More

    ಜಪಾನ್​ನಲ್ಲಿ ಸೂಪರ್​ ಹಿಟ್​ ಆಗಿದೆಯಂತೆ ರಜನಿಕಾಂತ್​ ‘ದರ್ಬಾರ್​’!

    ಚೆನ್ನೈ: ರಜನಿಕಾಂತ್​ ಅಭಿನಯದ ಚಿತ್ರಗಳಲ್ಲಿ ಜಪಾನ್​ನಲ್ಲಿ ಬಿಡುಗಡೆಯಾಗುವುದು, ಅಲ್ಲಿ ಅವರಿಗೆ ದೊಡ್ಡ ಫ್ಯಾನ್​ ಫಾಲೋಯಿಂಗ್​ ಇರುವುದು ಹೊಸ ವಿಷಯವೇನಲ್ಲ. ಈಗಾಗಲೇ ರಜನಿಕಾಂತ್​ ಅಭಿನಯದ ‘ಮುತ್ತು’, ‘ಪಡೆಯಪ್ಪ’, ‘ಶಿವಾಜಿ’ ಸೇರಿದಂತೆ ಹಲವು ಚಿತ್ರಗಳು ಅಲ್ಲಿ ಬಿಡುಗಡೆಯಾಗಿ ಹಿಟ್​ ಆಗಿವೆ. ಇನ್ನು, ರಜನಿಕಾಂತ್​ ಅವರ ಜಪಾನ್​ ಅಭಿಮಾನಿಗಳು ತಮ್ಮ ಮೆಚ್ಚಿನ ನಟನನ್ನು ಹುಡುಕಿಕೊಂಡು ಅಲ್ಲಿಂದ ಚೆನ್ನೈವರೆಗೆ ಬಂದಿದ್ದೂ ಇದೆ.

    ಇದನ್ನೂ ಓದಿ: ಎರಡನೇ ಮಗುವಿನ ನಿರೀಕ್ಷೆಯಲ್ಲಿ ರೋಡಿಸ್ ಖ್ಯಾತಿಯ ನೇಹಾ ಧೂಪಿಯಾ

    ಈಗ್ಯಾಕೆ ಈ ವಿಷಯ ಎಂದರೆ, ರಜನಿಕಾಂತ್​ ಅವರ ಚಿತ್ರಗಳು ಜಪಾನ್​ನಲ್ಲಿ ಸುದ್ದಿ ಮಾಡಿ ಬಹಳ ದಿನಗಳೇ ಆಗಿದ್ದವು. ಇತ್ತೀಚಿನ ಕೆಲವು ವರ್ಷಗಳಲ್ಲಿ ರಜನಿಕಾಂತ್​ ಅಭಿನಯದ ‘ಲಿಂಗ’, ‘ಕಬಾಲಿ’, ‘ಕಾಲಾ’, ‘ಪೆಟ್ಟ’ ಮುಂತಾದ ಚಿತ್ರಗಳು ಬಿಡುಗಡೆಯಾದರೂ ಜಪಾನ್​ನಲ್ಲಿ ಯಶಸ್ವಿಯಾದ ಸುದ್ದಿ ಇರಲಿಲ್ಲ. ಈಗ ‘ದರ್ಬಾರ್​’ ಚಿತ್ರವು ಸೂಪರ್​ ಹಿಟ್​ ಆಗಿದೆ ಎಂದು ಹೇಳಲಾಗುತ್ತಿದೆ.

    ‘ದರ್ಬಾರ್​’ ಚಿತ್ರವು ಕಳೆದ ವರ್ಷ ಬಿಡುಗಡೆಯಾಗಿತ್ತು. ಎ.ಆರ್​. ಮುರುಗದಾಸ್​ ಅಭಿನಯದ ಈ ಚಿತ್ರ ಭಾರತದಲ್ಲಿ ದೊಡ್ಡ ಹಿಟ್​ ಏನೂ ಆಗಿರಲಿಲ್ಲ. ಬಹಳ ವರ್ಷಗಳ ನಂತರ ರಜನಿಕಾಂತ್​ ಪೊಲೀಸ್​ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಈ ಚಿತ್ರವು ತಕ್ಕಮಟ್ಟಿಗೆ ಹಿಟ್​ ಆಗಿತ್ತು. ಚಿತ್ರದ ಬಗ್ಗೆ ಅಷ್ಟೇನೂ ಮೆಚ್ಚುಗೆಯ ಮಾತುಗಳು ಕೇಳಿಬರದಿದ್ದರೂ, ಅನಿರುದ್ಧ ಸಂಯೋಜಿಸಿದ್ದ ಹಿನ್ನೆಲೆಯ ಸಂಗೀತದ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬಂದವು. ಅದರಲ್ಲೂ ರಜನಿಕಾಂತ್​ ಅವರ ಎಂಟ್ರಿಗೆ ಸಂಯೋಜಿಸಲಾಗಿದ್ದ ‘ತಲೈವ ಇಂಟ್ರೋ ಬಿಜಿಎಂ’ ಅಂತೂ ಅಭಿಮಾನಿಗಳಿಗೆ ಭಾರೀ ಹಿಡಿಸಿತ್ತು.

    ಇದನ್ನೂ ಓದಿ: ಇವೆಲ್ಲ ಅಭ್ಯಾಸವಾಗಿ ಹೋಗಿದೆ … ತಾಪ್ಸಿ ಹೀಗೆ ಹೇಳಿದ್ದು ಏಕೆ?

    ಕಾರಣಾಂತರಗಳಿಂದ ಚಿತ್ರವು ಭಾರತದಲ್ಲಿ ಫ್ಲಾಪ್​ ಆದರೂ, ಜಪಾನ್​ನಲ್ಲಿ ಚಿತ್ರ ದಾಖಲೆಯ ಹಿಟ್​ ಆಗಿದೆಯಂತೆ. ಜನ ಚಿತ್ರವನ್ನು ಮುಗಿಬಿದ್ದು ನೋಡುತ್ತಿದ್ದು, ಇಷ್ಟು ವರ್ಷಗಳಾದರೂ ರಜನಿಕಾಂತ್​ ಅವರ ಜನಪ್ರಿಯತೆ ಎಷ್ಟಿದೆ ಎಂಬುದು ಈ ಯಶಸ್ಸಿನಿಂದ ಗೊತ್ತಾಗಲಿದೆ ಎಂದು ಹೇಳಲಾಗುತ್ತಿದೆ.

    ಕಾತಿರ್ಯನ್ನು ನೋಡಿಯೂ ಮಾತನಾಡಿಸಲಿಲ್ಲವಂತೆ ವಿಜಯ್​ … ಯಾಕೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts