ನನ್ನ ಬಹುದಿನಗಳ ಆಸೆಯನ್ನು ಬಿಗ್​ ಬಿ ಈಡೇಸಿದರು; ನಟಿ ವಿದ್ಯಾ ಬಾಲನ್​ ಹೀಗೆಳಿದ್ದೇಕೆ | Vidya Balan

Untitled-design-77
Published on

ಮುಂಬೈ: ಬಾಲಿವುಡ್​ ನಟಿ ವಿದ್ಯಾ ಬಾಲನ್(Vidya Balan) ಮತ್ತು ಕಾರ್ತಿಕ್ ಆರ್ಯನ್ ಅವರು ಭೂಲ್ ಭುಲೈಯಾ 3 ಸಿನಿಮಾದ ಪ್ರಚಾರದಲ್ಲಿ ಬಿಸಿಯಿದ್ದಾರೆ. ಅದರ ಭಾಗವಾಗಿ ಇತ್ತೀಚೆಗೆ ಖಾಸಗಿ ವಾಹಿನಿಯಲ್ಲಿ ಅಮಿತಾಭ್​ ಬಚ್ಚನ್​​​ ಅವರು ನಡೆಸಿಕೊಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಸಿನಿಮಾ ಪ್ರಚಾರದ ಜತಗೆ ಬಾಲಿವುಡ್​ ಬಿಗ್​ ಬಿ ಜತೆಗೆ ತಮ್ಮ ಭಾವನೆಗಳ ಬಗ್ಗೆ ಮಾತನಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಆ ವಿಡಿಯೋದಲ್ಲಿ ವಿದ್ಯಾ ಬಾಲನ್​ ಮಾತನಾಡುತ್ತಾ ತನಗೆ ಒಂದು ಆಸೆ ಇತ್ತು ಅದು ಈಡೇರಲಿಲ್ಲ ಎಂದು ಹೇಳುತ್ತಾರೆ. ಆಸೆ ಏನೆಂಬುದನ್ನು ನಟಿ ವ್ಯಕ್ತಪಡಿಸಿದ ಬಳಿಕ ಇಷ್ಟ ವರ್ಷಗಳ ಬಳಿಕ ಅಮಿತಾಭ್​ ಬಚ್ಚನ್​ ಅದನ್ನು ಈಡೇರಿಸಿದ್ದಾರೆ. ವಿದ್ಯಾ ಬಾಲನ್​​ ಅವರು ಬಿಗ್​​ ಬಿ ಅಮಿತಾಭ್​ ಅವರಿಗೆ ನಾಯಕಿ ಆಗಬೇಕಿತ್ತು ಎಂದು ಹೇಳಿದ್ದಾರೆ. ಅಲ್ಲದೆ ಆಜ್ ರಪತ್ ಜಾಯೇ ತೋ ಹುಮ್ನೇ ನಾ ಉತಾಯೋ ಹಾಡಿನಲ್ಲಿ ನಿಮ್ಮೊಂದಿಗೆ ಡ್ಯಾನ್ಸ್ ಮಾಡುವುದು ನನ್ನ ಕನಸಾಗಿತ್ತು. ಆದರೆ ಪಾ ಸಿನಿಮಾದಲ್ಲಿ ಅವರ ತಾಯಿಯಾಗಿ ನಟಿಸಿದ್ದರಿಂದ ಈ ಹಾಡಿನ ಬದಲು ಅವರ ಜತೆ ಮಂಕಿ ಡ್ಯಾನ್ಸ್ ಮಾಡಿದ್ದೇನೆ ಎಂದು ಹೇಳುತ್ತಾರೆ.

ಆಗ ಅಮಿತಾಭ್​​ ಬಚ್ಚನ್​​ ವಿದ್ಯಾ ಬಾಲನ್​​ಗೆ ಸ್ಟೇಜ್​ ಮೇಲೆ ಡ್ಯಾನ್ಸ್ ಮಾಡುವಂತೆ ಕೇಳುತ್ತಾರೆ. ಇಬ್ಬರೂ ಮತ್ತೆ ಅದೇ ಹಾಡಿಗೆ ವೇದಿಕೆ ಮೇಲೆ ಹೆಜ್ಜೆ ಹಾಕುತ್ತಾರೆ. ಕೊನೆಗೂ ವಿದ್ಯಾ ಅವರ ಬಹುದಿನಗಳ ಆಸೆಯನ್ನು ಅಮಿತಾಭ್​​​ ಈಡೇರಿಸಿದ್ದಾರೆ.

ಸದ್ಯ ಈ ವಿಡಿಯೋ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಅವರ ಡ್ಯಾನ್ಸಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಬ್ಬರ ನೋಡಿ ಖುಷಿಯಾಯಿತು, ಮತ್ತೊಬ್ಬೆ ದೊಡ್ಡ ಪರದೆಯಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವಂತಾಗಲಿ ಎಂದು ಕಾಮೆಂಟ್​​ ಮಾಡಿದ್ದಾರೆ. ಅಂದ್ಹಾಗೆ ಅಮಿತಾಭ್​ ಬಚ್ಚನ್​​ ಅವರ ಅಭಿನಯದ ವೆಟ್ಟೈಯಾನ್ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿತ್ತು. ಇದರಲ್ಲಿ ಬಿಗ್​ ಬಿ ಜತೆಗೆ ರಜನಿಕಾಂತ್ ಕೂಡ ಇದ್ದಾರೆ. ಬಹಳ ವರ್ಷಗಳ ಬಳಿಕ ಇಬ್ಬರೂ ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net