

ಮುಂಬೈ: ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ಮಂದಿ ಶಾಮೀಲಾಗಿರುವ ಕುರಿತು ಕೆಲವು ಸುದ್ದಿ ವಾಹಿನಿಗಳು ತಮ್ಮನ್ನು ಕೆಟ್ಟದಾಗಿ ಬಿಂಬಿಸುತ್ತಿವೆ, ಡ್ರಗ್ಗೀಸ್ ಎಂದು ಕರೆಯುತ್ತಿವೆ ಎಂದು ಬಾಲಿವುಡ್ನ ಹಲವು ಜನಪ್ರಿಯ ನಾಯಕರು ಮತ್ತು ಸಂರ್ಟನೆಗಳು ವಾಹಿನಿಗಳ ಮೇಲೆ ದೆಹಲಿ ಹೈಕೋರ್ಟ್ನಲ್ಲಿ ಪ್ರಕರಣ ದಾಖಲಿಸಿರುವುದು ಗೊತ್ತೇ ಇದೆ. ಇದೀಗ ಅದರ ವಿರುದ್ಧ ನಟಿ ಕಂಗನಾ ರಣಾವತ್ ತಿರುಗಿಬಿದ್ದಿದ್ದಾರೆ.
ಇದನ್ನೂ ಓದಿ: ಹೊಸಬರ ‘ಯೆಲ್ಲೋ ಗ್ಯಾಂಗ್’ಗೆ ಭಟ್ಟರ ಹಾರೈಕೆ
ಈ ಕುರಿತು ಅವರು ಸರಣಿ ಟ್ವೀಟ್ಗಳನ್ನು ಮಾಡಿದ್ದಾರೆ. ಅಷ್ಟೇ ಅಲ್ಲ, ತಮ್ಮ ಮೇಲೂ ಬೇಕಾದರೆ ಕೇಸ್ ಹಾಕಿ ಎಂದು ಸವಾಲು ಎಸೆದಿದ್ದಾರೆ.
'ಚಿತ್ರರಂಗದಲ್ಲಿ ಒಂದು ಅಘೋಷಿತ ನಿಯಮವಿದೆ. ನಾನು ನಿನ್ನ ತಂಟೆಗೆ ಬರುವುದಿಲ್ಲ, ನೀನು ನನ್ನ ತಂಟೆಗೆ ಬರಬೇಡ ಎನ್ನುವ ಮೂಲಕ ಒಬ್ಬರಿಗೆ ಇನ್ನೊಬ್ಬರು ತಮ್ಮ ನಿಯತ್ತು ಪ್ರದರ್ಶಿಸುತ್ತಾರೆ. ನಾನು ಇವೆಲ್ಲಾ ಬಹಳ ವರ್ಷಗಳಿಂದ ನೋಡಿಕೊಂಡೇ ಬಂದಿದ್ದೇವೆ. ಕೆಲವೇ ಮಂದಿಯ ಹಿಡಿತದಲ್ಲಿರುವ ಚಿತ್ರರಂಗದ ಈ ಪರಿಸ್ಥಿತಿ ಬದಲಾಗುವುದು ಎಂದು?' ಎಂದು ಅವರು ಪ್ರಶ್ನಿಸಿದ್ದಾರೆ.
'ಇಲ್ಲಿ ದೊಡ್ಡ ಹೀರೋಗಳು ಮಹಿಳೆಯರನ್ನು ಟಾರ್ಗೆಟ್ ಮಾಡುವುದಷ್ಟೇ ಅಲ್ಲ, ಚಿಕ್ಕ ಹುಡುಗಿಯರನ್ನು ಶೋಷಣೆ ಮಾಡುತ್ತಾರೆ. ಇನ್ನು ಸುಶಾಂತ್ರಂತಹ ಯುವನಟರನ್ನು ಬೆಳೆಯುವುದಕ್ಕೆ ಬಿಡುವುದೇ ಇಲ್ಲ. 50 ವರ್ಷಗಳಾದರೂ, ಯುವಕರ ತರಹ ಕಾಣಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಾರೆ. ಯಾರಾದರೂ ಕಷ್ಟದಲ್ಲಿದ್ದರೆ ಅಥವಾ ಯಾರಿಗಾದರೂ ತಮ್ಮ ಕಣ್ಣೆದುರೇ ಅನ್ಯಾಯವಾಗುತ್ತಿದ್ದರೂ ಅವರು ಯಾವೊಂದು ಮಾತನ್ನೂ ಆಡುವುದಿಲ್ಲ. ತಮಗೇನೂ ಗೊತ್ತಿಲ್ಲದಂತೆ ಇದ್ದುಬಿಡುತ್ತಾರೆ' ಎಂದು ಕಂಗನಾ ಕಿಡಿಕಾರಿದ್ದಾರೆ.
'ಬಾಲಿವುಡ್ ಇಂದಿನ ಪರಿಸ್ಥಿತಿಯಲ್ಲಿ ಡ್ರಗ್ಸ್ ಗಟಾರವಾಗಿರುವುದಷ್ಟೇ ಅಲ್ಲ, ಇಲ್ಲಿ ಶೋಷಣೆ, ಜಿಹಾದ್, ಸ್ವಜನಪಕ್ಷಪಾತ ಎಲ್ಲವೂ ಇಲ್ಲಿದೆ. ಇದನ್ನೆಲ್ಲಾ ಸರಿಪಡಿಸುವ ಬಿಟ್ಟು, ಇದರ ಬಗ್ಗೆ ಮಾತನಾಡುವವರ ವಿರುದ್ಧ ಬಾಲಿವುಡ್ ಸ್ಟ್ರೈಕ್ಸ್ ಬ್ಯಾಕ್ ಎಂದು ಸಮರ ಸಾರಿದೆ. ಮುಂದೊಂದು ನನ್ನ ಮೇಲೂ ಕೇಸ್ ಹಾಕಬಹುದು. ನಾನು ಬದುಕಿರುವವರೆಗೂ ನಾನು ಇದೆಲ್ಲದರ ವಿರುದ್ಧ ಹೋರಾಡಿಯೇ ಸಿದ್ಧ' ಎಂದು ಅವರು ಟ್ವೀಟ್ ಮಾಡಿದ್ದಾರೆ.