

ಇಂದೋರ್: ಹಿಂದು ದೇವಾನುದೇವತೆಗಳನ್ನು ಅವಹೇಳನ ಮಾಡುವವರಿಗೆ ಇದೊಂದು ಎಚ್ಚರಿಕೆ ಗಂಟೆ ಎನ್ನಬಹುದು. ಏಕೆಂದರೆ ದೇವರು- ದೇವತೆಗಳನ್ನು ಅಪಹಾಸ್ಯ ಮಾಡಿದ ಒಬ್ಬ ಸ್ಟ್ಯಾಂಡಪ್ ಕಾಮಿಡಿಯನ್ ಈಗ ಕಂಬಿ ಹಿಂದೆ ನಿಲ್ಲುವಂತಾಗಿದೆ. ಅವನ ಜತೆಗೆ ಇನ್ನು ನಾಲ್ವರೂ ಬಂಧನಕ್ಕೀಡಾಗಿದ್ದು, ದೇವರನ್ನೇ ಕಾಮಿಡಿ ಮಾಡಿದ್ದ ಇವರೇ ಈಗ ಅಲ್ಲಿನ ಜನರ ಮುಂದೆ ಕಾಮಿಡಿ ಪೀಸ್ಗಳಂತಾಗಿದ್ದಾರೆ.
ದೇವರನ್ನು ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಕಾಮಿಡಿ ಶೋನಲ್ಲಿ ಅಪಹಾಸ್ಯ ಮಾಡಿದ್ದವನ ವಿರುದ್ಧ ಬಿಜೆಪಿ ಶಾಸಕಿಯ ಪುತ್ರನೇ ದೂರು ನೀಡಿದ್ದು, ಪೊಲೀಸರು ಈಗ ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಗುಜರಾತ್ನ ಮುನಾವರ್ ಫರೂಕಿ ಬಂಧಿತ. ಮಧ್ಯಪ್ರದೇಶದ ಇಂದೋರ್ನಲ್ಲಿ ಶುಕ್ರವಾರ ನಡೆದ ಕಾಮಿಡಿ ಶೋನಲ್ಲಿ ಆತ ಈ ಅವಹೇಳನ ಮಾಡಿದ್ದ.
ಬಿಜೆಪಿ ಶಾಸಕಿ ಮಾಲಿನಿ ಲಕ್ಷ್ಮಣ್ ಸಿಂಗ್ ಅವರ ಪುತ್ರ ಏಕಲವ್ಯ ಸಿಂಗ್ ಕೌರ್ ಈ ಬಗ್ಗೆ ದೂರು ನೀಡಿದ್ದರು. ಸ್ನೇಹಿತರ ಜತೆ ಪ್ರೇಕ್ಷಕನಾಗಿ ನಾನು ಆ ಕಾಮಿಡಿ ಶೋಗೆ ಹೋಗಿದ್ದು, ಅಲ್ಲಿ ಮುನಾವರ್ ದೇವರನ್ನು ಹಾಗೂ ಅಮಿತ್ ಷಾ ಅವರನ್ನು ಅಪಮಾನಿಸಿದ್ದ. ಅದನ್ನು ನಾವು ಆಕ್ಷೇಪಿಸಿದ್ದೆವು ಎಂದು ಏಕಲವ್ಯ ದೂರು ನೀಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಮುನಾವರ್ ಜತೆ ಎಡ್ವಿನ್ ಆ್ಯಂಟನಿ, ಪ್ರಕಾಶ್ ವ್ಯಾಸ್, ಪ್ರಿಯಂ ವ್ಯಾಸ್ ಮತ್ತು ನಳಿನ್ ಯಾದವ್ ಎಂಬವರನ್ನೂ ಪೊಲೀಸರು ಬಂಧಿಸಿದ್ದಾರೆ. (ಏಜೆನ್ಸೀಸ್)