

ಚೆನ್ನೈ: ದಕ್ಷಿಣ ಭಾರತ ಸಿನಿಮಾ ರಂಗದ ಸೂಪರ್ ಸ್ಟಾರ್ ರಜನಿಕಾಂತ್ ಆರೋಗ್ಯ ಕೈ ಕೊಟ್ಟಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ. ಸಿನಿಮಾ ಸೆಟ್ನಲ್ಲಿದ್ದ ತಲೈವಾಗೆ ಇದ್ದಕ್ಕಿದ್ದಂತೆ ಆರೋಗ್ಯ ಹದಗೆಟ್ಟಿದ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದ ಅವರು ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದಾರೆ.
ರಜನಿಕಾಂತ್ ಅವರು ಅನಾರೋಗ್ಯಕ್ಕೆ ತುತ್ತಾದ ಕಾರಣ ಅವರನ್ನು ಹೈದರಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಲ್ಲಿ ರಕ್ತದೊತ್ತಡ ಏರುಪೇರಾಗಿರುವ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದರು. ಅದಕ್ಕಾಗಿ ಚಿಕಿತ್ಸೆ ಪಡೆದ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು ಕೂಡ. ಆದರೂ ಅವರ ಆರೋಗ್ಯ ಸುಧಾರಿಸಿಲ್ಲ. ಅದೇ ಹಿನ್ನೆಲೆಯಲ್ಲಿ ಇದೀಗ ಅವರನ್ನು ಕುಟುಂಬ ಅಮೆರಿಕಕ್ಕೆ ಕರೆದೊಯ್ದಿದೆ.
ರಜನಿಕಾಂತ್ ಇತ್ತೀಚಿನ ದಿನಗಳಲ್ಲಿ ಸಿನಿಮಾ ಮಾತ್ರವಲ್ಲದೆ ರಾಜಕೀಯದಲ್ಲೂ ಸುದ್ದಿ ಮಾಡಲಾರಂಭಿಸಿದ್ದರು. ಹೊಸ ಪಕ್ಷವನ್ನು ಇನ್ನೇನು ಕಟ್ಟಿಯೇಬಿಡುತ್ತಾರೆ ಎನ್ನುವಷ್ಟರಲ್ಲಿ ರಾಜಕೀಯ ಎಂಟ್ರಿ ಇಲ್ಲ ಎಂದು ತಲೈವಾ ಘೋಷಿಸಿಬಿಟ್ಟಿದ್ದರು. ನೆಚ್ಚಿನ ನಟನನ್ನು ರಾಜಕೀಯದಲ್ಲಿ ನೋಡುವ ಆಸೆ ಇಟ್ಟುಕೊಂಡಿದ್ದ ಅಭಿಮಾನಿಗಳಿಗೆ ಇದು ಶಾಕ್ ನೀಡಿತ್ತು. ಅವರು ಅಣ್ಣಾತೆ ಸಿನಿಮಾ ಶೂಟಿಂಗ್ನಲ್ಲಿದ್ದು, ಚಿತ್ರತಂಡದ ನಾಲ್ವರಲ್ಲಿ ಕೊರನಾ ಸೋಂಕು ಕಾಣಿಸಿಕೊಂಡಿತ್ತು. ಅದರ ಬೆನ್ನಲ್ಲೇ ರಜನಿಕಾಂತ್ ಕೂಡ ಹುಷಾರು ತಪ್ಪಿದ್ದು, ಅಭಿಮಾನಿಗಳ ಚಿಂತೆಗೆ ಕಾರಣವಾಗಿತ್ತು. (ಏಜೆನ್ಸೀಸ್)