ಎರಡನೇ ಮಗುವಿನ ನಿರೀಕ್ಷೆಯಲ್ಲಿ ರೋಡಿಸ್ ಖ್ಯಾತಿಯ ನೇಹಾ ಧೂಪಿಯಾ

neha
Published on

ಮುಂಬೈ: ಬಾಲಿವುಡ್ ನಟಿ ನೇಹಾ ಧೂಪಿಯಾ ಎರಡನೇ ಮಗುವಿಗೆ ತಾಯಿಯಾಗುತ್ತಿರುವ ವಿಚಾರವನ್ನು ಹೇಳಿಕೊಂಡಿದ್ದಾರೆ. ಬೇಬಿ ಬಂಪ್​ ಹೊತ್ತಿರುವ ಅವರು ತಮ್ಮ ಕುಟುಂಬದೊಂದಿಗೆ ತೆಗೆಸಿಕೊಂಡಿರುವ ಸುಂದರ ಫೋಟೋವೊಂದನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ಈ ವಿಚಾರವನ್ನು ಸಾರ್ವಜನಿಕಗೊಳಿಸಿದ್ದಾರೆ.

ನೇಹಾ ತಮ್ಮ ಪತಿ ಅಂಗದ್ ಮತ್ತು ಮಗಳು ಮೆಹ್ರ್ ಜತೆ ಇರುವ ಫೋಟೊವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ನೇಹಾ ಬೇಬಿ ಬಂಪ್ ಹಿಡಿದುಕೊಂಡಿದ್ದರೆ, ಮೆಹ್ರ್​ಳನ್ನು ಎತ್ತಿಕೊಂಡಿರುವ ಅಂಗದ್ ಫೋಟೋಕ್ಕೆ ಪೋಸ್ ಕೊಟ್ಟಿದ್ದಾರೆ. ಮೆಹ್ರ್ ಅಮ್ಮನ ಹೊಟ್ಟೆಯನ್ನೇ ನೋಡುತ್ತಿದ್ದಾಳೆ. ಈ ಫೋಟೋದೊಂದಿಗೆ ನೇಹಾ, "ಈ ಕ್ಯಾಪ್ಶನ್​ ಹುಡುಕಲು ಎರಡು ದಿನ ತೆಗೆದುಕೊಂಡಿದ್ದೇವೆ. ನಾವು ಯೋಚಿಸಬಹುದಾದ ಅತ್ಯುತ್ತಮವಾದದ್ದೆಂದರೆ ಅದು ಧನ್ಯವಾದಗಳು, ದೇವರೇ." ಎಂದು ಬರೆದುಕೊಂಡಿದ್ದಾರೆ.

ರೋಡೀಸ್ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ಭಾಗವಹಿಸಿ ಅನೇಕರ ಮನಸ್ಸನ್ನು ಗೆದ್ದಿರುವ ನೇಹಾ 2018ರ ಮೇ ತಿಂಗಳಲ್ಲಿ ಅಂಗದ್ ಬೇಡಿಯನ್ನು ಮದುವೆಯಾಗಿದ್ದರು. ಅದೇ ವರ್ಷ ನವೆಂಬರ್ ತಿಂಗಳಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net