

ಹೈದರಾಬಾದ್: ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದರಲ್ಲಿ ಹೆಸರುವಾಸಿಯಾಗಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ(Ramgopal Varma) ಹುಡುಗಿಯರ ತಾಯಿಯಾಗುವ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ಖಾಸಗಿ ವಾಹಿನಿಯ ಸಂದರ್ಶವೊಂದರಲ್ಲಿ ರಾಮ್ ಗೋಪಾಲ್ ವರ್ಮಾ ನಟಿ ಐಶ್ವರ್ಯಾ ರೈ ಬಚ್ಚನ್ ಪ್ರೆಗ್ನೆಂಟ್ ಆಗಿದ್ದಾಗ ಆಕೆಗೆ ಸುದೀರ್ಘ ಮೆಸೇಜ್ ಒಂದನ್ನು ಕಳುಹಿಸಿದ್ದಾಗಿ ಹೇಳಿದ್ದಾರೆ.
ಐಶ್ವರ್ಯಾ ರೈ ಬಚ್ಚನ್ ಪ್ರೆಗ್ನೆಂಟ್ ಆಗಿದ್ದಾರೆ ಎಂಬ ಸುದ್ದಿ ಹೊರಬಂದಾಗ ನಾನು ಅವರಿಗೆ ಮೆಸೇಜ್ ಕಳುಹಿಸಿದ್ದೆ. ನಾನು ಅವರ ಈ ದ್ವೇಷಿಸಿದ್ದೆ. ಅಂದವಾಗಿರುವ ಒಬ್ಬ ಮಹಿಳೆ ಪ್ರೆಗ್ನೆಂಟ್ ಆಗುವುದನ್ನು ನಾನು ಸಹಿಸುವುದಿಲ್ಲ. ಏಕೆಂದರೆ ಪ್ರೆಗ್ನೆಂಟ್ ಆದ ಸಮಯದಲ್ಲಿ ಆ ಮಹಿಳೆಯರು ದೈಹಿಕವಾಗಿ ಬದಲಾವಣೆ ಆಗುತ್ತಾರೆ. ಮಕ್ಕಳಿಗೆ ಜನ್ಮ ನೀಡಲೆಂದೆ ಮಹಿಳೆಯರನ್ನು ದೇವರು ಸೃಷ್ಟಿಸಿದ್ದಾನೆ ಎಂಬುದು ನನಗೆ ಬ್ಯಾಡ್ ರಿಮೈಂಡರ್ ಆಗಿ ನೆನಪಾಗುತ್ತದೆ. ಈ ರೀತಿ ಸೃಷ್ಟಿದವನ ಮೇಲೆ ಕೋಪ ಬರುತ್ತದೆ ಎಂದು ಹೇಳಿದರು.
ಮಗುವಿಗೆ ಜನ್ಮ ನೀಡಿದ ಬಳಿಕ ಮಕ್ಕಳ ಪಾಲನೆ ಮಾಡುತ್ತಾ, ಮಕ್ಕಳ ವಿಚಾರವಾಗಿಯೇ ಹಲವು ಕೆಲಸಗಳಿಂದ ಒಬ್ಬ ಹುಡುಗಿಯ ಜೀವನ ಇನ್ನೊಂದು ಪ್ರಪಂಚಕ್ಕೆ ಹೋಗುತ್ತದೆ. ಇದೇ ಕಾರಣದಕ್ಕೆ ಮಕ್ಕಳೆಂದರೆ ನನಗೆ ಇಷ್ಟ ಆಗುವುದಿಲ್ಲ. ಏಕೆಂದರೆ ಮಕ್ಕಳು ಒಂದು ಹೆಣ್ಣಿನ ಅಂದವನ್ನು ಹಾಳುಮಾಡುತ್ತಾರೆ. ಈ ಒಂದೇ ಕಾರಣಕ್ಕೆ I Hate Children ಎಂದ ಅವರು ಇದೆಲ್ಲಾವನ್ನು ಬರೆದು ನಾನು ಐಶ್ವರ್ಯಾ ರೈ ಬಚ್ಚನ್ಗೆ ಮೆಸೇಜ್ ಕಳುಹಿಸಿದ್ದೆ ಎಂದು ತಿಳಿಸಿದರು.
ಅಲ್ಲದೆ ಆ ಮೆಸೇಜ್ನಲ್ಲಿ ಯಾವುದಾದರೂ ಕಾರಣಕ್ಕೆ ನೀನು ಮತ್ತು ಅಭಿಷೇಕ್ ಸಂತೋಷವಾಗಿರಬಹುದು, ಆದರೆ ನಿಮಗೋಸ್ಕರ ನಾನು ಖುಷಿಯಿಂದಿರುವಂತೆ ನಟಿಸುತ್ತೇನೆ ಎಂದು ಉಲ್ಲೇಖಿಸಿದ್ದೆ ಎಂದು ಹೇಳಿದರು. ಈ ಮೆಸೇಜ್ಗೆ ಐಶ್ವರ್ಯಾ ರೈ ಕಡೆಯಿಂದಲೂ ರಿಪ್ಲೆ ಬಂದಿತ್ತು. ಆ ಮೆಸೇಜ್ ಆಕೆಯ ಅಂದಕ್ಕೆ ಕೊಟ್ಟ ಕಾಂಪ್ಲಿಮೆಂಟ್, ಎಂದಿಗೂ ಆಕೆ ಹಾಗೆಯೇ ಇರಬೇಕೆಂಬ ಕೋರಿಕೆಗಾಗಿ ಈ ಮೆಸೇಜ್ ಮಾಡಿದ್ದೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದಕ್ಕಾಗಿ ಐಶ್ವರ್ಯಾ ರೈ ಬಚ್ಚನ್ ಐ ಲವ್ ಯು ಟೂ ರಾಮು ಎಂದು ಪ್ರತಿಕ್ರಿಯಿಸಿದ್ದರು ಎಂದಿದ್ದಾರೆ.
ನೀವು ದಯವಿಟ್ಟು ಮಕ್ಕಳಿಗೆ ಜನ್ಮ ಕೊಡಬೇಡಿ. ಎಂದೆಂದೂ ನಿಮ್ಮ ಅಂದ ಹಾಗೆಯೇ ಉಳಿದುಕೊಳ್ಳಬೇಕು. ಮಕ್ಕಳಿಗೆ ಜನ್ಮ ನೀಡಿ ನಿಮ್ಮ ಅಂದವನ್ನು ಕಳೆದುಕೊಳ್ಳಬೇಡಿ ಎಂಬುದೆ ಹುಡುಗಿಯರಿಗೆಲ್ಲಾ ನನ್ನ ಸಲಹೆ ಎಂದು ಹೇಳಿದರು. ಶಿವ ಸಿನಿಮಾದ ಮೂಲಕ ಚಲನಚಿತ್ರ ನಿರ್ದೇಶಕರಾಗಿ 1989ರಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ,1990 ರಲ್ಲಿ ಅದೇ ಚಿತ್ರವನ್ನು ‘ಶಿವಂ’ ಎಂದು ರಿಮೇಕ್ ಮಾಡಿದರು. ಬಾಲಿವುಡ್ನಲ್ಲಿ ಇದು ಅವರ ಚೊಚ್ಚಲ ಸಿನಿಮಾವಾಗಿದೆ. (ಏಜೆನ್ಸೀಸ್)