ಪ್ರಯಾಣಿಕರಿಗೆ ಸಿಹಿ ಸುದ್ದಿ: ಎಲ್ಲ ಎಸಿ ರೈಲುಗಳ ಟಿಕೆಟ್​ ದರ ಕಡಿತ

train
ಸಾಂದರ್ಭಿಕ ಚಿತ್ರ
Published on

ದೆಹಲಿ: ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಶುಭಸುದ್ದಿಯೊಂದನ್ನು ನೀಡಿದ್ದು, ಟಿಕೆಟ್​​ ದರವನ್ನು ಶೇ.25ರಷ್ಟು ಕಡಿತಗೊಳಿಸುವುದಾಗಿ ಘೋಷಿಸಿದೆ.

ಇದನ್ನೂ ಓದಿ: VIDEO| ಮತದಾನ ನಡೆಯುವಾಗಲೇ ಮತಪೆಟ್ಟಿಗೆಯೊಂದಿಗೆ ಓಡಿಹೋದ ಭೂಪ

ಈ ಕುರಿತು ಆದೇಶವನ್ನು ಹೊರಡಿಸಿರುವ ರೈಲ್ವೆ ಇಲಾಖೆಯು, ಎಸಿ ಆಸನ ವ್ಯವಸ್ಥೆ ಹೊಂದಿರುವ ಎಲ್ಲ ರೈಲು ಮತ್ತು ಎಕ್ಸಿಕ್ಯೂಟಿವ್ ಬೋಗಿಗಳ ಸೀಟಿನ ದರವನ್ನು ಶೇಕಡಾ 25 ರಷ್ಟು ಕಡಿತಗೊಳಿಸುವುದಾಗಿ ಘೋಷಿಸಿದೆ. ಈ ಕ್ರಮವು ವಂದೇ ಭಾರತ್ ರೈಲಿಗೂ ಅನ್ವಯವಾಗಲಿದ್ದು, ಇದರಿಂದಾಗಿ ಪ್ರಯಾಣಿಕರಿಗೂ ಪ್ರಯೋಜನವಾಗಲಿದೆ.

ರೈಲುಗಳಲ್ಲಿನ ವಸತಿ ಸೌಕರ್ಯಗಳ ಬಳಕೆಯನ್ನು ಉತ್ತಮಗೊಳಿಸುವ ದೃಷ್ಟಿಯಿಂದ ಈ ಕ್ರಮಕೈಗೊಳ್ಳಲಾಗಿದೆ. ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟು ಎಸಿ ಆಸನ ವ್ಯವಸ್ಥೆ ಹೊಂದಿರುವ ರೈಲುಗಳಲ್ಲಿ ರಿಯಾಯಿತಿ ದರದ ಯೋಜನೆಯನ್ನು ಪರಿಚಯಿಸಲು ವಲಯ ರೈಲ್ವೆಗಳಿಗೆ ಅಧಿಕಾರವನ್ನು ನೀಡಲು ರೈಲ್ವೇ ಸಚಿವಾಲಯ ನಿರ್ಧರಿಸಿದೆ.

ಇದನ್ನೂ ಓದಿ: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ಶೀಘ್ರವೇ ಸಿಎಂ ಬದಲಾವಣೆ ಎಂದ ಆದಿತ್ಯ ಠಾಕ್ರೆ

ರಿಯಾಯಿತಿಯ ಪ್ರಮಾಣವು ಮೂಲ ದರದ ಗರಿಷ್ಠ 25 ಪ್ರತಿಶತದವರೆಗೆ ಇದ್ದು, ಮೀಸಲಾತಿ ಶುಲ್ಕ, ಸೂಪರ್ ಫಾಸ್ಟ್ ಸರ್ಚಾರ್ಜ್, ಜಿಎಸ್ಟಿ , ಇತ್ಯಾದಿಗಳಂತಹ ಇತರ ಶುಲ್ಕಗಳನ್ನು ಪ್ರತ್ಯೇಕವಾಗಿ ವಿಧಿಸಲಾಗುತ್ತದೆ. ಈ ದರಗಳು ಸಹ ಸ್ಪರ್ಧಾತ್ಮಕ ಸಾರಿಗೆ ವಿಧಾನಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ಆದೇಶದಲ್ಲಿ ತಿಳಿಸಿದೆ. ಈ ವಿನಾಯಿತಿಯನ್ನು ತಕ್ಷಣವೇ ಜಾರಿಗೆ ತರಲಾಗುವುದು. ಆದರೆ, ಈಗಾಗಲೇ ಬುಕಿಂಗ್​​ ಮಾಡಿದ ಪ್ರಯಾಣಿಕರಿಗೆ ಯಾವುದೇ ಶುಲ್ಕವನ್ನು ಮರುಪಾವತಿ ಮಾಡಲಾಗುವುದಿಲ್ಲ ಎಂದು ತಿಳಿಸಲಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net