

ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರ ಕುರಿತು ಹೊಸ ಪರಿಚಯದ ಅಗತ್ಯ ಇಲ್ಲ. ಬಾಲಿವುಡ್, ಟಾಲಿವುಡ್ ಮತ್ತು ಹಾಲಿವುಡ್ಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡು ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ. ನಟಿ ಪ್ರಿಯಾಂಕಾ ಚೋಪ್ರಾ 2000 ಇಸವಿಯಲ್ಲಿ ಮಿಸ್ ವರ್ಲ್ಡ್ ಪಟ್ಟವನ್ನು ಪಡೆದಿಕೊಂಡಿರುವುದು ಗೊತ್ತೆ ಇದೆ. ಈ ವಿಚಾರವಾಗಿ ಅವರ ತಾಯಿ ಮಧು ಚೋಪ್ರಾ(Madhu Chopra) ಕೆಲವೊಂದು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.
ಇತ್ತೀಚಿಗಿನ ಸಂದರ್ಶನವೊಂದರಲ್ಲಿ ಪ್ರಿಯಾಂಕಾ ಚೋಪ್ರಾ ಅವರ ತಾಯಿ ಮಧು ಚೋಪ್ರಾ ಮುಕವಾಗಿ ಮಾತನಾಡಿದ್ದಾರೆ. ಪ್ರಿಯಾಂಕಾ ವಿಶ್ವ ಸುಂದರಿ 2000 ಗೆದ್ದಾಗ, ಅವರು (ಪ್ರಿಯಾಂಕಾ ಚೋಪ್ರಾ) ತಮ್ಮ ತವರು ಬರೇಲಿಯಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತು. ಆ ಕಾಲದಲ್ಲಿ ಸೌಂದರ್ಯ ಸ್ಪರ್ಧೆಗಳು ಒಳ್ಳೆಯದಾಗಿರಲಿಲ್ಲ ಎಂದು ಹೇಳಿದ್ದಾರೆ.
ಮಿಸ್ ವರ್ಲ್ಡ್ ಗೆದ್ದ ನಂತರ ಪ್ರಿಯಾಂಕಾ ಚೋಪ್ರಾ ಮೊದಲು ಬರೇಲಿಗೆ ಬಂದರು. ಆದರೆ ಆ ಸಮಯದಲ್ಲಿ ಎಲ್ಲಾ ಸೌಂದರ್ಯ ಸ್ಪರ್ಧೆಗಳು ಮಹಿಳೆಯರನ್ನು ಶೋಷಣೆ ಮಾಡುತ್ತವೆ ಎಂದು ನಂಬಲಾಗಿತ್ತು. ಮಹಿಳೆಯರನ್ನು ಆಕ್ಷೇಪಿಸಿ, ಆಗಿನ ಕಾಲದಲ್ಲಿ ಸೌಂದರ್ಯ ಸ್ಪರ್ಧೆಗಳನ್ನು ಒಳ್ಳೆಯದೆಂದು ಪರಿಗಣಿಸುತ್ತಿರಲಿಲ್ಲ. ವಿಶ್ವ ಸುಂದರಿ ಪ್ರಶಸ್ತಿಯನ್ನು ಗೆದ್ದರು ಪ್ರಿಯಾಂಕಾಳನ್ನು ಸ್ವಾಗತಿಸಲು ಉತ್ತರ ಪ್ರದೇಶದಲ್ಲಿ ಜನರು ಸಿದ್ಧರಿರಲಿಲ್ಲ ಎಂದು ತಿಳಿಸಿದರು.
ಪ್ರಿಯಾಂಕಾ ಬರೇಲಿಗೆ ಬಂದಾಗ ಆರ್ಮಿ ಪ್ರದೇಶಕ್ಕೆ ಮಾತ್ರ ಹೋಗಲು ಅವಕಾಶ ನೀಡಲಾಗಿತ್ತು. ಆ ಸಮಯದಲ್ಲಿ ಆರ್ಮಿ ಕ್ಲಬ್ನಲ್ಲಿ ಅವರ ಸ್ವಾಗತ ಕೂಟವೂ ನಡೆಯಿತು. ಆ ಕೂಟದಲ್ಲಿ ಸೇನಾ ಅಧಿಕಾರಿಗಳು ಮಾತ್ರ ಇದ್ದರು. ದೇಶಕ್ಕೆ ಇಷ್ಟು ದೊಡ್ಡ ಪ್ರಶಸ್ತಿಯನ್ನು ಗೆದ್ದುಕೊಟ್ಟರೂ ಅವರದೇ ರಾಜ್ಯ ಅವಳನ್ನು ಸ್ವಾಗತಿಸಲಿಲ್ಲ ಎಂದು ಮಧು ಚೋಪ್ರಾ ಬೇಸರ ವ್ಯಕ್ತಪಡಿಸಿದರು. ಆದರೆ ಪ್ರಿಯಾಂಕಾ ಈ ಬಗ್ಗೆ ಕಿಂಚಿತ್ತೂ ಕೋಪ ಮಾಡಿಕೊಂಡಿರಲಿಲ್ಲ ಎಂದು ಹೇಳಿದರು.
ಮಿಸ್ ವರ್ಲ್ಡ್ ಗೆದ್ದ ಬಳಿಕವೂ ಪ್ರಿಯಾಂಕಾ ತನ್ನ ಅಧ್ಯಯನದತ್ತ ಗಮನ ಹರಿಸಲು ಬಯಸಿದ್ದಳು. ಅವಳು ಪ್ರತಿಭಾವಂತೆ, ಬುದ್ಧಿವಂತ ಹುಡುಗಿ ಮತ್ತು ಆ ಸಮಯದಲ್ಲಿ ಅವಳ ಗುರಿ ಬೇರೆಯೇ ಆಗಿತ್ತು. ಪ್ರಿಯಾಂಕಾ ಕ್ರಿಮಿನಲ್ ಸೈಕಾಲಜಿಸ್ಟ್ ಅಥವಾ ಏರೋನಾಟಿಕಲ್ ಇಂಜಿನಿಯರ್ ಆಗಲು ಬಯಸಿದ್ದಳು. ಆದರೆ ವಿಧಿಯ ಮನಸ್ಸಿನಲ್ಲಿ ಬೇರೆಯೇ ಇತ್ತು. ಚಿತ್ರರಂಗಕ್ಕೆ ಬಂದಳು ಎಂದರು.