More

    ಪಶ್ಚಿಮ ಬಂಗಾಳ ಪಂಚಾಯತ್​ ಚುನಾವಣೆ; ಹಿಂಸಾಚಾರಕ್ಕೆ 9 ಜನರ ಸಾವು

    ಕೋಲ್ಕತ್ತಾ: ಪಂಚಾಯತ್​ ಚುನಾವಣೆ ವೇಳೆ ನಡೆದ ಹಿಂಸಾಚಾರಕ್ಕೆ 9 ಜನರು ಮೃತಪಟ್ಟಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

    ಇದನ್ನೂ ಓದಿ: ರಾಸಾಯನಿಕ ಶಸ್ತ್ರಾಸ್ತ್ರ ಮುಕ್ತ ಜಗತ್ತಿಗಾಗಿ, ತನ್ನ ಯುದ್ಧ ಸಾಮಗ್ರಿ ನಾಶಪಡಿಸಿದ ಅಮೇರಿಕಾ

    ರಾಜ್ಯದ ಹಲವೆಡೆ ಹಿಂಸಾಚಾರ ಕೃತ್ಯಗಳು ನಡೆದಿದ್ದು, ಹತ್ಯೆಯಾದವರಲ್ಲಿ ಐವರು ತೃಣಮೂಲ ಸದಸ್ಯರು ಮತ್ತು ಬಿಜೆಪಿ, ಎಡ ಮತ್ತು ಕಾಂಗ್ರೆಸ್‌ನ ತಲಾ ಒಬ್ಬ ಕಾರ್ಯಕರ್ತ ಮತ್ತು ಒಬ್ಬ ಸ್ವತಂತ್ರ ಅಭ್ಯರ್ಥಿಯ ಬೆಂಬಲಿಗರು ಇದ್ದಾರೆ.

    ಮೂರು ಹಂತದ ಪಂಚಾಯತಿ ಚುನಾವಣೆಗೆ ಇಂದು ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ರಾಜ್ಯದಲ್ಲಿ ಮೂರು ಹಂತದ ಪಂಚಾಯತ್ ವ್ಯವಸ್ಥೆಯಲ್ಲಿ 73,887 ಸ್ಥಾನಗಳಿಗೆ ಒಟ್ಟು 2.06 ಲಕ್ಷ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

    ಇದನ್ನೂ ಓದಿ: ಇನ್ಮುಂದೆ ಒಂದು ಒವರ್​ನಲ್ಲಿ ಎರಡು ಬೌನ್ಸರ್, ಹೊಸ ನಿಯಮ ಪ್ರಕಟಿಸಿದ ಬಿಸಿಸಿಐ

    ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌, ಭದ್ರತಾ ಪಡೆಗಳ ದೊಡ್ಡ ವೈಫಲ್ಯ ಎಂದು ಆರೋಪಿಸಿದ್ದು, ಹಿಂಸಾತ್ಮಕ ಘರ್ಷಣೆಗಳ ಜೊತೆಗೆ ಹಲವಾರು ಜನರು ಗಾಯಗೊಂಡಿದ್ದಾರೆ. ಕನಿಷ್ಠ ಎರಡು ಮತಗಟ್ಟೆಗಳಲ್ಲಿ ಮತಪೆಟ್ಟಿಗೆಗಳನ್ನು ನಾಶಪಡಿಸಲಾಗಿದ್ದು, ಜೂನ್ 8ರಂದು ಪಂಚಾಯತ್​​ ಚುನಾವಣೆ ದಿನಾಂಕ ಘೋಷಣೆ ಮಾಡಿದ್ದು ಅಂದಿನಿಂದ ಬಂಗಾಳದಾದ್ಯಂತ ವ್ಯಾಪಕ ಹಿಂಸಾಚಾರ ಪ್ರಕರಣಗಳು ನಡೆದಿವೆ.

    70ರ ದಶಕದ ಬಂಗಾಳದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯು ಪ್ರಾರಂಭವಾದಾಗಿದ್ದು, ಗ್ರಾಮ ಸಭೆಗಳಿಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಚುನಾವಣೆಯು ಎರಡನೇ ಬಾರಿಗೆ ಕೇಂದ್ರ ಪಡೆಗಳ ಕಾವಲು ಕಣ್ಣುಗಳ ಅಡಿಯಲ್ಲಿ ನಡೆಯುತ್ತಿದ್ದು, ಇಂದು ಬಂಗಾಳದಾದ್ಯಂತ ಸುಮಾರು 65,000 ಕೇಂದ್ರ ಪೊಲೀಸ್ ಸಿಬ್ಬಂದಿ ಮತ್ತು 70,000 ರಾಜ್ಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.(ಏಜೆನ್ಸೀಸ್​​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts