More

    VIDEO| ಮತದಾನ ನಡೆಯುವಾಗಲೇ ಮತಪೆಟ್ಟಿಗೆಯೊಂದಿಗೆ ಓಡಿಹೋದ ಭೂಪ

    ಕೂಚ್​​ಬೆಹರ್: ಮತದಾನದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಮತಪೆಟ್ಟಿಗೆಯೊಂದಿಗೆ ಓಡಿ ಹೋಗಿರುವ ವಿಚಿತ್ರ ಘಟನೆ ಪಶ್ಚಿಮ ಬಂಗಾಳದ ಕೂಚ್​​ಬೆಹರ್ ಜಿಲ್ಲೆಯಲ್ಲಿ ನಡೆದಿದೆ.

    ಇದನ್ನೂ ಓದಿ: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ಶೀಘ್ರವೇ ಸಿಎಂ ಬದಲಾವಣೆ ಎಂದ ಆದಿತ್ಯ ಠಾಕ್ರೆ

    ಪಂಚಾಯತ್ ಚುನಾವಣೆಯ ಮತದಾನ ನಡೆಯುತ್ತಿರುವಾಗಲೇ ಈ ಘಟನೆ ನಡೆದಿದ್ದು, ಇದು ಚುನಾವಣೆಯ ಸಮಗ್ರತೆ ಮತ್ತು ಚುನಾವಣಾ ಪ್ರಕ್ರಿಯೆಯ ಬಗ್ಗೆ ಕಳವಳ ಮೂಡಿಸಿದೆ. ವ್ಯಕ್ತಿಯೊಬ್ಬ ಮತಪೆಟ್ಟಿಗೆಯೊಂದಿಗೆ ಓಡಿ ಹೋಗುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಈ ವ್ಯಕ್ತಿ ಬಿಜೆಪಿಗೆ ಸೇರಿದ್ದಾನೆ ಎಂದು ಟಿಎಂಸಿ ಆರೋಪಿಸಿದ್ದರೂ, ಈ ಕುರಿತು ಯಾವುದೇ ದೃಢೀಕರಣವನ್ನು ಬಿಜೆಪಿ ನೀಡಿಲ್ಲ.

    ಅಲ್ಲದೇ, ದಿನ್‌ಹಟಾದ ಬರನಾಚಿನಾ ಎಂಬಲ್ಲಿನ ಮತಗಟ್ಟೆಯಲ್ಲಿ ನಕಲಿ ಮತದಾನ ಮಾಡಿದ್ದಾರೆ ಎಂದು ಆರೋಪಿಸಿ, ಮತದಾರರು ಆಕ್ರೋಶ ವ್ಯಕ್ತಪಡಿಸಿ ಮತಪೆಟ್ಟಿಗೆಗೆ ಬೆಂಕಿ ಹಚ್ಚಿದ್ದಾರೆ. ಪಂಚಾಯತ್​ ಚುನಾವಣೆಗೆ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಸುಮಾರು 5.67 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ. ಆದರೆ, ಚುನಾವಣೆ ಆರಂಭವಾದ ಬೆನ್ನಲ್ಲೇ ರಾಜ್ಯಾದ್ಯಂತ ಹಿಂಸಾಚಾರ ನಡೆದಿದ್ದು, ಪಂಚಾಯತ್​ ಚುನಾವಣೆ ವೇಳೆ ನಡೆದ ಹಿಂಸಾಚಾರಕ್ಕೆ ಈಗಾಗಲೇ 9 ಜನರು ಮೃತಪಟ್ಟಿದ್ದಾರೆ.(ಏಜೆನ್ಸೀಸ್​​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts