ಗ್ಯಾಂಗ್​ಸ್ಟರ್​ ಆದ ವಿಕ್ರಮ್​ ರವಿಚಂದ್ರನ್​ … ಸೆಟ್ಟೇರಿತು ಎರಡನೇ ಸಿನಿಮಾ

Vikram Ravichandran 3
Published on

ಬೆಂಗಳೂರು: 'ತ್ರಿವಿಕ್ರಮ್​' ಬಿಡುಗಡೆಯಾಗಿ ಐದಾರು ತಿಂಗಳಾದರೂ ರವಿಚಂದ್ರನ್​ ಎರಡನೆಯ ಮಗ ವಿಕ್ರಮ್​ ಅಭಿನಯದ ಯಾವೊಂದು ಚಿತ್ರವೂ ಸೆಟ್ಟೇರಿರಲಿಲ್ಲ. ಅವರ ಮುಂದಿನ ಹೆಜ್ಜೆ ಏನಿರಬಹುದು ಎಂಬ ಕುತೂಹಲದಲ್ಲಿ ಇರುವಾಗಲೇ, ವಿಕ್ರಮ್​ ಅಭಿನಯದ ನಾಯಕನಾಗಿ ನಟಿಸುತ್ತಿರುವ ಎರಡನೆಯ ಚಿತ್ರ ಸದ್ದಿಲ್ಲದೆ ಸೆಟ್ಟೇರಿದೆ.

ಇನ್ನೂ, ಹೆಸರಿಡದ ಈ ಚಿತ್ರ ಇತ್ತೀಚೆಗೆ ಸದ್ದಿಲ್ಲದೆ ಸೆಟ್ಟೇರಿದೆ. ವಿಕ್ರಮ್​ ಸಹೋದರ ಮನುರಂಜನ್​ ರವಿಚಂದ್ರನ್​ ಚಿತ್ರದ ಮುಹೂರ್ತಕ್ಕೆ ಬಂದು, ಮೊದಲ ದೃಶ್ಯಕ್ಕೆ ಕ್ಲಾಪ್​ ಮಾಡಿದ್ದಾರೆ.

ತಮಿಳು, ತೆಲುಗು ಚಿತ್ರರಂಗದಲ್ಲಿ ಸಹ ನಿರ್ದೇಶಕನಾಗಿ, ಬರಹಗಾರನಾಗಿ ಗುರುತಿಸಿಕೊಂಡಿರುವ ಕಾರ್ತಿಕ್ ರಾಜನ್​ ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಕನ್ನಡದಲ್ಲಿ 'ಹೆಡ್ ಬುಷ್' ಸಿನಿಮಾದಲ್ಲಿ ಸಹನಿರ್ದೇಶಕರಾಗಿ ದುಡಿದ ಅನುಭವ ಕಾರ್ತಿಕ್ ರಾಜನ್ ಅವರಿಗಿದೆ.ಈ ಚಿತ್ರದಲ್ಲಿ ವಿಕ್ರಮ್​ ಗ್ಯಾಂಗ್​ಸ್ಟರ್​ ಒಬ್ಬನ ಪಾತ್ರ ಮಾಡುತ್ತಿದ್ದು, ಬೇರೆಯದೇ ತರಹ ಕಾಣಿಸಿಕೊಳ್ಳಲಿದ್ದಾರಂತೆ. ಈ ಚಿತ್ರದಲ್ಲಿ ಅವರು ಮೊದಲ ಬಾರಿಗೆ ಮಾಸ್​ ಹೀರೋ ಆಗಿ ನಟಿಸಲಿದ್ದಾರೆ.

ಸದ್ಯ ಇನ್ನೂ ಹೆಸರಿಡಿದ ಈ ಚಿತ್ರದ ಪ್ರೀ-ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿದ್ದು, ಜನವರಿಯಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ತಮನ್ ಜೊತೆ ಕೆಲಸ ಮಾಡಿ ಅನುಭವ ಇರುವ ಯುವರಾಜ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ 'ಮುಗಿಲ್​ಪೇಟೆ' ಚಿತ್ರವನ್ನು ನಿರ್ಮಿಸಿದ್ದ ರಕ್ಷಾ ಮತ್ತು ವಿಜಯ್​ ಕುಮಾರ್​, ಈ ಚಿತ್ರವನ್ನೂ ನಿರ್ಮಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net