ಕಾರಣಕ್ಕೆ ಸ್ಟಾರಡಮ್ ಇದೆ ಎಂದು ಹೇಳಲಾಗುವುದಿಲ್ಲ ಅಲ್ಲವೆ ಎಂದು ಹೇಳಿದ್ದಾರೆ. ಶಿವ ಸಿನಿಮಾದ ಮೂಲಕ ಚಲನಚಿತ್ರ ನಿರ್ದೇಶಕರಾಗಿ 1989ರಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ,1990 ರಲ್ಲಿ ಅದೇ ಚಿತ್ರವನ್ನು ‘ಶಿವಂ’ ಎಂದು ರಿಮೇಕ್ ಮಾಡಿದರು. ಬಾಲಿವುಡ್ನಲ್ಲಿ ಇದು ಅವರ ಚೊಚ್ಚಲ ಸಿನಿಮಾವಾಗಿದೆ. (ಏಜೆನ್ಸೀಸ್)