ಅಶ್ಲೀಲತೆ, ಎಲ್ಲೆಂದರಲ್ಲಿ ಬಿದ್ದಿರೋ ಕಾಂಡೋಮ್​ಗಳು​… ರಾಯಚೂರಿನ ರಂಗಮಂದಿರವೀಗ ಲವರ್ಸ್​ ಹಾಟ್​ಸ್ಪಾಟ್

Rangamandira
Published on

ರಾಯಚೂರು: ಮಕ್ಕಳನ್ನು ಶಾಲಾ-ಕಾಲೇಜಿಗೆ ಕಳುಹಿಸಿ ಸುಮ್ಮನಾಗುವ ಪೋಷಕರು ಈ ಸ್ಟೋರಿಯನ್ನೊಮ್ಮೆ ಓದಲೇಬೇಕು. ಮಕ್ಕಳನ್ನು ಓದಲು ಕಳುಹಿಸಿದರೆ ಸಾಲದು, ಅವರ ಮೇಲೆ ಒಂದು ನಿಗಾ ಇಟ್ಟಿರಬೇಕು. ಇಲ್ಲವಾದಲ್ಲಿ ದಾರಿ ತಪ್ಪುವ ಸಾಧ್ಯತೆ ಇರುತ್ತದೆ. ಇದಕ್ಕೆ ತಾಜಾ ನಿದರ್ಶನವೇ ಈ ಒಂದು ಘಟನೆ.

ರಾಯಚೂರಿನ ಈ ಸ್ಥಳ ಅಪ್ರಾಪ್ತ ಪ್ರೇಮಿಗಳ ಹಾಟ್​ಸ್ಪಾಟ್ ಆಗಿ ಮಾರ್ಪಟ್ಟಿದೆ. ಕಲಾವಿದರ ಬಾಳಿಗೆ ಬೆಳಕಾಗಬೇಕಿದ್ದ ರಂಗಮಂದಿರವೀಗ ಪ್ರೇಮ ಮಂದಿರವಾಗಿದೆ. ಅಪ್ರಾಪ್ತರ ಲವ್ ಅಡ್ಡ ಆಗಿ ಬದಲಾಗಿದೆ.

ಹೌದು, ರಾಯಚೂರಿನ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರ ಇದೀಗ ಅನೈತಿಕ ತಾಣವಾಗಿ ಬದಲಾಗಿದೆ. ರಂಗಮಂದಿರದ ಪಕ್ಕದಲ್ಲೇ ಸಾರ್ವಜನಿಕ ಪಾರ್ಕ್ ಇರುವುದರಿಂದ ಯಾರ ಭಯವಿಲ್ಲದೇ ಚುಂಬಿಸುತ್ತಾ, ಅಶ್ಲೀಲವಾಗಿ ವರ್ತಿಸುವುದು ಸಾಮಾನ್ಯವಾಗುತ್ತಿದೆ. ಶಾಲಾ-ಕಾಲೇಜಿಗೆ ಬರುವ ಅಪ್ರಾಪ್ತರ ಅನೈತಿಕ ಚಟುವಟಿಕೆಗಳನ್ನು ಸಾರ್ವಜನಿಕರು ತಲೆ ತಗ್ಗಿಸಿ ಹೋಗುವಂತಾಗಿದೆ.

ರಂಗಮಂದಿರದ ಆವರಣದಲ್ಲಿ ಎಲ್ಲೆಂದರಲ್ಲಿ ಕಾಂಡೋಮ್​ಗಳು ಬಿದ್ದಿವೆ. ಅಲ್ಲದೆ, ಎಣ್ಣೆ ಬಾಟಲ್​ಗಳು ಮತ್ತು ಸಿಗರೇಟ್​ ಪ್ಯಾಕ್​ಗಳು ರಾಶಿಯೇ ಬಿದ್ದಿದ್ದು, ಇಡೀ ರಂಗಮಂದಿರ ಕೊಳಕು ಪ್ರದೇಶವಾಗಿ ಮಾರ್ಪಾಡಾಗಿದೆ. ಹಗಲಲ್ಲಿ ಪ್ರೇಮಿಗಳ ಹಾಟ್ ಸ್ಪಾಟ್ ಆಗುವ ಈ ರಂಗಮಂದಿರ ರಾತ್ರಿಯಾದ್ರೆ ಕುಡುಕರ ಅಡ್ಡೆಯಾಗುತ್ತದೆ.

ರಂಗಮಂದಿರದಿಂದ ಕೆಲವೇ ದೂರದಲ್ಲಿ ಪೊಲೀಸ್ ಠಾಣೆ ಇದ್ದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ. ಹಗಲು-ರಾತ್ರಿ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಸ್ಥಳೀಯರು ಒತ್ತಾಯ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net