

ವಾಷಿಂಗ್ಟನ್: ಅಮೇರಿಕಾ ದೇಶವು ತನ್ನ ರಾಸಾಯನಿಕ ಅಸ್ತ್ರಗಳನ್ನು ಸಂಪೂರ್ಣವಾಗಿ ನಾಶಪಡಿಸಿದೆ ಎಂದು ಯುಎಸ್ ಅಧ್ಯಕ್ಷ ಜೋ ಬಿಡನ್ ಘೋಷಿಸಿದ್ದಾರೆ.
ಇದನ್ನೂ ಓದಿ: ಟ್ರಾಯ್ನಿಂದ ವಾಟ್ಸ್ಆ್ಯಪ್, ಟೆಲಿಗ್ರಾಮ್ ಹಾಗೂ ಒಟಿಟಿ ಆ್ಯಪ್ಗಳಿಗೆ ಕಡಿವಾಣ..?
ಯುನೈಟೆಡ್ ಸ್ಟೇಟ್ಸ್ ತನ್ನ ದಶಕಗಳಷ್ಟು ಹಳೆಯದಾದ ರಾಸಾಯನಿಕ ಶಸ್ತ್ರಾಸ್ತ್ರಗಳ ಸಂಗ್ರಹವನ್ನು ಸಂಪೂರ್ಣವಾಗಿ ನಾಶಪಡಿಸಿದ್ದು, ದಾಸ್ತಾನು ಸಂಗ್ರಹದಲ್ಲಿರುವ ಅಂತಿಮ ಯುದ್ಧಸಾಮಗ್ರಿಗಳನ್ನು ಸುರಕ್ಷಿತವಾಗಿ ನಾಶಪಡಿಸಿದೆ ಎಂದು ಘೋಷಿಸಲು ನಾನು ಹೆಮ್ಮೆಪಡುತ್ತೇನೆ. ರಾಸಾಯನಿಕ ಶಸ್ತ್ರಾಸ್ತ್ರಗಳ ಭಯಾನಕತೆಯಿಂದ ಮುಕ್ತವಾದ ಜಗತ್ತಿಗಾಗಿ ಒಂದು ಹೆಜ್ಜೆ ಮುಂದೆ ಇರಿಸಿದ್ದೇವೆ ಎಂದು ಬಿಡೆನ್ ಹೇಳಿದ್ದಾರೆ.
ಸಾಸಿವೆ ಅನಿಲಗಳು, ವಿಎಕ್ಸ್ ಮತ್ತು ಸರೈನ್ ನರ್ವ್ ಏಜೆಂಟ್ ಮತ್ತು ಬ್ಲಿಸ್ಟರ್ ಏಜೆಂಟ್‌ಗಳನ್ನು ಒಳಗೊಂಡಿರುವ ಫಿರಂಗಿ ಸ್ಪೋಟಕಗಳು ಮತ್ತು ರಾಕೆಟ್‌ಗಳ ಮಳಿಗೆಗಳನ್ನು ಅಮೇರಿಕಾ ಹೊಂದಿತ್ತು. ಸದ್ಯ, ಇವುಗಳ ನಾಶಮಾಡಲಾಗಿದೆ.
ಇದನ್ನೂ ಓದಿ: ಪತ್ನಿಯನ್ನು ಹತ್ಯೆಗೈದು ಆಕೆ ಮೆದುಳನ್ನೇ ತಿಂದ ಪತಿ, ತಲ್ಲಣ ಮೂಡಿಸಿದ ಭೀಕರ ಕೃತ್ಯ
ಮೊದಲ ವಿಶ್ವಯುದ್ಧದಲ್ಲಿ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಬಳಸಲಾಗಿತ್ತು. ಈ ಯುದ್ಧದಲ್ಲಿ ಕನಿಷ್ಠ 100,000 ಜನರನ್ನು ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಶಸ್ತ್ರಾಸ್ತ್ರಗಳ ಬಳಕೆಯನ್ನು ಜಿನೀವಾ ಕನ್ವೆನ್ಶನ್‌ನಿಂದ ನಿಷೇಧಿಸಲಾಗಿದ್ದರೂ ಸಹ, ವಿಶ್ವದ ಹಲವು ದೇಶಗಳು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವುದನ್ನು ಮುಂದುವರೆಸಿವೆ.(ಏಜೆನ್ಸೀಸ್)