More

    ಟೈಗರ್​ ನಂತರ ಇನ್ನೊಬ್ಬರೊಂದಿಗೆ ಡೇಟಿಂಗ್​ ಮಾಡ್ತಿದ್ದಾರಾ ದಿಶಾ ಪಠಾಣಿ?

    ಮುಂಬೈ: ಬಾಲಿವುಡ್​ನ ಲವ್​ಬರ್ಡ್ಸ್​ ಎಂದೇ ಜನಪ್ರಿಯವಾಗಿದ್ದ ಟೈಗರ್​ ಶ್ರಾಫ್​ ಮತ್ತು ದಿಶಾ ಪಠಾಣಿ ದೂರವಾಗಿದ್ದು ಈಗ ಹಳೆಯ ಕಥೆ. ಟೈಗರ್​ನಿಂದ ದೂರವಾದ ದಿಶಾ, ಈಗ ಮತ್ತೊಬ್ಬರನ್ನು ಡೇಟಿಂಗ್​ ಮಾಡುತ್ತಿರುವ ಸುದ್ದಿಯೊಂದು ಬಾಲಿವುಡ್​ನಲ್ಲಿ ಸಖತ್​ ಸೌಂಡ್​ ಮಾಡುತ್ತಿದೆ.

    ಇದನ್ನೂ ಓದಿ: ಗ್ಯಾಂಗ್​ಸ್ಟರ್​ ಆದ ವಿಕ್ರಮ್​ ರವಿಚಂದ್ರನ್​ … ಸೆಟ್ಟೇರಿತು ಎರಡನೇ ಸಿನಿಮಾ

    ಹೌದು, ಟೈಗರ್​ನಿಂದ ದೂರವಾಗಿರುವ ದಿಶಾ, ಇದೀಗ ಅಲೆಕ್ಸಾಂಡರ್​ ಅಲೆಕ್ಸ್​ ಎಂಬಾತನೊಂದಿಗೆ ಸಿಕ್ಕಾಪಟ್ಟೆ ಸುತ್ತುತ್ತಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಅಷ್ಟೇ ಅಲ್ಲ, ಇನ್​ಸ್ಟಾಗ್ರಾಂನಲ್ಲಿ ದಿಶಾ, ಅಲೆಕ್ಸಾಂಡರ್​ ಜತೆಗಿರುವ ಹಲವು ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಅವರಿಬ್ಬರ ನಡುವೆ ಕುಛ್​ಕುಛ್​ ಇದೆ ಎಂಬ ಸುದ್ದಿ ಕೇಳಿ ಬರುತ್ತಿದೆ.

    ಆದರೆ, ಎಲ್ಲ ಪ್ರೇಮಿಗಳಂತೆ ಅಲೆಕ್ಸಾಂಡರ್​ ಸಹ ಇದನ್ನು ಅಲ್ಲಗೆಳೆದಿದ್ದಾರೆ, ತಾವಿಬ್ಬರೂ ಒಳ್ಳೆಯ ಸ್ನೇಹಿತರು ಎಂದು ಹೇಳಿಕೊಂಡಿದ್ದಾರೆ. ಈ ಕುರಿತು ಮಾತನಾಡುವ ಅವರು, ‘ನಾನು ಮತ್ತು ದಿಶಾ ಹಳೆಯ ಸ್ನೇಹಿತರು. ನಾವಿಬ್ಬರೂ ಒಬ್ಬರಿಗೊಬ್ಬರು ಆಗಿದ್ದೇವೆ. ಆದರೆ, ನಮ್ ನಡುವೆ ಏನೂ ಇಲ್ಲ. ಜನಕ್ಕೆ ಯಾಕೆ ನಮ್ಮ ಬಗ್ಗೆ ಇಷ್ಟು ಕೆಟ್ಟ ಕುತೂಹಲ. ಯಾಕೆ ಅವರು ಬೇರೆಯವರನ್ನು ನೆಮ್ಮದಿಯಾಗಿ ಇರುವುದಕ್ಕೆ ಬಿಡುವುದಿಲ್ಲ’ ಎಂದು ಪ್ರಶ್ನಿಸಿದ್ದಾರೆ.

    ಬರೀ ದಿಶಾ ಅಷ್ಟೇ ಅಲ್ಲ, ಟೈಗರ್​ ಸಹ ತಮ್ಮ ಒಳ್ಳೆಯ ಗೆಳೆಯ ಎನ್ನುವ ಅಲೆಕ್ಸಾಂಡರ್​, ‘ನನಗೆ ಟೈಗರ್​ ಚೆನ್ನಾಗಿ ಗೊತ್ತು. ಅವರೊಂದಿಗೆ ಒಳ್ಳೆಯ ಗೆಳೆತನ ಇದೆ. ಅದೇ ರೀತಿ ದಿಶಾ ಜತೆಗೂ ಒಳ್ಳೆಯ ಸ್ನೇಹವಿದೆ’ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಅವಿವಾಗೆ ಅಭಿಷೇಕ್​ ತೊಡಿಸಿದ ಉಂಗುರದ ಬೆಲೆ ಎಷ್ಟು?

    ಅಲೆಕ್ಸಾಂಡರ್​ ಮತ್ತು ದಿಶಾ ನಿಜಕ್ಕೂ ಬರೀ ಗೆಳೆಯರಾ? ಎಂಬುದನ್ನು ಕಾಲವೇ ಉತ್ತರಿಸಬೇಕು.

    ಮೆಕ್ಕಾ ಆಯ್ತು; ಈಗ ವೈಷ್ಣೋದೇವಿ ದರ್ಶನ ಪಡೆದ ಶಾರುಖ್​​ ಖಾನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts