More

    ಇದು​ ಐದು ಗ್ಯಾರಂಟಿ ಮತ್ತು ಪ್ರಣಾಳಿಕೆ ಅಂಶಗಳನ್ನು ಒಳಗೊಂಡ ಬಜೆಟ್​​​: ಸಿಎಂ ಸಿದ್ದರಾಮಯ್ಯ

    ಬೆಂಗಳೂರು: ನಮ್ಮ ಬಜೆಟ್​​ ಐದು ಗ್ಯಾರಂಟಿ ಮತ್ತು ಪ್ರಣಾಳಿಕೆಯ ಅಂಶಗಳನ್ನು ಒಳಗೊಂಡ ಗ್ಯಾರಂಟಿ ಬಜೆಟ್ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ಇದನ್ನೂ ಓದಿ: ರಾಜ್ಯ ಬಜೆಟ್​​ನಲ್ಲಿ ನೀರಾವರಿ ಕ್ಷೇತ್ರಕ್ಕೆ ಸಿಕ್ಕ ಕೊಡುಗೆ, ಸಮಗ್ರ ಚಿತ್ರಣ ಹೀಗಿದೆ…

    ರಾಜ್ಯ ಬಜೆಟ್​​ನ್ನು ಮಂಡಿಸಿದ ಬಳಿಕ ಈ ಕುರಿತು ಮಾತನಾಡಿದ ಸಿಎಂ, 2023-24ರ ಸಾಲಿನ ಬಜೆಟ್ ಗಾತ್ರ 3,27,747 ಲಕ್ಷ ಕೋಟಿ ರೂಪಾಯಿ ಆಗಿದ್ದು, ಮಾಜಿ ಸಿಎಂ ಬೊಮ್ಮಾಯಿ ನೇತೃತ್ವದ ಸರ್ಕಾರವು 3,09,182 ಲಕ್ಷ ಕೋಟಿ ರೂಪಾಯಿ ಬಜೆಟ್​​ನ್ನು ಮಂಡಿಸಿದ್ದರು ಎಂದು ತಿಳಿಸಿದ್ದಾರೆ.

    ನಮ್ಮದು ಪಂಚ ಗ್ಯಾರಂಟಿ ಮತ್ತು ಪ್ರಣಾಳಿಕೆಯನ್ನ ಒಳಗೊಂಡ ಗ್ಯಾರಂಟಿ ಬಜೆಟ್ ಇದಾಗಿದ್ದು, ಗ್ಯಾರಂಟಿಗಳಿಗಾಗಿ 35,410 ಕೋಟಿ ರೂ. ಈ ವರ್ಷದ ಉಳಿದ ಅವಧಿಗೆ ಬೇಕಾದಂತಹ ಮೊತ್ತವಾಗಿದೆ. ಈ ಐದು ಗ್ಯಾರಂಟಿಗಳ ಜಾರಿಗೆ ವರ್ಷಕ್ಕೆ 52 ಸಾವಿರ ಕೋಟಿ ರೂ.ಬೇಕಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

    ಇದನ್ನೂ ಓದಿ: ನವದಂಪತಿಗೆ ಗುಡ್​​ ನ್ಯೂಸ್​​ ಕೊಟ್ಟ ಸಿದ್ದರಾಮಯ್ಯ ಬಜೆಟ್​​; ವಿವಾಹ ನೋಂದಣಿ ಮತ್ತಷ್ಟು ಸುಲಭ

    ವಿಪಕ್ಷಗಳು ದುಡ್ಡು ಎಲ್ಲಿಂದ ತರುತ್ತಾರೆ, ಗ್ಯಾರಂಟಿ ಜಾರಿಗೊಳಿಸಲು ಆಗುವುದಿಲ್ಲ ಎಂಬ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಧಾನಿಯವರು ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿ ಆಗುತ್ತದೆ ಎಂದು ಹೇಳಿದ್ದಾರೆ. 9 ವರ್ಷ ಪ್ರಧಾನಿಯಾಗಿರುವ ಅವರು ಈ ಮಾತು ಹೇಳಿದ್ದಾರೆ ಎಂದು ಸಿಎಂ ಹೇಳಿದ್ದಾರೆ
    ನಾವು ಗ್ಯಾರಂಟಿಗಳ ಜಾರಿಗೆ ಹಣ ಒದಗಿಸುವುದರ ಜತೆಗೆ ಕ್ರೋಢೀಕರಣ ಮಾಡ್ತೇವೆ. ಎಲ್ಲ ಪಂಚ ಗ್ಯಾರಂಟಿ ನೂರಕ್ಕೆ ನೂರರಷ್ಟು ಜಾರಿಗೊಳಿಸುತ್ತೇವೆ ಎಂದು ಹೇಳಿದ್ದೆವು.

    ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಪಂಚ ಗ್ಯಾರಂಟಿಗೂ ಹಣ ಒದಗಿಸಿದ್ದೇವೆ. ರಾಜ್ಯ ದಿವಾಳಿಯಾಗದಂತೆ ನೋಡಿಕೊಂಡಿದ್ದೇವೆ. ಪ್ರಣಾಳಿಕೆಯಲ್ಲಿ ಹೇಳಿದಂತೆ 76 ಕಾರ್ಯಕ್ರಮವನ್ನು ಜಾರಿಗೊಳಿಸಲು ಇಂದು ಘೋಷಣೆ ಮಾಡಿ, ಅದಕ್ಕೆ ದುಡ್ಡು ಕೂಡ ಬಿಡುಗಡೆ ಮಾಡಿದ್ದೇವೆ ಎಂದು ಸಿಎಂ ಹೇಳಿದ್ದಾರೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts