More

    ಮೋದಿ ಉಪನಾಮ ಪ್ರಕರಣ: ಸುಪ್ರೀಂ ಕೋರ್ಟ್​ ಕದ ತಟ್ಟಲಿರುವ ರಾಹುಲ್​ ಗಾಂಧಿ

    ಅಹ್ಮದಾಬಾದ್​​​​: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ 2019ರ ಮಾನನಷ್ಟ ಮೊಕದ್ದಮೆಯ ಶಿಕ್ಷೆಗೆ ತಡೆ ನಿರಾಕರಿಸಿದ ಆದೇಶವನ್ನು ಗುಜರಾತ್ ಹೈಕೋರ್ಟ್ ಇಂದು ಎತ್ತಿಹಿಡಿದಿದ್ದು, ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದಾಗಿ ಕಾಂಗ್ರೆಸ್ ಪಕ್ಷ ಹೇಳಿದೆ.

    ಇದನ್ನೂ ಓದಿ: ಇದು​ ಐದು ಗ್ಯಾರಂಟಿ ಮತ್ತು ಪ್ರಣಾಳಿಕೆ ಅಂಶಗಳನ್ನು ಒಳಗೊಂಡ ಬಜೆಟ್​​​: ಸಿಎಂ ಸಿದ್ದರಾಮಯ್ಯ

    ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಮಾತನಾಡಿ, ಗುಜರಾತ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ, ಪಕ್ಷವು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಿದೆ. ನಮ್ಮ ಮುಂದೆ ಇನ್ನೂ ಒಂದು ಆಯ್ಕೆ ಇದೆ ಎಂದು ಕೋಝಿಕ್ಕೋಡ್‌ನಲ್ಲಿ ಪಕ್ಷದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

    ಶುಕ್ರವಾರದಂದು ಗುಜರಾತ್ ಹೈಕೋರ್ಟ್, ರಾಹುಲ್ ಗಾಂಧಿಯ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದ್ದು, ಅಪರಾಧಿ ಶಿಕ್ಷೆಯನ್ನು ತಡೆಯಲು ಯಾವುದೇ ಸಮಂಜಸವಾದ ಕಾರಣವಿಲ್ಲ. ವಿಚಾರಣಾ ನ್ಯಾಯಾಲಯದ ಆದೇಶವು ನ್ಯಾಯಯುತ ಮತ್ತು ಕಾನೂನುಬದ್ಧವಾಗಿದೆ. ಈ ಆದೇಶದಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ. ಅನರ್ಹತೆಯು ಕೇವಲ ಸಂಸದರು ಮತ್ತು ಶಾಸಕರಿಗೆ ಸೀಮಿತವಾಗಿಲ್ಲ ಎಂದು ಹೈಕೋರ್ಟ್ ಪೀಠ ಹೇಳಿದೆ.

    ಇದನ್ನೂ ಓದಿ: ರಾಹುಲ್ ಗಾಂಧಿಗೆ ಹಿನ್ನಡೆ: ಮೋದಿ ಉಪನಾಮ ಪ್ರಕರಣದ ಮೇಲ್ಮನವಿ ವಜಾಗೊಳಿಸಿದ ಗುಜರಾತ್​ ಹೈಕೋರ್ಟ್

    ಏಪ್ರಿಲ್‌ನಲ್ಲಿ, ಸೂರತ್‌ನ ಸೆಷನ್ಸ್ ನ್ಯಾಯಾಲಯವು, ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ನೀಡಿದ ಶಿಕ್ಷೆಯ ಆದೇಶವನ್ನು ಎತ್ತಿ ಹಿಡಿದು ಕಾಂಗ್ರೆಸ್ ನಾಯಕನ ಮನವಿಯನ್ನು ವಜಾಗೊಳಿಸಿತ್ತು. ಇದರ ಪರಿಣಾಮವಾಗಿ ಕೇರಳದ ವಯನಾಡಿನಿಂದ ಲೋಕಸಭೆಗೆ ಆಯ್ಕೆಯಾಗಿದ್ದ ರಾಹುಲ್ ಅವರು ಸಂಸತ್ತಿನಿಂದ ಅನರ್ಹರಾಗಿದ್ದಾರೆ.

    ಸದ್ಯ, ಸೆಷನ್ಸ್​​ ನ್ಯಾಯಲಯ ನೀಡಿರುವ ಆದೇಶವನ್ನು ಎತ್ತಿಹಿಡಿದು ರಾಹುಲ್​ ಅರ್ಜಿಯನ್ನು ವಜಾಗೊಳಿಸಿದ್ದು, ಈಗ ರಾಹುಲ್​ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಿದ್ದಾರೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts