‘ಪುಷ್ಪ’ ಶೂಟಿಂಗ್​​ ಮುಗಿಯಲೆಂದೆ ಕಾಯುತ್ತಿದ್ದೆ; ಟಾಲಿವುಡ್​ ಸ್ಟೈಲಿಶ್​ ಸ್ಟಾರ್ Allu Arjun ಹೀಗೆಳಿದ್ದೇಕೆ?

Untitled design - 2024-11-30T150404.782
Published on

ಮುಂಬೈ: ಟಾಲಿವುಡ್​​ ಸ್ಟೈಲಿಶ್​ ಸ್ಟಾರ್​​ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್(Allu Arjun) ತಮ್ಮ ಬಹು ನಿರೀಕ್ಷಿತ ಸಿನಿಮಾ ‘ಪುಷ್ಪ 2: ದಿ ರೂಲ್’ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಸದ್ಯ ನಟ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ವೇಳೆ ಸಿನಿಮಾದ ಶೂಟಿಂಗ್​​ಗೆ ಸಂಬಂಧಿಸಿದಂತೆ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಕಳೆದ ಐದು ವರ್ಷಗಳಿಂದ ಈ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ಪುಷ್ಪಾ ಚಿತ್ರೀಕರಣ ಆದಷ್ಟು ಬೇಗ ಮುಗಿಸಬೇಕು ಎಂದು ನಾನು ಬಯಸಿದ್ದೆ ಎಂದು ಅಲ್ಲು ಅರ್ಜುನ್​ ತಿಳಿಸಿದ್ದಾರೆ. ಪುಷ್ಪ ಸಿನಿಮಾದ ಮೊದಲ ಮತ್ತು ಎರಡನೇ ಭಾಗಗಳನ್ನು ಒಳಗೊಂಡಂತೆ ಸುಮಾರು ಐದು ವರ್ಷಗಳ ಕಾಲ ನಾನು ಈ ಚಿತ್ರವನ್ನು ಶೂಟ್ ಮಾಡಿದ್ದೇನೆ. ಸಿನಿಮಾಗಾಗಿ ಗಡ್ಡ ಬೆಳೆಸುವುದು ಅನೀವಾರ್ಯವಾಗಿತ್ತು. ಈ ಗಡ್ಡ ತೆಗೆಯಬೇಕು ಎಂಬ ಕಾರಣಕ್ಕೆ ಚಿತ್ರದ ಚಿತ್ರೀಕರಣ ಬೇಗ ಮುಗಿಯಬೇಕು ಎಂದು ಬಯಸಿದ್ದೆ ಎಂದು ಹೇಳಿದರು.

ಸಿನಿಮಾಗಾಗಿ ಗಡ್ಡ ಬೆಳೆಸಿದ್ದ ಕಾರಣ ನನ್ನ ಮಗಳು ನನ್ನ ಬಳಿಗೆ ಬರುತ್ತಲೆ ಇರಲಿಲ್ಲ. ನಾನು ಅವಳಿಗೆ ಪ್ರೀತಿಯಿಂದ ಮುತ್ತು ಕೊಡಲು ಸಾಧ್ಯವಾಗಲಿಲ್ಲ. ಕಳೆದ ಮೂರ್ನಾಲ್ಕು ವರ್ಷಗಳಿಂದ ನಾನು ಅವಳಿಗೆ ಸರಿಯಾಗಿ ಮುತ್ತು ಕೊಟ್ಟಿರಲಿಲ್ಲ. ನಾನು ಕ್ಲೀನ್ ಶೇವ್ ಮಾಡಲು ಈ ಚಿತ್ರ ಮುಗಿಯುತ್ತದೆ ಎಂದು ನಾನು ಕಾಯುತ್ತಿದ್ದೆ ಎಂದು ತಿಳಿಸಿದರು.

ಆದರೆ ಪುಷ್ಪ ಚಿತ್ರೀಕರಣ ಮುಗಿಸಿದ ಮರುದಿನ ತುಂಬಾ ಭಾವುಕನಾಗಿದೆ. ಮಾರನೇ ದಿನ ಶೂಟಿಂಗ್ ಮುಗಿದ ಮೇಲೆ ಸುಮ್ಮನಾದೆ, ಇದು ನನಗೆ ಬಹಳ ಕಷ್ಟದ ಸಮಯವಾಗಿತ್ತು. ಕಳೆದ ಐದು ವರ್ಷಗಳಿಂದ ನಾನು ನೋಡುತ್ತಿದ್ದ ಮುಖಗಳನ್ನು ಮತ್ತೆ ನೋಡಿದೆ ಎಂದು ಹೇಳಿದರು. ಅಲ್ಲು ಅರ್ಜುನ್​ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಸುಕುಮಾರ್ ನಿರ್ದೇಶನದ ಪುಷ್ಪ 2: ದಿ ರೂಲ್ ಸಿನಿಮಾಕ್ಕಾಗಿ ಅಭಿಮಾನಿಗಳ ಕಾತುರದಿಂದ ಕಾಯುತ್ತಿದ್ದಾರೆ. ಸಿನಿಮಾವನ್ನು ಡಿಸೆಂಬರ್​ 5ರಂದು ಬಿಡುಗಡೆಯಾಗಲಿದ್ದು ಯಾವ ರೀತಿ ಕಮಾಲ್​ ಮಾಡಲಿದೆ ಕಾದುನೋಡಬೇಕಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net