ಸಣ್ಣ ಎಡವಟ್ಟಿನಿಂದ ಫಲವತ್ತಾದ ಬೆಳೆ ಒಣಗಿ ಹೋಯ್ತು! ದ್ರಾಕ್ಷಿ ಬೆಳೆ ಹಾಳಾಗಿದ್ದಕ್ಕೆ ಮನನೊಂದ ರೈತನಿಂದ ವಿಷ ಸೇವನೆ

ರೈತ
Published on

ವಿಜಯಪುರ: ಆತ ಕಷ್ಟ ಪಟ್ಟು, ಬೆವರು ಹರಿ ಬೆಳೆ ಬೆಳೆದಿದ್ದು. ಫಸಲು ಚೆನ್ನಾಗಿಯೇ ಬಂದಿತ್ತು. ಆದರೆ ಫಲವತ್ತಾದ ಬೆಳೆ ರೈತನ ಸಣ್ಣ ಎಡವಟ್ಟಿನಿಂದ ಸುಟ್ಟು ಕರಕಲಾದಂತಾಗಿದೆ. ಇದೀಗ ತಾನು ಬೆಳೆದಿದ್ದ ಬೆಳೆಯೆಲ್ಲಾ ಹಾಳಾಗಿ ಹೋಗಿದೆ ಎಂದು ಮನನೊಂದ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೋಹರ ಆಯತವಾಡ (55) ಆತ್ಮಹತ್ಯೆಗೆ ಶರಣಾದ ರೈತ.

ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಾಬಾನಗರದಲ್ಲಿ ರೈತ ಮನೋಹರ ಆಯತವಾಡಿ ತನ್ನ ತೋಟದ ಮನೆಯಲ್ಲಿ ವಿಷ ಸೇವಿಸಿದ್ದಾರೆ. ರೈತ ಮನೋಹರ ಆಯತವಾಡಿ, ದ್ರಾಕ್ಷಿ ಬೆಳಗೆ ಸಿಂಪಡೆಣೆ ಮಾಡಲೆಂದು ಔಷಧ ತಂದಿದ್ದರು. ಎಡವಟ್ಟಾಗಿರುವುದ ಇಲ್ಲೇ. ಗೊಂದಲಕ್ಕೊಳಗಾಗಿ ತಪ್ಪು ಔಷಧ ಸಿಂಪರಣೆ ಮಾಡಿದ್ದಾರೆ. ಪರಿಣಾಮ ಕೈಗೆ ಸೇರಬೇಕಾಗಿದ್ದ ಫಲವತ್ತಾದ ಬೆಳೆ ಒಣಗಿ ಹೋಗಿದೆ.

ರೈತ ಮನೋಹರ ಆಯತವಾಡಿ ದ್ರಾಕ್ಷಿ ಬೆಳೆಗಾಗಿ 5 ಲಕ್ಷ ರೂಪಾಯಿಗೂ ಅಧಿಕ ಮೊತ್ತ ಖರ್ಚು ಮಾಡಿದ್ದ. ದ್ರಾಕ್ಷಿ ಫಸಲು ಒಣಗಿ ಹೋಗಿದ್ದ ಕಾರಣ ಮನೋಹರ ಆಯತವಾಡಿ ತೀವ್ರವಾಗಿ ನೊಂದಿದ್ದರು. ಹೀಗಾಗಿ ದ್ರಾಕ್ಷಿ ತೋಟದ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣ ತಿಕೋಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net