ಇನ್ಮುಂದೆ ಒಂದು ಒವರ್​ನಲ್ಲಿ ಎರಡು ಬೌನ್ಸರ್, ಹೊಸ ನಿಯಮ ಪ್ರಕಟಿಸಿದ ಬಿಸಿಸಿಐ

BCCI
Published on

ಮುಂಬೈ: ದೇಶಿಯ ಟಿ20 ಪಂದ್ಯಗಳಿಗೆ ಒಂದು ಒವರ್​ನಲ್ಲಿ ಎರಡು ಬೌನ್ಸರ್​​​​​ ಸೇರಿದಂತೆ ಬಿಸಿಸಿಐ ಹಲವಾರು ಹೊಸ ನಿಯಮಗಳನ್ನು ಪ್ರಕಟಿಸಿದೆ.

ಇದನ್ನೂ ಓದಿ: ಪತ್ನಿಯನ್ನು ಹತ್ಯೆಗೈದು ಆಕೆ ಮೆದುಳನ್ನೇ ತಿಂದ ಪತಿ, ತಲ್ಲಣ ಮೂಡಿಸಿದ ಭೀಕರ ಕೃತ್ಯ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ತನ್ನ 19ನೇ ಅಪೆಕ್ಸ್ ಕೌನ್ಸಿಲ್ ಸಭೆಯನ್ನು ಮುಂಬೈನಲ್ಲಿ ನಡೆಸಿದ್ದು, ಈ ಸಭೆಯಲ್ಲಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

ಬಿಸಿಸಿಐ ನಿವೃತ್ತ ಆಟಗಾರರನ್ನು ಒಳಗೊಂಡಂತೆ ವಿದೇಶಿ ಟಿ20 ಲೀಗ್‌ಗಳಲ್ಲಿ ಭಾಗವಹಿಸುವ ಬಗ್ಗೆ ನೀತಿಯನ್ನು ರೂಪಿಸುತ್ತದೆ. ಅಲ್ಲದೇ, 2023ರ ಸೆಪ್ಟೆಂಬರ್‌ನಲ್ಲಿ ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ಗೆ ಬಿಸಿಸಿಐ ಪುರುಷ ಮತ್ತು ಮಹಿಳಾ ತಂಡಗಳನ್ನು ಕಳುಹಿಸಲಿದೆ.

ಆದರೆ, ಮೊದಲು 2023ರ ಪುರುಷರ ಕ್ರಿಕೆಟ್ ವಿಶ್ವಕಪ್ ತಂಡವನ್ನು ಆಯ್ಕೆ ಮಾಡಿದ ನಂತರ, ವಿಶ್ವಕಪ್‌ನಲ್ಲಿ ಭಾಗವಹಿಸದ ಆಟಗಾರರನ್ನು ಪರಿಗಣನೆಗೆ ತೆಗೆದುಕೊಂಡು ಏಷ್ಯನ್ ಗೇಮ್ಸ್‌ನಲ್ಲಿ ಆಡಲು ತಂಡದ ಆಯ್ಕೆ ನಡೆಯುತ್ತದೆ.

ಇದನ್ನೂ ಓದಿ: ಟ್ರಾಯ್​​​ನಿಂದ ವಾಟ್ಸ್​​​​ಆ್ಯಪ್​, ಟೆಲಿಗ್ರಾಮ್​ ಹಾಗೂ ಒಟಿಟಿ ಆ್ಯಪ್​ಗಳಿಗೆ ಕಡಿವಾಣ..?

ದೇಶೀಯ ಟಿ20 ಪಂದ್ಯಗಳಿಗೆ ಬಿಸಿಸಿಐ ಹೊಸ ನಿಯಮಗಳನ್ನು ಪ್ರಕಟಿಸಿದ್ದು, ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿನ ತಂಡಗಳು ಟಾಸ್ ಮಾಡುವ ಮೊದಲು ನಾಲ್ಕು ಬದಲಿ ಆಟಗಾರರೊಂದಿಗೆ ಅಂತಿಮ 11 ಜನರನ್ನು ಆಯ್ಕೆ ಮಾಡಬೇಕಾಗುತ್ತದೆ.

ಪಂದ್ಯದ ಸಮಯದಲ್ಲಿ ಯಾವುದೇ ಸಮಯದಲ್ಲಿ ತಂಡಗಳು ಇಂಪ್ಯಾಕ್ಟ್ ಪ್ಲೇಯರ್​​ನ್ನು ಬಳಸಬಹುದಾಗಿದೆ. ಅಲ್ಲದೇ, ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಪ್ರತಿ ಓವರ್‌ಗೆ ಎರಡು ಬೌನ್ಸರ್‌ಗಳನ್ನು ಪರಿಚಯಿಸಲು ಬಿಸಿಸಿಐ ನಿರ್ಧರಿಸಿದೆ. ಜತೆಗೆ ಎರಡು ಹಂತಗಳಲ್ಲಿ ದೇಶದ ಸ್ಟೇಡಿಯಂಗಳನ್ನು ಮೇಲ್ದರ್ಜೆಗೇರಿಸಲು ಯೋಜನೆ ರೂಪಿಸಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net