ನನ್ನ ಸಿನಿಮಾ, ನನ್ನ ಹಾಡು, ಯಾರೂ ಬಳಸುವಂತಿಲ್ಲ … 'ಸ್ವಾತಿಮುತ್ತಿನ ಮಳೆ ಹನಿಯೇ' ಟೈಟಲ್ ಕೊಡಲ್ಲ ಎಂದ ಬಾಬು

Swathi Muttina Male Haniye - Rajendra Singh Babu
Published on

ಬೆಂಗಳೂರು: ರಮ್ಯಾ ನಿರ್ಮಾಣದ 'ಸ್ವಾತಿಮುತ್ತಿನ ಮಳೆ ಹನಿಯೇ' ಚಿತ್ರಕ್ಕೆ ಸಂಕಷ್ಟ ಎದುರಾಗಿರುವುದು ಗೊತ್ತೇ ಇದೆ. ಆ ಶೀರ್ಷಿಕೆಯನ್ನು ನೀಡಬಾರದು ಎಂದು ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರಸಿಂಗ್ ಬಾಬು ನೊಟೀಸ್ ನೀಡಿದ್ದಾರೆ.

ಈ ಸಂಬಂಧ ರಾಜೇಂದ್ರ ಸಿಂಗ್​ ಬಾಬು ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಿಗೆ ಬಾಬು ಅವರು ತಮ್ಮ ವಕೀಲ ಎಸ್.ಆರ್. ಶ್ರೀನಿವಾಸ್ ಮೂರ್ತಿ ಮೂಲಕ ನೊಟೀಸ್ ನೋಟೀಸ್​ ನೀಡಿದ್ದಾರೆ. ಶೀರ್ಷಿಕೆ ನೀಡಿದರೆ ಕೃತಿ ಚೌರ್ಯವಾಗುತ್ತದೆ ಎಂದು ಉಲ್ಲೇಖಿಸಿದ್ದಾರೆ.

'ಸ್ವಾತಿಮುತ್ತಿನ ಮಳೆ ಹನಿಯೇ' ಎಂಬ ಶೀರ್ಷಿಕೆಯು ರಾಜೇಂದ್ರ ಸಿಂಗ್​ ಬಾಬು ನಿರ್ದೇಶನದ 'ಬಣ್ಣದ ಗೆಜ್ಜೆ' ಚಿತ್ರದ 'ಸ್ವಾತಿಮುತ್ತಿನ ಮಳೆ ಹನಿಯೇ' ಎಂಬ ಹಾಡಿನಿಂದ ಸ್ಫೂರ್ತಿಪಡೆದಿದೆ. ಅದೇ ಕಾರಣಕ್ಕೆ, ಆ ಶೀರ್ಷಿಕೆಯನ್ನು ಇಡುವುದಕ್ಕೆ ರಾಜೇಂದ್ರ ಸಿಂಗ್​ ಬಾಬು ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಬಾಬು, 'ಅದು ನನ್ನ ಸಿನಿಮಾ, ನನ್ನ ಹಾಡು, ಯಾರೂ ಬಳಸುವಂತಿಲ್ಲ. ಈ ವಿಷಯವಾಗಿ ಲಾಯರ್ ಹತ್ತಿರ ಮಾತಾಡಿ ಕರೆಕ್ಟ್ ಉತ್ತರ ಕೊಡ್ತೀ‌ನಿ. ಆ ಟೈಟಲ್​ ಯಾರಿಗೂ ನೀಡಬಾರದು. ನೀಡಿದರೆ ಅದು ಕೃತಿಚೌರ್ಯವಾಗುತ್ತದೆ. ಈ ಕುರಿತು ಕೋರ್ಟ್​ನಲ್ಲೇ ಉತ್ತರ ಕೊಡುತ್ತೀನಿ' ಎಂದು ಅವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net