More

    ಇದೊಂಥರಾ ಟೀಚರ್​ಗೆ ಮಕ್ಕಳು ದೂರು ಕೊಟ್ಟಂಗಾಯ್ತು: ರಾಮ್​ಗೋಪಾಲ್​ ವರ್ಮಾ

    ಮುಂಬೈ: ಡ್ರಗ್ಸ್​ ಪ್ರಕರಣದಲ್ಲಿ ಬಾಲಿವುಡ್​ ಮಂದಿ ಶಾಮೀಲಾಗಿರುವ ಕುರಿತು ಕೆಲವು ಸುದ್ದಿ ವಾಹಿನಿಗಳ ತಮ್ಮನ್ನು ಕೆಟ್ಟದಾಗಿ ಬಿಂಬಿಸುತ್ತಿವೆ ಎಂದು ಬಾಲಿವುಡ್​ನ ನಾಲ್ಕು ಸಂಘಟನೆಗಳು ಮತ್ತು 34 ನಿರ್ಮಾಣ ಸಂಸ್ಥೆಗಳು ದೆಹಲಿ ಹೈಕೋರ್ಟ್​ಗೆ ಪ್ರಕರಣ ದಾಖಲಿಸಿರುವ ಕುರಿತು ನಿರ್ದೇಶಕ ಮತ್ತು ನಿರ್ಮಾಪಕ ರಾಮ್​ಗೋಪಾಲ್​ ವರ್ಮಾ ಅವರು ಇದೊಂಥರಾ ಮೇಡಂಗೆ ಮಕ್ಕಳು ದೂರು ಕೊಟ್ಟಂಗಾಯ್ತು ಎಂದು ಪ್ರತಿಕ್ರಿಯಿಸಿದ್ದಾರೆ.

    ಇದನ್ನೂ ಓದಿ: ನನ್ನ ಮೇಲೂ ಕೇಸ್​ ಹಾಕಬಹುದು … ಬಾಲಿವುಡ್ ಸ್ಟ್ರೈಕ್ಸ್​ ಬ್ಯಾಕ್​ಗೆ ಕಂಗನಾ ತಿರುಗೇಟು

    ಬಾಲಿವುಡ್​ ಮತ್ತು ಡ್ರಗ್ಸ್​ ನಂಟಿನ ಕುರಿತಾಗಿ ಕೆಲವು ಸುದ್ದಿವಾಹಿನಿಗಳು ತಮ್ಮನ್ನು ಕೆಟ್ಟದಾಗಿ ಬಿಂಬಿಸುತ್ತಿವೆ, ಡ್ರಗ್ಗೀಸ್​ ಎಂದು ಕರೆಯುತ್ತಿವೆ ಎಂದು ಬಾಲಿವುಡ್​ನ ಹಲವು ಜನಪ್ರಿಯ ನಾಯಕರು ಮತ್ತು ಸಂಘಟನೆಗಳು ವಾಹಿನಿಗಳ ಮೇಲೆ ದೆಹಲಿ ಹೈಕೋರ್ಟ್​ನಲ್ಲಿ ಸೋಮವಾರ ಪ್ರಕರಣ ದಾಖಲಿಸಿತ್ತು. ಈ ಕುರಿತು, ವರ್ಮಾ ಪ್ರತಿಕ್ರಿಯೆ ನೀಡಿದ್ದಾರೆ.

    ಈ ಕುರಿತು ಟ್ವೀಟ್​ ಮಾಡಿರುವ ಅವರು, ‘ಬಾಲಿವುಡ್​ ಕುರಿತು ಸುದ್ದಿವಾಹಿನಗಳ ಅಪಪ್ರಚಾರ ಮಾಡುತ್ತಿರುವ ಬಗ್ಗೆ ಬಾಲಿವುಡ್​ ಪ್ರತಿಕ್ರಿಯೆ ಬಹಳ ತಡವಾಗಿದ್ದಷ್ಟೇ ಅಲ್ಲ, ಬಹಳ ಕೂಲ್​ ಆಗಿದೆ. ಎಲ್ಲಾ ದೊಡ್ಡವರು ಸೇರಿ ದೆಹಲಿ ಹೈಕೋರ್ಟ್​ಗೆ ದೂರು ನೀಡಿರುವುದನ್ನು ನೋಡಿದರೆ, ಶಾಲಾ ಮಕ್ಕಳು ತಮ್ಮ ಟೀಚರ್​ಗೆ ದೂರು ಕೊಟ್ಟಂತಿದೆ. ಟೀಚರ್​ ಟೀಚರ್​, ಆ ಆರ್ನಬ್​ ನಮ್ಮನ್ನ ಬೈತಿದ್ದಾರೆ ಎಂದು ಹೇಳುತ್ತಿರುವಂತಿದೆ’ ಎಂದು ಲೇವಡಿ ಮಾಡಿದ್ದಾರೆ.

    ಇದನ್ನೂ ಓದಿ: PHOTO GALLERY| ನಿರ್ದೇಶಕ ಪವನ್​ ಒಡೆಯರ್ ಪತ್ನಿ ಅಪೇಕ್ಷಾ ಸೀಮಂತ ಸಂಭ್ರಮ

    ವರ್ಮಾ ಅಲ್ಲದೆ, ಬಾಲಿವುಡ್​ ಮಂದಿಯ ಈ ನಡೆಯನ್ನು ಹಲವು ಸೆಲೆಬ್ರಿಟಿಗಳು ಶ್ಲಾಘಿಸಿದ್ದಾರೆ. ಸ್ವರಾ ಭಾಸ್ಕರ್​, ರಣ್ವೀರ್​ ಶೌರಿ, ಪ್ರಕಾಶ್​ ರೈ ಮುಂತಾದವರು ಮೆಚ್ಚಿಕೊಂಡಿದ್ದಾರೆ.

    ನಟಿ ಕಂಗನಾ ವಿರುದ್ಧ ತುಮಕೂರಲ್ಲಿ ದಾಖಲಾಯ್ತು ಎಫ್‌ಐಆರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts