ಚೆನ್ನೈ: ಶಿವಕಾರ್ತಿಕೇಯನ್ ನಟನೆಯ ‘ಅಮರನ್’ ಚಿತ್ರದ ಪ್ರೀರಿಲೀಸ್ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು. ಖ್ಯಾತ ಚಿತ್ರ ನಿರ್ಮಾಪಕರಾದ ಲೋಕೇಶ್ ಕನಕರಾಜ್ ಮತ್ತು ಮಣಿರತ್ನಂ(Director Mani Ratnam) ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ನಿರ್ಮಾಪಕ ಮಣಿರತ್ನಂ ಅವರು ಸೌತ್ ನಟಿ ಸಾಯಿ ಪಲ್ಲವಿಯನ್ನು ಹೊಗಳಿದ್ದಾರೆ.
ಇದನ್ನು ಓದಿ: ನನ್ನ ಬಹುದಿನಗಳ ಆಸೆಯನ್ನು ಬಿಗ್ ಬಿ ಈಡೇಸಿದರು; ನಟಿ ವಿದ್ಯಾ ಬಾಲನ್ ಹೀಗೆಳಿದ್ದೇಕೆ | Vidya Balan
ನಟಿ ಸಾಯಿ ಪಲ್ಲವಿ ಅತ್ಯುತ್ತಮ ನಟಿ. ಯಾವುದೇ ಪಾತ್ರ ನೀಡಿದರೂ ನಿಷ್ಠೆಯಿಂದ ನಟಿಸುತ್ತಾರೆ. ನಾನು ಸಾಯಿ ಪಲ್ಲವಿ ಅವರ ಕಟ್ಟಾ ಅಭಿಮಾನಿ ಎಂದು ನಿರ್ಮಾಪಕ ಮಣಿರತ್ನಂ ಹೇಳಿದ್ದಾರೆ. ನಾನು ನಿಮ್ಮ ದೊಡ್ಡ ಅಭಿಮಾನಿ. ನನಗೂ ಒಂದು ದಿನ ನಿಮ್ಮೊಂದಿಗೆ ಕೆಲಸ ಮಾಡುವ ಅವಕಾಶ ಸಿಗುತ್ತದೆ ಎಂದು ಭಾವಿಸುತ್ತೇನೆ ಎಂದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ನಟಿ ಸಾಯಿ ಪಲ್ಲವಿ ಚಿತ್ರರಂಗಕ್ಕೆ ಬರುವ ಮೊದಲು ನನಗೆ ಹೆಚ್ಚು ನಿರ್ದೇಶಕರ ಪರಿಚಯವಿರಲಿಲ್ಲ. ಆದರೆ ಮಣಿರತ್ನಂ ಅವರ ಹೆಸರು ನನಗೆ ಮೊದಲಿನಿಂದಲೂ ತಿಳಿದಿತ್ತು ಎಂದಿದ್ದಾರೆ. ಅಲ್ಲದೆ ಸ್ಕ್ರಿಪ್ಟ್‌ಗಳು ಮತ್ತು ಪಾತ್ರಗಳ ಬಗ್ಗೆ ನಾನು ತುಂಬಾ ಜಾಗೃತಳಾಗಿರಲು ಅವರು ದೊಡ್ಡ ಕಾರಣ ಎಂದು ಹೇಳಿದ್ದಾರೆ.
ನಿರ್ದೇಶಕ ಮಣಿರತ್ನಂ ಅವರ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಗುತ್ತದೆಯೇ ಎಂದು ಯೋಚಿಸುತ್ತಿದ್ದೆ. ಆದರೆ ಅವರು ನನ್ನ ಬಗ್ಗೆ ಹೇಳಿದ ಮಾತುಗಳು ನನಗೆ ಇನ್ನಿಲ್ಲದ ಸಂತೋಷವನ್ನು ನೀಡಿದೆ. ಖಂಡಿತಾ ಅವರೊಂದಿಗೆ ಕೆಲಸ ಮಾಡುತ್ತೇನೆ’ ಎಂದು ನಟಿ ಸಾಯಿ ಪಲ್ಲವಿ ಸಂತಸ ವ್ಯಕ್ತಪಡಿಸಿದರು. ಸಾಯಿ ಪಲ್ಲವಿ ಮುಂಬರುವ ‘ತಾಂಡೇಲ್’ ಮತ್ತು ‘ಅಮರೆನ್’ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶಿಸಿದ್ದಾರೆ. (ಏಜೆನ್ಸೀಸ್)